September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಮಹಿಳೆಯರಿಗೆ ಉಳಿತಾಯ ಮತ್ತು ಸ್ವ – ಉದ್ಯೋಗ ಮಾಹಿತಿ ಕಾರ್ಯಾಗಾರ

ಮುಂಡಾಜೆ: ‘ನೇತ್ರಾವತಿ’ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಮುಂಡಾಜೆ ಹಾಗೂ ಎಸ್. ಡಿ. ಎಂ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಎ. 11 ರಂದು ಗ್ರಾಮದ ನೆಯ್ಯಾರು ಇಲ್ಲಿ ‘ಉಳಿತಾಯ ಮತ್ತು ಸ್ವ – ಉದ್ಯೋಗ’ ಶೀರ್ಷಿಕೆಯಡಿಯಲ್ಲಿ ಸ್ವ- ಉದ್ಯೋಗ ಹಾಗೂ ಉಳಿತಾಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿ, ಸ್ವ – ಉದ್ಯೋಗಿ ಹಾಗೂ ಕಡಿರುದ್ಯಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷೆ ಜ್ಯೋತಿ ಮಾತನಾಡಿ ಉಳಿತಾಯದ ಮಹತ್ವ, ಸ್ವ – ಉದ್ಯೋಗ ಆರಂಭದಲ್ಲಿ ಎದುರಾಗುವ ಸವಾಲುಗಳು, ಸ್ವ – ಉದ್ಯೋಗದಿಂದಾಗುವ ಅನುಕೂಲಗಳು ಹಾಗೂ ಅದರಿಂದ ಸಿಗುವ ಆರ್ಥಿಕ ಸ್ವಾತಂತ್ರ್ಯ ಹಾಗೂ ಭದ್ರತೆಯ ಬಗ್ಗೆ ಸ್ವಂತ ಅನುಭವದ ಉದಾಹರಣೆಯ ಮೂಲಕ ಮಹಿಳೆಯರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭವ್ಯ ವಹಿಸಿದ್ದರು. LCRP ಪುಷ್ಪಾವತಿ ಉಪಸ್ಥಿತರಿದ್ದರು.

ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ್, ಕೆ. ಭರತ್, ನಿತಿನ್ ಆರ್, ವಂದಿತಾ ಪ್ರಭು ಟಿ, ವಿಜೇತ್, ಯಶ್ಮಿತಾ ಎ ಕಾರ್ಯಕ್ರಮವನ್ನು ಆಯೋಜಿಸಿ, ನಡೆಸಿಕೊಟ್ಟರು.

Related posts

ಫೆ.18: ಕೊಕ್ಕಡ ಕೇಸರಿ ಗೆಳೆಯರ ಬಳಗದ ಆಶ್ರಯದಲ್ಲಿ ಕ್ರಿಕೆಟ್ ಪಂದ್ಯಾಟ ಹಾಗೂ ಅಯೋಧ್ಯ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ

Suddi Udaya

ಸೆ.22-ಅ.2: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Suddi Udaya

ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ದೀಪ, ಪ್ರಸಾದ ಸೇರಿ ಎಲ್ಲಾ ಸೇವೆಗಳಿಗೆ ನಂದಿನಿ ತುಪ್ಪ ಕಡ್ಡಾಯ: ಸರಕಾರದಿಂದ ಆದೇಶ

Suddi Udaya

ಉಜ್ವಲ ಯೋಜನೆಯ ಮಹಿಳೆಯರ ಮೇಲೂ, “ಬೆಲೆ ಏರಿಕೆಯ ಬರೆ ಎಳೆದ” ಕೇಂದ್ರ ಸರ್ಕಾರ: ರಕ್ಷಿತ್ ಶಿವರಾಂ

Suddi Udaya

ಚಾತುರ್ಮಾಸ್ಯ ವೃತಾಚಾರಣೆ, ಬೆಳ್ತಂಗಡಿ ಪತ್ರಕರ್ತರ ಸಂಘದಿಂದ ಮಹಾಮಂಡಲೇಶ್ವರ ಕನ್ಯಾಡಿ ಶ್ರೀಗಳ ಭೇಟಿ

Suddi Udaya

ಆ.21 : ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!