September 17, 2026
ಅಪಘಾತಅಪರಾಧ ಸುದ್ದಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ನೇಣುಬಿಗಿದು ಯುವಕ ಆತ್ಮಹತ್ಯೆಗೆ ಶರಣು: ವಿಷಯ ತಿಳಿದು ತಂದೆ ಕೂಡ ಆತ್ಮಹತ್ಯೆ ಪ್ರಯತ್ನ

ಬೆಳ್ತಂಗಡಿ : ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯ ಚಾರ್ಮಾಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕೊಡಿಹಿತ್ತಿಲು ನಿವಾಸಿ ಬಾಬುಗೌಡ ಪುತ್ರ ಗಣೇಶ್(20) ಎಂಬಾತ ಎ.25 ರಂದು ಮಧ್ಯಾಹ್ನ 1:30 ಕ್ಕೆ ಮನೆಯ ಗುಡ್ಡದಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಂದೆ ಕೂಡ ಆತ್ಮಹತ್ಯೆಗೆ ಪ್ರಯತ್ನ: ಮನೆಯಲ್ಲಿ ಇಂದು ದನದ ಕೊಟ್ಟಿಯನ್ನು ಸ್ವಚ್ಛ ಮಾಡುತ್ತಿದ್ದು ಏಕಾಏಕಿ ಮನೆಯ ಪಕ್ಕದ ಗುಡ್ಡಕ್ಕೆ ತೆರಳಿ ಗಣೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನೆ ಬಗ್ಗೆ ಮಾಹಿತಿ ತಿಳಿದು ಮೃತಪಟ್ಟ ಗಣೇಶ್ ತಂದೆ ಬಾಬು ಗೌಡ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಗುಡ್ಡಕ್ಕೆ ಹೋದಾಗ ತಕ್ಷಣ ಸ್ಥಳೀಯರು ರಕ್ಷಣೆ ಮಾಡಿ ಬಾಬುಗೌಡರನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು.‌ಈ ಬಗ್ಗೆ ಧರ್ಮಸ್ಥಳ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಆಟಿ ಅಮಾವಾಸ್ಯೆ ಪ್ರಯುಕ್ತ ಮುಗುಳಿ ಹಾಗೂ ಶ್ರವಣ ಗುಂಡ ಬಸದಿ ಸ್ವಚ್ಛತೆ

Suddi Udaya

ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ತಣ್ಣೀರುಪಂತ ವಲಯ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಗಾರ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ : 2644 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಶತಮಾನದ  3ನೇ ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ: ಯುಗಳ ಮುನಿಗಳು, ಮಾತಾಜಿಗಳು, ಧಮಾ೯ಧಿಕಾರಿ ಡಾ.ಹೆಗ್ಗಡೆ ಹಾಗೂ ಗಣ್ಯರು ಉಪಸ್ಥಿತಿ

Suddi Udaya

ಕಳಿಯ ಗ್ರಾಮ ಪಂಚಾಯತ್ ನ ಮಾಸಿಕ ಸಾಮಾನ್ಯ ಸಭೆ

Suddi Udaya
error: Content is protected !!