September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೆರಿಯ: 36ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರ ಸಂಪನ್ನ

ನೆರಿಯ: ಸೇವಾಭಾರತಿ, ಕನ್ಯಾಡಿ ಇದರ ಆಶ್ರಯದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ದುರ್ಗಾ ಮಾತೃ ಮಂಡಳಿ, ಕನ್ಯಾಡಿ ಇದರ ಸಹಕಾರದಲ್ಲಿ ಸಬಲಿನಿ ಯೋಜನೆಯಡಿ ಮಹಿಳೆಯರಿಗಾಗಿ 36ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಏ.16ರಂದು ನೆರಿಯದ ಬಯಲು ಬಸದಿಯ ಹತ್ತಿರ ಶಿಲ್ಲಿಯವರ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಮುಂಡಾಜೆ ಪ್ರಾ.ಕೃ.ಪ.ಸ.ಸಂಘ(ನಿ.), ಅಧ್ಯಕ್ಷ ಪ್ರಕಾಶ್ ನಾರಾಯಣ ಮಾತನಾಡಿ ಕಲಿತಂತ ವಿದ್ಯೆಯನ್ನು ಅರ್ಧಕ್ಕೆ ಕೈ ಬಿಡದೆ ಮುಂದುವರಿಸಿಕೊಂಡು ಹೋಗಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕನ್ಯಾಡಿ ಸೇವಾಭಾರತಿಯ ಖಜಾಂಚಿ ಎ. ಜೈರಾಜ್ ಸಾಲ್ಯಾನ್, ಟ್ರಸ್ಟಿ ಸ್ವರ್ಣಗೌರಿ, ಕನ್ಯಾಡಿ ಶ್ರೀ ದುರ್ಗಾಮಾತೃ ಮಂಡಳಿ ಅಧ್ಯಕ್ಷೆ ಮಮತಾ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಟ್ಟು 23 ಮಂದಿ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಕಾರ್ಯಕ್ರಮದಲ್ಲಿ ಟೈಲರಿಂಗ್ ತರಬೇತುದಾರೆ ಸಜಿತಾ ಎಲ್ಲರಿಗೂ ಶುಭಹಾರೈಸಿ ಸಂತಸ ವ್ಯಕ್ತಪಡಿಸಿದರು. ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದವರು ಸಜಿತಾ ರಿಗೆ ಗೌರವಧನವನ್ನು ನೀಡಿ ಸಹಕರಿಸಿದ್ದಾರೆ. ನಂತರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಗಿರಿಜಾ ಸ್ವಾಗತಿಸಿ, ಸೇವಾಭಾರತಿ ಡಾಕ್ಯುಮೆಂಟೇಶನ್ ಮೋನಿಟರಿಂಗ್ ಮತ್ತು ಇವ್ಯಾಲ್ಯೂಯೇಷನ್ ಕೋಆರ್ಡಿನೇಟರ್ ಸುಮ ಕಾರ್ಯಕ್ರಮ ನಿರೂಪಿಸಿ, ರಜನಿ ಧನ್ಯವಾದವಿತ್ತರು.

Related posts

ಬೆಳ್ತಂಗಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

Suddi Udaya

ಮುಂಡಾಜೆ ಪ. ಪೂ. ಕಾಲೇಜಿನಲ್ಲಿ ಪೋಷಕರ ಸಭೆ

Suddi Udaya

ತಣ್ಣೀರುಪಂತ: 7ನೇ ತರಗತಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ “ಜನ ವಿರೋಧಿ ನೀತಿ”ಗಳನ್ನು ಖಂಡಿಸಿ ನಾವೂರು ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೇಂಬರ್ ಅಳವಡಿಸಲು ಸಹಾಯಧನದ ಮಂಜೂರಾತಿ ಪತ್ರ ವಿತರಣೆ

Suddi Udaya

ವೇಣೂರು ಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವದ ಪ್ರಯುಕ್ತ ಅನ್ನಛತ್ರಕ್ಕೆ ಶಂಕುಸ್ಥಾಪನೆ

Suddi Udaya
error: Content is protected !!