September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಲಾಯಿಲದ ಗ್ಯಾಸ್ ಕಚೇರಿಯೊಂದರಲ್ಲಿ ಮ್ಯಾನೇಜರ್ – ಗ್ರಾಹಕರ ನಡುವೆ ಗಲಾಟೆ

ಬೆಳ್ತಂಗಡಿ: ಗ್ಯಾಸ್ ಕಚೇರಿಯಲ್ಲಿ ನಾನ ರೀತಿಯ ಗ್ಯಾಸ್ ಸಮಸ್ಯೆಗಳಿಂದ ಮ್ಯಾನೇಜರ್ ಮತ್ತು ಗ್ರಾಹಕರ ನಡುವೆ ಗಲಾಟೆ ನಡೆದಿದೆ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸುವಂತಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿರುವ ಶ್ರೀ ಮಂಜು ಇಂಡಿಯನ್ ಗ್ಯಾಸ್ ಕಚೇರಿಯಲ್ಲಿ ಗ್ಯಾಸ್ ನೀಡಲು ಸರಿಯಾದ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಗಲಾಟೆ ನಡೆಯುತ್ತಿದ್ದು, ಮತ್ತೆ ಏ.13 ರಂದು ಗ್ರಾಹಕರ ಸಂಖ್ಯೆ ಜಾಸ್ತಿಯಾಗಿ ಕಚೇರಿಯ ಸಿಬ್ಬಂದಿಗಳು ಸರಿಯಾಗಿ ವ್ಯವಹಾರ ನಡೆಸದಿದ್ದಾಗ ಗಲಾಟೆ ಜಾಸ್ತಿಯಾಗಿದೆ. ತಡವಾಗಿ ಗ್ಯಾಸ್ ಮ್ಯಾನೇಜರ್ ಶಿವಕುಮಾರ್ ಕಚೇರಿ ಬಂದಾಗ ಕೂಡ ಗಲಾಟೆ ನಡೆಯುತ್ತಿದ್ದಾಗ 112 ಗೆ ಕರೆ ಮಾಡಿ ಗ್ರಾಹಕರು ದೂರು ನೀಡಿದಾಗ ಬೆಳ್ತಂಗಡಿ ಪೊಲೀಸರು ಕೂಡ ಆಗಮಿಸಿ ಜನರನ್ನು ಹೊರಗಡೆ ಕಳುಹಿಸಿ ಗಲಾಟೆ ನಿಲ್ಲಿಸಿದ್ದಾರೆ.

ಕೆಲ ಗ್ರಾಹಕರ ಗ್ಯಾಸ್ ಬುಕ್ ಮಾಡಿದ್ದರೂ ಬೇರೆಯವರು ಅದನ್ನು ಪಡೆದುಕೊಂಡಿರುವ ಆರೋಪ ಕೂಡ ಕೇಳಿಬಂದಿದೆ‌. ಕೆಲವರು ಬುಕ್ ಮಾಡಿದ್ರೂ ಗ್ಯಾಸ್ ನೀಡುವುದಿಲ್ಲ ಎಂದು ಗ್ರಾಹಕರ ಆರೋಪ ಮಾಡುತ್ತಿದ್ದಾರೆ.

Related posts

ಶಿಶಿಲ: ನಾಗನಡ್ಕ ನಿವಾಸಿ ವ್ಯಾಸ ನಿಧನ

Suddi Udaya

ಕೊಕ್ಕಡ: ಬೈಕ್‌ಗಳ ಮುಖಾಮುಖಿ ಡಿಕ್ಕಿ: ಮೂವರಿಗೆ ಗಾಯ

Suddi Udaya

ಗುರುವಾಯನಕೆರೆ ದೈವಾರಾಧಕರ ಮಹಾ ಸಮಾವೇಶದಲ್ಲಿ ಎಕ್ಸೆಲ್ ಕಲಾ ವೈಭವ

Suddi Udaya

ಕರೆಮಾಡಿದ ತಕ್ಷಣ ರೈತರ ಮನೆಬಾಗಿಲಿಗೆ ಬರಲಿದೆ ಪಶು ಸಂಜೀವಿನಿ

Suddi Udaya

ಮಡಂತ್ಯಾರು: ಕೆಎಸ್ಸಾರ್ಟಿಸಿ ಬಸ್ – ಬೈಕ್ ಅಪಘಾತ ಸವಾರ ಮೃತ್ಯು

Suddi Udaya

ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ – ಕರ್ನಾಟಕ ರಾಜ್ಯ ತಂಡಕ್ಕೆ ಲಾಸ್ಯ ಆಯ್ಕೆ

Suddi Udaya
error: Content is protected !!