September 6, 2026
ಅಭಿನಂದನೆಗ್ರಾಮಾಂತರ ಸುದ್ದಿವರದಿ

ಎ.28 – ಮೇ1: ಮರೋಡಿ ಪೊಸರಡ್ಕ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ ಸಂಭ್ರಮ,ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರಿಂದ ಆಮಂತ್ರಣ ಪತ್ರಿಕೆ ಬಿಡುಗಡೆಶ್ರೀ ದೈವ,ಶ್ರೀ ಕೊಡಮಣಿತ್ತಾಯ ,ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿ

ಮರೋಡಿ: ದೈವ,ಶ್ರೀ ಕೊಡಮಣಿತ್ತಾಯ,ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿ ಮರೋಡಿ ಪೊಸರಡ್ಕ ಇಲ್ಲಿನ ಬ್ರಹ್ಮಕುಂಭಾಭಿಷೇಕ ಸಂಭ್ರಮವು ಎ 28ರಿಂದ ಮೇ 1ರವರೆಗೆ ನಡೆಯಲಿದ್ದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಪೊಸರಡ್ಕ ಕ್ಷೇತ್ರದ ಗತವೈಭವ ಪುನರ್ ನಡೆಯಲಿದೆ. ಈ ಕ್ಷೇತ್ರ ಅತ್ಯಂತ ಕಾರಣೀಕ ಕ್ಷೇತ್ರಗಳೊಂದು.ಕಾರ್ಯಕ್ರಮ ಅತ್ಯಂತ ವೈಭವವಾಗಿ ನಡೆಯಲಿ ಎಂದರು.

ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್ ಮಾತನಾಡಿ ಪೊಸರಡ್ಕ ಕ್ಷೇತ್ರದ ಬ್ರಹ್ಮಕುಂಭಾಭಿಷೇಕ ಅತ್ಯಂತ ವೈಭವೋಪೇತವಾಗಿ ನಡೆಯಲಿದೆ.‌ಊರ ಪರವೂರ ಭಕ್ತರ ಸಹಕಾರ ಅದ್ಬುತವಾಗಿದೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಜಯವರ್ಮ ಬುಣ್ಣು,ಗೌರವಾಧ್ಯಕ್ಷರಾದ ರಾಜೇಂದ್ರ ಬಳ್ಳಾಳ್,ಹೇಮರಾಜ್ ಕೆ,ಬ್ರಹ್ಮಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷರಾದ ಎಂ.ಎಸ್ ಪೂಜಾರಿ,ನಾರಾಯಣ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್,ಆಡಳಿತ ಮಂಡಳಿ ಸಮಿತಿ ಸದಸ್ಯರಾದ ರಮೇಶ್ ಬಲಂತ್ಯರೊಟ್ಟು,ಪ್ರಮುಖರಾದ ನಿಖಿಲ್ ಬುಣ್ಣು,ಜಿತೇಶ್ ಜೈನ್ ಹರಂಬೆಟ್ಟು ಗುತ್ತು, ಸುಫಲಾ ಟೀಚರ್,ವಿಶು ಕುಮಾರ್ ಜೈನ್ ಪಾರೊಟ್ಟು,ಸುಂದರ ಕೋಟ್ಯಾನ್,ಆನಂದ ಶೆಟ್ಟಿ, ರವಿರಾಜ್ ಬಳ್ಳಾಲ್,ದಿವಾಕರ ಹೆಗ್ಡೆ,ರಾಮಣ್ಣ ಪೂಜಾರಿ,ಸುರೇಂದ್ರ ಬಳ್ಳಾಲ್,ಪ್ರಶಾಂತ್ ಮಚ್ಚಿನ ಮೊದಲಾದವರು,ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಆಡಳಿತಿ ಸಮಿತಿ ಕಾರ್ಯದರ್ಶಿ ಆದಿತ್ಯ ಪಿ.ಕೆ ಸ್ವಾಗತಿಸಿ,ವಂದಿಸಿದರು.

Related posts

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಹಿಂದೂ ಧಾರ್ಮಿಕ ಸೇವಾ ಸಮಿತಿ, ಕನ್ಯಾಡಿ ಯವರಿಂದ ರೂ. 25 ಸಾವಿರ ದೇಣಿಗೆ

Suddi Udaya

ಚಿನ್ನವನ್ನು ತೊಳೆದುಕೊಡುವುದಾಗಿ ಹೇಳಿದಾತ ಸರದೊಂದಿಗೆ ಪರಾರಿ

Suddi Udaya

ನಡ – ಕನ್ಯಾಡಿ ಶಕ್ತಿ ಕೇಂದ್ರ ಕಾರ್ಯಾಗಾರ

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ಪದಗ್ರಹಣ ಸಮಾರಂಭದಲ್ಲಿ ಧರ್ಮಸ್ಥಳದ ಸ್ನೇಕ್ ಪ್ರಕಾಶ್ ಶೆಟ್ಟಿ ರಿಗೆ ಸನ್ಮಾನ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜಾತ್ರಾಮಹೋತ್ಸವದ ಸಮಾಲೋಚನಾ ಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಕೊನೆಗೊಳ್ಳಲು ಕೊಲ್ಲೂರು ಹಾಗೂ ಕದ್ರಿ ದೇವಸ್ಥಾನದಿಂದ ಧಮ೯ ಸಂರಕ್ಷಣಾ ಯಾತ್ರೆ

Suddi Udaya
error: Content is protected !!