24.8 C
ಪುತ್ತೂರು, ಬೆಳ್ತಂಗಡಿ
September 20, 2026
ಆಯ್ಕೆ

ಬಂಟರ ಯಾನೆ ನಾಡವರ ಸಂಘಕ್ಕೆ ಬೆಳ್ತಂಗಡಿಯಿಂದ 4 ಮಂದಿ ಅವಿರೋಧ ಆಯ್ಕೆ

ಬೆಳ್ತಂಗಡಿ: ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘಕ್ಕೆ ಬೆಳ್ತಂಗಡಿ ತಾಲೂಕಿನಿಂದ 4 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಾತೃ ಸಂಘದ ಸಂಚಾಲಕರಾಗಿರುವ ಎಂ.ಜಯರಾಮ್ ಭಂಡಾರಿ ಧರ್ಮಸ್ಥಳ, ಸಹ ಸಂಚಾಲಕರಾಗಿರುವ ಕಿರಣ್ ಕುಮಾ‌ರ್ ಶೆಟ್ಟಿ, ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು, ಮಹಿಳಾ ಕ್ಷೇತ್ರದಿಂದ ಮಾಡಬಿದಿರೆ ಮಹಾವೀರ ಕಾಲೇಜಿನ ಉಪನ್ಯಾಸಕಿಯಾದ ಸುಜಾತಾ ಶೆಟ್ಟಿ ಪೆರಿಂಜೆಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಸರ್ಕಲ್ ಬಳಿ ಇರುವ ಬಂಟರ ಯಾನೆ ನಾಡವರ ಸಂಘ(ರಿ.), ಇದರ 2026-2029ನೇ ಅವಧಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ವಿವಿಧ ಹುದ್ದೆಗಳ ಚುನಾವಣೆಯನ್ನು ಘೋಷಿಸಲಾಗಿದ್ದು, ಮೇ 1 ರಿಂದ ಮೇ 7ರವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದೆ. ಅಧ್ಯಕ್ಷರಾಗಿ ಈಗಾಗಲೇ ಅಜಿತ್ ಕುಮಾರ್ ರೈ ಮಾಲಾಡಿಯವರು ಅವಿರೋಧವಾಗಿ ಆಯ್ಕೆ ಆಗಿದ್ದು, ಅಧಿಕೃತ ಘೋಷಣೆ ಆಗಬೇಕಾಗಿದೆ.

Related posts

ಬಂಟರ ಯಾನೆ ನಾಡವರ ಮಾತೃ ಸಂಘ ಸಂಚಾಲಕರಾಗಿ ಜಯರಾಮ ಭಂಡಾರಿ ಹಾಗೂ ಸಹ ಸಂಚಾಲಕರಾಗಿ ಕಿರಣ್ ಕುಮಾರ್ ಶೆಟ್ಟಿ : ನಾಮ ನಿರ್ದೇಶನ ನಿರ್ದೇಶಕರಾಗಿ ಜಯಂತ ಶೆಟ್ಟಿ ಹಾಗೂ ಅಜಿತ್ ಜಿ. ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಆಯ್ಕೆ

Suddi Udaya

ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಪದ್ಮಗೌಡ, ಉಪಾಧ್ಯಕ್ಷರಾಗಿ ದಿನೇಶ್ ಕೋಟ್ಯಾನ್

Suddi Udaya

ಮಾಚಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿ ಮಹಾಸಭೆ; ಪದಾಧಿಕಾರಿಗಳ ಆಯ್ಕೆ

Suddi Udaya

ರೆಖ್ಯ: ಸಾರ್ವಜನಿಕ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣಾ ಸಮಿತಿ ರಚನೆ

Suddi Udaya

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಡಾ. ರವೀಶ್ ಪಡುಮಲೆ, ರಾಜಾರಾಮ ಶರ್ಮ, ದೇವಿಪ್ರಸಾದ್, ಸದಾನಂದ ನಾರಾವಿ ಕನ್ನಡ ಸಿರಿ ಪ್ರಶಸ್ತಿಗೆ ಆಯ್ಕೆ

Suddi Udaya

ಕನ್ಯಾಡಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಮನೀಶ್, ಕಾರ್ಯದರ್ಶಿ ಶ್ರೇಯಸ್ಸು

Suddi Udaya
error: Content is protected !!