25.5 C
ಪುತ್ತೂರು, ಬೆಳ್ತಂಗಡಿ
September 18, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿಷೇದಿತ ಮಾದಕವಸ್ತು ಮಾರಾಟ ಯತ್ನ ಪ್ರಕರಣ: ಆರೋಪಿಗೆ ಶಿಕ್ಷೆ

ಬೆಳ್ತಂಗಡಿ: ಉಜಿರೆ ರಥಬೀದಿಯಲ್ಲಿ 8/3/2009 ರಂದು ಅಂದಾಜು 50,000/- ರೂ ಬೆಲೆಬಾಳುವ 1.500 ಕಿ.ಗ್ರಾಂ ತೂಕದ ನಿಷೇದಿತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ, ಬೆಳ್ತಂಗಡಿ ಠಾಣಾ ಅ.ಕ್ರ 60/09, ಕಲಂ: 8(ಸಿ) ಜೊತೆಗೆ 20(ಬಿ) ಎನ್.ಡಿ.ಪಿ.ಎಸ್. ಕಾಯ್ದೆಯಂತೆ ದಾಖಲಾಗಿದ್ದ ಪ್ರಕರಣದ ಆರೋಪಿ ಬೆಳ್ತಂಗಡಿ ಚಾರ್ಮಾಡಿ ನಿವಾಸಿ ಟಿ.ಇ ಜೋಸೆಫ್ (42) ಎಂಬಾತನಿಗೆ, ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಮಂಗಳೂರು ಇದರ ನ್ಯಾಯಧೀಶರಾದ ಬಸವರಾಜ್ ರವರು ದಿನಾಂಕ 10/04/2026 ರಂದು ಟಿ.ಇ ಜೋಸೆಫ್ (42) ರವರನ್ನು ದೋಷಿ ಎಂದು ಪರಿಗಣಿಸಿ, ದಿನಾಂಕ 16/04/26 ರಂದು NDPS ಕಾಯ್ದೆಯ ಸೆಕ್ಷನ್ 8(c) r/w ಸೆಕ್ಷನ್ 20(b)(ii)(B) ಅಡಿಯಲ್ಲಿ 5 ವರ್ಷಗಳ ಅವಧಿಗೆ ಕಠಿಣ ಜೈಲು ಶಿಕ್ಷೆ ಮತ್ತು ರೂ. 50,000/- ದಂಡವನ್ನು. ದಂಡವನ್ನು ಪಾವತಿಸಲು ವಿಫಲವಾದರೆ, ಅವರು 2 ತಿಂಗಳುಗಳ ಕಾಲ ಕಠಿಣ ಜೈಲು ಶಿಕ್ಷೆ. NDPS ಕಾಯ್ದೆಯ ಸೆಕ್ಷನ್ 32-B(f) ಅಡಿಯಲ್ಲಿ 1 ವರ್ಷದ ಅವಧಿಯ ಕಠಿಣ ಜೈಲು ಶಿಕ್ಷೆ ವಿಧಿಸಿರುತ್ತದೆ. ಪ್ರಕರಣದ ತನಿಖಾಧಿಕಾರಿಗಳಾಗಿದ್ದ ಬೆಳ್ತಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರಾಗಿದ್ದ ಬಿ.ಜಿ ಸುಬ್ಬಾಪುರ್ ಮಠ್ ರವರು ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದು, ಸರ್ಕಾರಿ ಅಭಿಯೋಜಕರಾಧ ಶ್ರೀಮತಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಸ್ತಾ ರವರು ಸಮರ್ಥವಾಗಿ ವಾದ ಮಂಡಿಸಿರುತ್ತಾರೆ.

Related posts

ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಹೃದಯಾಘಾತದಿಂದ ನಿಧನ

Suddi Udaya

ಕುದ್ರೋಳಿ‌ ಕ್ಷೇತ್ರದ ನಿರ್ಮಾತೃ ಬಿ.ಜನಾರ್ಧನ ಪೂಜಾರಿಯವರನ್ನು ಭೇಟಿ ಮಾಡಿದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ‌ ಸದಸ್ಯರು

Suddi Udaya

ಪೆರೋಡಿತ್ತಾಯಕಟ್ಟೆ ದ.ಕ.ಜಿ.ಪ.ಉ.ಪ್ರಾ. ಶಾಲೆಯಲ್ಲಿ ಮಕ್ಕಳ ಪೋಷಕರಿಗೆ ವಿಶೇಷ ತರಬೇತಿ ಶಿಬಿರ

Suddi Udaya

ಇಂದಬೆಟ್ಟು: ಅತಿಕ್ರಮಣ ತೆರವುಗೊಳಿಸಲು ತಹಶೀಲ್ದಾರ್ ಮಾಡಿದ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಹೈಕೋರ್ಟು

Suddi Udaya

ತಿಮರೋಡಿ ಮನೆಯಲ್ಲಿ ತಲವಾರು-ಬಂದೂಕು ಪತ್ತೆ ಪ್ರಕರಣ ಮಹೇಶ್ ಶೆಟ್ಟಿ ವಿಚಾರಣೆಗೆ ಹಾಜರಾಗಲು ಎರಡನೇ ನೋಟಿಸ್ ಜಾರಿ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸಚಿವ ಕೆ. ಗಂಗಾಧರ ಗೌಡ

Suddi Udaya
error: Content is protected !!