ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸುದೇಮುಗೇರು ಅಂಗನವಾಡಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರ135ನೇ ಜನ್ಮಾದಿನಾಚರಣೆ: ಕ್ರೀಡಾ ಕ್ಷೇತ್ರದ ಸಾಧಕ ಸಂಜಯ್‌ಗೆ ಗೌರವಾರ್ಪಣೆ

ಬೆಳ್ತಂಗಡಿ: ಬೆಳ್ತಂಗಡಿ ಕಸಬ ಗ್ರಾಮದ ೮ನೇ ವಾರ್ಡಿನ ಸುದೇಮುಗೇರು ಅಂಗನವಾಡಿ ಕೇಂದ್ರದ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ 135ನೇ ವರ್ಷದ ಜನ್ಮದಿನಾಚರಣೆಯನ್ನು ಸುದೇಮಗೇರು ಹೊಸ ಅಂಗನವಾಡಿ ಕಟ್ಟಡದಲ್ಲಿ ಎ.14ರಂದು ಪ್ರಥಮವಾಗಿ ಆಚರಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಸುದ್ದಿ ಉದಯ ವಾರ ಪತ್ರಿಕೆಯ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರಾದ ಬಿ.ಎಸ್ ಕುಲಾಲ್ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಡಾ. ಬಿ.ಆರ್ ಅಂಬೇಡ್ಕರ್ ಅವರು ಭಾರತ ದೇಶಕ್ಕೆ

ಉತ್ತಮವಾದ ಸಂವಿಧಾನವನ್ನು ನೀಡಿದ್ದಾರೆ. ತನ್ನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿ ದೇಶದ ಪ್ರಥಮ ಕಾನೂನು ಸಚಿವರಾಗಿ ಕಾರ್ಯನಿರ್ವಹಿಸಿದ ಅಂಬೇಡ್ಕರ್ ಅವರ ಜೀವನ ನಮಗೆಲ್ಲ ಆದರ್ಶವಾಗಿದೆ. ಸುದೇಮುಗೇರು ಅಂಗನವಾಡಿಯಲ್ಲಿ ಇಂತಹ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರ ಮೂಲಕ ತಾಲೂಕಿಗೆ ಮಾದರಿ ಕಾರ್ಯಕ್ರಮವಾಗಿದೆ. ಮಕ್ಕಳ ಪ್ರತಿಭಾ ವಿಕಸನಕ್ಕೆ ವೇದಿಕೆ ಒದಗಿಸಿರುವುದು ಅಭಿನಂದನೀಯ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ನಿಕಟಪೂರ್ವ ಪ.ಪಂ. ಸದಸ್ಯ ಜಗದೀಶ್ ಡಿ. ಅವರು ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರನ್ನು ಇಡೀ ವಿಶ್ವವೇ ಕೊಂಡಾಡಿ ೧೩೫ನೇ ಅವರ ಜನ್ಮದಿನಾಚರಣೆಯನ್ನು ಆಚರಿಸುತ್ತಿದೆ. ಸಮಾಜದ ಪರಿವರ್ತನೆಯಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಅಂಗನವಾಡಿ ಅಧ್ಯಕ್ಷೆ ನಝ್‌ಮೀನ್, ಅನುಗ್ರಹ ಶಾಲಾ ಶಿಕ್ಷಕ ಗಣೇಶ್ ಸುದೆಮುಗೇರು, ಅಂಗನವಾಡಿ ಕೇಂದ್ರದ ಶಿಕ್ಷಕಿ ದಿವ್ಯಾಶೇಖರ್, ಸಹಾಯಕಿ ರೋಹಿಣಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಬ್ಬಡ್ಡಿ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸಾಧಕ ವಿದ್ಯಾರ್ಥಿ ಸುದೇಮುಗೇರಿನ ೯ನೇ ತರಗತಿ ವಿದ್ಯಾರ್ಥಿ ಸಂಜಯ್‌ನನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಭಿಕರಿಗೆ ರಸಪ್ರಶ್ನೆ (ಕ್ವಿಜ್)ಯನ್ನು ಏರ್ಪಡಿಸಿ ವಿಜೇತ ೩೦ ಮಂದಿಗೆ ಬಹುಮಾನ ವಿತರಿಸಲಾಯಿತು. ಕ್ವಿಜ್ ಕಾರ್ಯಕ್ರಮವನ್ನು ಶಿಕ್ಷಕ ಗಣೇಶ್ ಮತ್ತು ಅಶೋಕ್ ನಡೆಸಿಕೊಟ್ಟರು. ಕು| ಸಂಜನಾ ಇವರು ಪ್ರಾರ್ಥನೆ ಹಾಡಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಿಬ್ಬಂದಿ ಅಶೋಕ್ ಸುದೇಮುಗೇರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Related posts

ಎ.22: ಸಾವ್ಯದಲ್ಲಿ 12 ನೇ ವರ್ಷದ ಸಾಮೂಹಿಕ ಶ್ರೀ ಶನಿಪೂಜೆ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದ.ಕ. ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮ

Suddi Udaya

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

Suddi Udaya

ಪೆರಾಲ್ದರಕಟ್ಟೆ ಮಸ್ಜಿದ್‌ನಲ್ಲಿ ಮಾದಕ ವ್ಯಸನ ಮತ್ತು ಮದುವೆ ಅನಾಚಾರ ಸಾಮಾಜಿಕ ಪಿಡುಗಿನ ವಿರುದ್ದ ಜಾಗೃತಿ ಸಭೆ

Suddi Udaya

ಗರ್ಡಾಡಿ ಸೌಭಾಗ್ಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

Suddi Udaya

ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!