September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಕ್ರೈಸ್ತ ಶಿಕ್ಷಣ ದಿನ

ಉಜಿರೆ: ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಶಿಕ್ಷಣ ಇಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಕಲಿಯಲು ಬೇಕಾದಷ್ಟು ಇದೆ. ಶಿಕ್ಷಣ ಯಾವತ್ತೂ ಮುಗಿಯುವುದಿಲ್ಲ ಎಂದು ಪತ್ರಿಕಾ ವರದಿಗಾರ ಹೆರಾಲ್ಡ್ ಪಿಂಟೊ ಹೇಳಿದರು.

ಅವರು ಫೆ. 23ರಂದು ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಕ್ರೈಸ್ತ ಧರ್ಮ ಶಿಕ್ಷಣ ದಿನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅವರವರ ಪೋಷಕರು ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ದುಡಿಯುತ್ತಾರೆ. ಮಕ್ಕಳಿಗೆ ಶಿಕ್ಷಣ ಪಡೆಯುವುದೇ ಮುಖ್ಯ ಹೊರತು ಬೇರೆ ಏನು ಕೆಲಸ ಇಲ್ಲ. ಕೆಟ್ಟ ಕೆಲಸಗಳನ್ನು ಮಾಡದೆ, ಪರರನ್ನು ಗೌರವಿಸುವುದು ಪ್ರೀತಿಸುವ ಗುಣ ಹೊಂದಿರಬೇಕು. ನಮ್ಮ ಸಹಪಾಠಿಗಳು ವಿದ್ಯಾಭ್ಯಾಸದಲ್ಲಿ ದೂರ ಇದ್ದರೆ ಅಂತವರಿಗೆ ಸಹಾಯ ಮಾಡಬೇಕು. ಅದೇ ದೊಡ್ಡ ಸೇವೆ. ಮೊದಲೆಲ್ಲ ಮಕ್ಕಳು ರಜೆಯಲ್ಲಿ ಕೆಲಸಕ್ಕೆ ಹೋಗಿ ದುಡಿಯುತ್ತಿದ್ದರು ಈಗ ಮಕ್ಕಳು ದುಡಿಯಲು ಅವಕಾಶ ಇಲ್ಲ ಅದುದರಿಂದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವಿಸಬೇಕು. ಅನಗತ್ಯ ಮೊಬೈಲ್, ಟಿವಿಯಿಂದ ದೂರವಿರಬೇಕು ಎಂದು ಹೇಳಿದರು.

ಚರ್ಚ್ ಪ್ರಧಾನ ಧರ್ಮಗುರು ಅಬೆಲ್ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಅನುಗ್ರಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶುಭ ಹಾರೈಸಿದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯ ಕ್ಷ ಆಂಟೋನಿ ಫೆರ್ನಾಂಡಿಸ್, ಉಜಿರೆ ಸಿಸ್ಟರ್ ಆಫ್ ಮೇರಿ ಇಮ್ಯಕುಲೆಟ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ನ್ಯಾನ್ಸಿ ಡಯಸ್, ಆಯೋಗದ ಸಂಚಾಲಕಿ ಲವೀನಾ ಫೆರ್ನಾಂಡೀಸ್, ಶಿಕ್ಷಣ ಸಂಯೋಜಕ ಗ್ರೆಗ್ ಮೆಲ್ಸ್ಟಾರ್, ಬಹುಮಾನಗಳ ಪ್ರಾಯೋಜಕ ಅನಿಲ್ ಡಿಸೋಜಾ ಉಪಸ್ಥಿತರಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಣದಲ್ಲಿ ಪ್ರಥಮ, ದ್ವೀತಿಯ ಸ್ಥಾನ ಮತ್ತು ಪೂರ್ಣ ಹಾಜರಾತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹೆಜಲ್ ಜೀಶ ಪಿಂಟೊ ಕಾರ್ಯಕ್ರಮದ ನಿರೂಪಿಸಿದರು. ಶರಣ್ ಡಿಸೋಜಾ ಸ್ವಾಗತಿಸಿ, ಸಂಯೋಜಕ ಗ್ರೆಗ್ ವಂದಿಸಿದರು. ದನ ಸಹಾಯ ಮಾಡಿದವರಿಗೆ ಗೌರವಿಸಲಾಯಿತು.

Related posts

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ: ವಿವಿಧ ಡೊಳ್ಳು ಕುಣಿತ, ಕುಣಿತಾ ಭಜನೆ ಹಾಗೂ ಸಾವಿರಾರು ಭಕ್ತರ ಕೂಡುವಿಕೆಯೊಂದಿಗೆ ವೈಭವದ ಹಸಿರುವಾಣಿ ಮೆರವಣಿಗೆ

Suddi Udaya

ಮುಂಡಾಜೆ ವಲಯದ ಚಾರ್ಮಾಡಿ-ಬಿ ಕಾರ್ಯಕ್ಷೇತ್ರದಲ್ಲಿ ನೂತನ ಸರಸ್ವತಿ ಸ್ವಸಹಾಯ ಸಂಘ ಉದ್ಘಾಟನೆ

Suddi Udaya

ಕೊಕ್ಕಡ ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ

Suddi Udaya

ಸಿದ್ಧಕಟ್ಟೆಯಲ್ಲಿ ರಸ್ತೆ ದಾಟುತ್ತಿದ್ದ ಗುಂಡೂರಿ ಗ್ರಾಮದ ಮಹಿಳೆಗೆ ಬೈಕ್ ಡಿಕ್ಕಿ; ಗಂಭೀರ ಗಾಯಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲು

Suddi Udaya

ವೇಣೂರು: ಕೋಮ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದ ಶಿಲ್ಪ ಸಾವು: ಮನೆಯವರ ಪ್ರತಿಭಟನೆ

Suddi Udaya

ಅಳದಂಗಡಿ ವರಮಹಾಲಕ್ಮಿ ಪೂಜಾ ಸಮಿತಿಯಿಂದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya
error: Content is protected !!