September 6, 2026
ತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿ

ಬಳ್ಳಮಂಜ ಬ್ರಹ್ಮಕಲಶೋತ್ಸವ-ಶ್ರೀ ಅನಂತ ಮತ್ತು ಶ್ರೀ ಈಶ್ವರ ದೇವರ ಬ್ರಹ್ಮಕಲಶಾಭೀಷೇಕ-ಬ್ರಹ್ಮರಥೋತ್ಸವ

ಬಳ್ಳಮಂಜ: ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮ ಕಲಶಾಭಿಷೇಕ ಹಾಗೂ ಮಹಾರಥೋತ್ಸವ ಏ.5 ರಂದು ನಡೆಯಿತು.

ಪೂರ್ವಾಹ್ನ ಗಂಟೆ 6 ರಿಂದ ಬ್ರಹ್ಮಕಲಶಾಭಿಷೇಕ ಪ್ರಾರಂಭ, 09-30ರಿಂದ 10ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಅನಂತ ಮತ್ತು ಶ್ರೀ ಈಶ್ವರ ದೇವರ ಸನ್ನಿಧಾನಗಳಲ್ಲಿ ಬ್ರಹ್ಮಕಲಶಾಭಿಷೇಕ, ನ್ಯಾಸಪೂಜೆ, ಮಹಾಪೂಜೆ, ರಥಕಲಶ, ಬಲಿಹೊರಟು, ಪಿಲಿಚಾಮುಂಡಿ ದೈವದ ಭೇಟಿಪೂರ್ವಕ ನೂತನ ಬ್ರಹ್ಮರಥದಲ್ಲಿ ಶ್ರೀದೇವರ ಪ್ರಥಮ ಬ್ರಹ್ಮರಥೋತ್ಸವ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ.

ಸಾಯಂಕಾಲ 6 ರಿಂದ ಕಾರ್ತಿಕ ಪೂಜೆ, ಶ್ರೀ ಭೂತಬಲಿ ಉತ್ಸವ, ದರ್ಶನಬಲಿ, ರಾಜಾಂಗಣದ ಪ್ರಸಾದ, ಪಿಲಿಚಾಮುಂಡಿ ದೈವಕ್ಕೆ ಬೂಳ್ಯ ಹಾಗೂ ಸಂಜೆ 6ರಿಂದ 7ರ ತನಕ ಪುಂಜಾಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರಗಿತು. ಕ್ಷೇತ್ರದ ತಂತ್ರಗಳಾದ ಬ್ರಹ್ಮಶ್ರೀ ದೇರೆಬೈಲು ಡಾ| ಶಿವಪ್ರಸಾದ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರ್ಷ ಸಂಪಿಗೆತ್ತಾಯ, ಬ್ರಹ್ಮ ಕಲಶ ಸಮಿತಿ ಅಧ್ಯಕ್ಷ ವಸಂತ ಮರಕಡ, ಉಪಾಧ್ಯಕ್ಷರಾದ ಪ್ರಮೋದ್ ಕುಮಾರ್, ಜಯಪ್ರಕಾಶ್ ಸಂಪಿಗೆತ್ತಾಯ, ವಸಂತಿ ಲಕ್ಷ್ಮಣ್,
ಸುಧೀರ್ ಕುಮಾರ್ ಶೆಟ್ಟಿ ಕೊರೊಟ್ಟು, ಅರ್ಚಕ ಲಕ್ಷ್ಮೀಶ ಶಗ್ರಿತ್ತಾಯ, ಡಾ. ಪಿ. ಅನಂತಕೃಷ್ಣ ಭಟ್ ಮಂಗಳೂರು, ಚಂದ್ರಕಾoತ್ ನಿಡ್ಡಾಜೆ, ಹೊನ್ನಪ್ಪ ಕುಲಾಲ್ ಮಾಣೂರು, ನಾರಾಯಣ ಪೂಜಾರಿ ಬಳ್ಳಮಂಜ, ಅವಿನಾಶ್ ಕುಲಾಲ್ ಮಾಣೂರು, ಗೋಪಾಲ ಪೂಜಾರಿ ಕೊಲಾಜೆ, ಪ್ರಶಾಂತ್ ಶೆಟ್ಟಿ ಮೂಡಯೂರು, ತುಳಸಿದಾಸ್ ಪೈ.,ಹೊರಕಾಣಿಕೆ ಸಂಚಾಲಕ ಕಮಲಾಕ್ಷ, ಛಾಯಾಚಿತ್ರ ಮತ್ತು ಮಾಧ್ಯಮ ಸಮಿತಿ ಹರ್ಷ ಸ್ಟುಡಿಯೊದ ಹರ್ಷ ಕುಲಾಲ್ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು ಮುತ್ತಿತರರು ಉಪಸ್ಥಿತರಿದ್ದರು.

Related posts

ಉಜಿರೆಯಲ್ಲಿ ಎಬಿವಿಪಿ ವತಿಯಿಂದ ಬೃಹತ್ ವಿಜಯ ಯಾತ್ರೆ

Suddi Udaya

ಕುವೆಟ್ಟು ಸ. ಉ. ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ ರವರಿಗೆ ‘ಮಕ್ಕಳ ಸ್ನೇಹಿ ಶಿಕ್ಷಕ’ ಪ್ರಶಸ್ತಿ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಅಳದಂಗಡಿ ಸಹಕಾರಿ ಸಂಘಕ್ಕೆ ಉತ್ತಮ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಶಿರ್ತಾಡಿ: ಸಾಯಿ ಎಂಟರ್ಪ್ರೈಸಸ್ ನಲ್ಲಿ 4 ನೇ ಹಂತದ ಲಕ್ಕಿ ಸ್ಕೀಮ್: 15 ಸದಸ್ಯರನ್ನು ಸೇರಿಸಿದ ಸದಸ್ಯರಿಗೆ ಸ್ಕೀಮ್ ಕಾರ್ಡ್ ಉಚಿತ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘಕ್ಕೆ ರೂ.ಒಂದು ಲಕ್ಷ ದೇಣಿಗೆ

Suddi Udaya

ತಾಲೂಕಿನಲ್ಲಿ ಹದಗೆಟ್ಟಿರುವ ರಸ್ತೆ ಗುಂಡಿ ಮುಚ್ಚಲು ಗುತ್ತಿಗೆದಾರರೇ ಹಿಂದೇಟು: ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ವೈರಲ್

Suddi Udaya
error: Content is protected !!