September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ದಯಾ ವಿಶೇಷ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಎ.14ರಂದು ಆಚರಿಸಲಾಯಿತು. ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ನಡೆದ ಈ ಕಾರ್ಯಕ್ರಮವು ವಿಶೇಷ ಮಹತ್ವ ಪಡೆದುಕೊಂಡಿತು.

ಅಂಬೇಡ್ಕರ್ ಜಯಂತಿ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯದ ಪ್ರತೀಕವಾಗಿದೆ. ಅವರ ಸಂವಿಧಾನ ರಚನೆಯ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಹಕ್ಕು ಮತ್ತು ಗೌರವವನ್ನು ಖಚಿತಪಡಿಸಲಾಗಿದೆ.

 ಕರಕುಶಲ ಶಿಕ್ಷಕಿ ಹೇಮಾವತಿ ಅವರು ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳ ಹಾಗೂ ಸಂವಿಧಾನ ರಚನೆಯ ಬಗ್ಗೆ ಮಾತನಾಡಿದರು. ಸಮಾಜದ ಹಿಂದುಳಿದ ವರ್ಗಗಳ ಹಕ್ಕಿಗಾಗಿ ನಿರಂತರ ಹೋರಾಟ ನಡೆಸಿದ ನಾಯಕತ್ವವನ್ನು ಅವರು ತೋರಿದರು. ಶಿಕ್ಷಣದ ಮೂಲಕ ವ್ಯಕ್ತಿಯ ಜೀವನದಲ್ಲಿ ಬದಲಾವಣೆ ತರಬಹುದು ಎಂಬುದನ್ನು ತಮ್ಮ ಜೀವನದ ಮೂಲಕ ಉದಾಹರಣೆಯಾಗಿ ಸ್ಥಾಪಿಸಿದರು. ಭಾರತದ ಸಂವಿಧಾನ ರಚನೆಯ ಮೂಲಕ ದೇಶಕ್ಕೆ ಬಲವಾದ ಕಾನೂನು ವ್ಯವಸ್ಥೆಯನ್ನು ನೀಡಿದ ಮಹಾನ್ ಚಿಂತಕ ಎಂಬ ಗೌರವ ಅವರಿಗೆ ಸೇರಿದೆ. ಅವರ ಆದರ್ಶಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ.

ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಯಿಂದ  ಆರಂಭಿಸಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಸಂವಿಧಾನ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ  ಉದ್ಘಾಟಿಸಿದರು.ನಂತರ ಎಲ್ಲರೂ ಸೇರಿ ಸಂವಿಧಾನ ಪೀಠಿಕೆಯನ್ನು ಪಠಿಸಿದರು.

 ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ದಿವ್ಯ ಟಿವಿ ಹಾಗೂ ಮಕ್ಕಳ ಪ್ರತಿನಿಧಿಗಳಾದ ಪವನ್ ಮತ್ತು ರೆನ್ಸನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು. ವಿಶೇಷ ಶಿಕ್ಷಕಿ ಪ್ರಿಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಉಜಿರೆ : ಮುದ್ರಣ ಯಂತ್ರದ ಉದ್ಘಾಟನೆ

Suddi Udaya

ಕುಣಿತ ಭಜನಾ ಸ್ಪರ್ಧೆ: ಉಜಿರೆ ಛತ್ರಪತಿ ಶಿವಾಜಿ ಕುಣಿತ ಭಜನಾ ಮಂಡಳಿ ಪ್ರಥಮ

Suddi Udaya

ಉಜಿರೆ: ಶ್ರೀ ದೇಶಿಕೇಂದ್ರ ಎಜುಕೇಶನ್ ಟ್ರಸ್ಟ್ ಇದರ ನೂತನ ಒಳ ಕ್ರೀಡಾಂಗಣ ಪ್ರಾರಂಭೋತ್ಸವ ಮಕ್ಕಳ ಭವಿಷ್ಯಕ್ಕೆ ಆಧುನಿಕ ಶಿಕ್ಷಣ ಅಗತ್ಯ: ಶರತ್ ಕೃಷ್ಣ ಪಡ್ವೆಟ್ನಾಯ

Suddi Udaya

ಬೆಳ್ತಂಗಡಿ: ಎಸ್.ಐ.ಟಿ. ಪೊಲೀಸ್ ಠಾಣೆಗೆ ದೂರುದಾರ ಜಯಂತ್ ಟಿ. ಭೇಟಿ

Suddi Udaya

ಬೆಳ್ತಂಗಡಿ ವಕೀಲರ ಸಂಘದಿಂದ ಸಚಿವ ಸತೀಶ್ ಜಾರಕಿಹೊಳಿ ಭೇಟಿ: ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆಗೆ ಆಹ್ವಾನ

Suddi Udaya

ಮಲ್ಪೆ ಬಂದರಿನಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ , ಹಲ್ಲೆ ನಡೆಸಿರುವುದು ಅಮಾನವೀಯವಾದುದು: ಶೇಖರ್ ಲಾಯಿಲ

Suddi Udaya
error: Content is protected !!