26.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಪಾರಾದೀಪ್ ಫಾಸ್ಫೇಟ್ ಲಿಮಿಟೆಡ್ ಮಂಗಳೂರು ಘಟಕದ ಸಿ.ಎಸ್.ಆರ್ ಅನುದಾನದಲ್ಲಿ ನಿರ್ಮಾಣಗೊಂಡ ಕಾರಿಂಜ ಉರುವಾಲು ಅಂಗನವಾಡಿ ಕೇಂದ್ರದ ಉದ್ಘಾಟನೆ

ಬೆಳ್ತಂಗಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ, ಅಂಗನವಾಡಿ ಕೇಂದ್ರ ಕಾರಿಂಜ ಉರುವಾಲು ಬೆಳ್ತಂಗಡಿ, ಪಾರಾದೀಪ್ ಫಾಸ್ಫೇಟ್ ಲಿಮಿಟೆಡ್ ಮಂಗಳೂರು ಘಟಕ ಪಣಂಬೂರು ಇದರ ಸಿ.ಎಸ್.ಆರ್ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಮಾಜಿ ಸದಸ್ಯ ಈಶ್ವರ ಭಟ್ ಮಾಯಿಲ್ತೋಡಿ ನೆರವೇರಿಸಿದರು.

ಮುಖ್ಯ ಉತ್ಪಾದನಾಧಿಕಾರಿ ಗಿರೀಶ್ ಎಸ್. ಮಾತನಾಡಿ ‌ಸಿ.ಎಸ್.ಆರ್ ಅನುದಾನದಲ್ಲಿ ನಮ್ಮ ಕಂಪನಿಯಿಂದ ಹಲವಾರು ಕಡೆಗಳಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಬಂದಿದೆ.ಅಕ್ಷರ ಮಿತ್ರ ಯೋಜನೆಯಡಿಯಲ್ಲಿ ಕಾರಿಂಜಕ್ಕೆ ಕೂಡ ನಮ್ಮ ಕಂಪನಿಯಿಂದ ಹೊಸದಾದ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿ ಹಾಗೂ ಊರವರ ಸಹಕಾರದೊಂದಿಗೆ ವೇದಿಕೆಯಲ್ಲಿ ಪಾರಾದೀಪ್ ಕಂಪೆನಿಯ ಉತ್ಪಾದನಾಕಾರಿ ಗಿರೀಶ್ ಎ‌ಸ್, ಸ್ಥಾಪಕ ಅಧ್ಯಕ್ಷ ಈಶ್ವರ ಭಟ್ ಮಾಯಿಲ್ತೋಡಿ, ಅಸಿಸ್ಟೆಂಟ್ ಮ್ಯಾನೇಜರ್ ಅಭಿನಂದನ್ ಎ -ಪ್ರೊಡಕ್ಷನ್ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ ಯೋಗೀಶ್ ಜೆ.ಜಿ.ಯಂ- ವೈದ್ಯಕೀಯ ವಿಭಾಗ, ವಿವೇಕ್ ಕೋಟ್ಯಾನ್ ಸೀನಿಯರ್ ಆಫೀಸರ್-ಸಿ.ಎಸ್.ಆರ್ ವಿಭಾಗ, ರೋಷನ್ ಆಫೀಸರ್ ಹೆಚ್,ಆರ್ ವಿಭಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಮನ್ ಎಸ್ , ಪ್ರಗತಿಪರ ಕೃಷಿಕ ದಾಸಪ್ಪ ಗೌಡ ಕೋಡಿಯಡ್ಕ,ಬಾಲ ವಿಕಾಸ ಸಮಿತಿಯ ಅಧ್ಯಕ್ಷ ಸ್ಮಿತ ಜಿ.ಕೆ., ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ಯನ್, ಮಾಜಿ ಸದಸ್ಯೆ ಉಮಾವತಿ,ಅಂಗನವಾಡಿ ಕಾರ್ಯಕರ್ತೆ ಶಶಿಪ್ರಭಾ,ಶಾಲಾ ಮುಖ್ಯೋಪಾಧ್ಯಾಯಿನಿ ಗಿರಿಜಾ,ಬಾಲ ವಿಕಾಸ ಸಮಿತಿ ಪೋಷಕ ಮುಸ್ತಫಾ ಕೆ.ಯಂ.‌ಅಂಡೆತ್ತಡ್ಕ ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಪೂಜಾರಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಮಾಲತಿ, ಶಾಲಾ ಮಾಜಿ ಅಧ್ಯಕ್ಷರಾದ ಡೀಕಯ್ಯ ಸಿ ತೇಜಸ್ವಿ ಆನಡ್ಕ ಉಪಸ್ಥಿತರಿದ್ದರು.

ಪ್ರದೀಪ್ ನಾಯ್ಕ ಆನಡ್ಕ ಸ್ವಾಗತಿಸಿ, ಅಭಿನಂದನ್ ಎ ವಂದಿಸಿದರು. ಶಿಕ್ಷಕ ಪರಮೇಶ್ವರ ನಿರೂಪಿಸಿದರು.

Related posts

ಆಳ್ವಾಸ್ ಪತ್ರಿಕೋದ್ಯಮ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ಡಿ ರಾಂಪುರ್

Suddi Udaya

ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ: ಶ್ರೀ ಧ.ಮಂ. ಆಂ.ಮಾ. ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ಮಚ್ಚಿನ ಹಿ. ಪ್ರಾ. ಶಾಲೆಯಲ್ಲಿ ವಿಪತ್ತು ತಂಡದ ಸ್ವಯಂ ಸೇವಕರಿಂದ ಶಾಲಾ ಕೈತೋಟ ನಿರ್ಮಾಣ

Suddi Udaya

ಬೆಳ್ತಂಗಡಿ: “ಸಮಾಜಮುಖಿ ಸೇವೆಯಲ್ಲಿ ವಿ. ಹರೀಶ್ ನೆರಿಯ ರವರಿಗೆ ವಿಶೇಷ ಸಾಧಕ” ಪ್ರಶಸ್ತಿಯ ಗರಿಮೆ

Suddi Udaya

ಬಾಂಗ್ಲಾ ಹಿಂದು ಗಳಿಗಾಗಿರುವ ದೌರ್ಜನ್ಯದ ವಿರುದ್ಧ ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಮಾನವ ಸರಪಳಿ ಮೂಲಕ ಪ್ರತಿಭಟನೆ

Suddi Udaya

ಅರಸಿನಮಕ್ಕಿ : ಸೈನಿಕ ಕೆ. ಮಹಾಬಲ ಮುದ್ದಿಗೆಯವರಿಗೆ ನಾಗರಿಕರಿಂದ ಅಭಿನಂದನೆ

Suddi Udaya
error: Content is protected !!