30.8 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಮರುಮೌಲ್ಯಮಾಪನ: ಎಸ್‌ಡಿಎಂ ಪಿಯು ಕಾಲೇಜಿನ ವಿದ್ಯಾರ್ಥಿನಿಯರ ಅದ್ಭುತ ಸಾಧನೆ

ಉಜಿರೆ: ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ನಿಜಾ ಕುಲಾಲ್ ಅವರು ಮರುಮೌಲ್ಯಮಾಪನ ಫಲಿತಾಂಶದಲ್ಲಿ 596 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ‌ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮೊದಲು ಅವರು 593 ಅಂಕಗಳನ್ನು ಪಡೆದಿದ್ದರು.

ಇನ್ನೊಂದೆಡೆ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅರ್ಪಿತಾ ಅಡಿಗ ಅವರು ಮರುಮೌಲ್ಯಮಾಪನದ ಬಳಿಕ 593 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಎಂಟನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ಇಬ್ಬರೂ ವಿದ್ಯಾರ್ಥಿನಿಯರು ಇಂಗ್ಲಿಷ್ ವಿಷಯದಲ್ಲಿ ತಲಾ 3 ಹೆಚ್ಚುವರಿ ಅಂಕಗಳನ್ನು ಗಳಿಸಿ ಕಾಲೇಜಿನ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ.

ಈ ಸಾಧನೆಯ ಮೂಲಕ ಎಸ್‌ಡಿಎಂ ಪಿಯು ಕಾಲೇಜು ಮತ್ತೊಮ್ಮೆ ಶೈಕ್ಷಣಿಕ ಗುಣಮಟ್ಟ ಮತ್ತು ವಿದ್ಯಾರ್ಥಿ ಸಾಧನೆಯಲ್ಲಿ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ. ವಿದ್ಯಾರ್ಥಿನಿಯರ ಪರಿಶ್ರಮ, ಪೋಷಕರ ಪ್ರೋತ್ಸಾಹ ಹಾಗೂ ಶಿಕ್ಷಕರ ಮಾರ್ಗದರ್ಶನವೇ ಈ ಯಶಸ್ಸಿನ ಮೂಲ ಕಾರಣವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಈ ಹೆಮ್ಮೆಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

Related posts

ವೇಣೂರು: ಅಕ್ರಮ ಗೋ ಸಾಗಾಟ: ಆರೋಪಿಗಳು ಪೊಲೀಸರ ವಶ

Suddi Udaya

ನೇತ್ರಾವತಿ ಸ್ನಾನಘಟ್ಟದ ಬಳಿ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ

Suddi Udaya

ಮದ್ದಡ್ಕ ಶ್ರೀರಾಮ ನವಮಿ ಉತ್ಸವ ಪ್ರಯುಕ್ತ ನಡೆಯುವ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಉಜಿರೆ: ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಕೆ.ಕೃಷ್ಣ ಮೂರ್ತಿ ಹೊಳ್ಳ ನಿಧನ

Suddi Udaya

ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

Suddi Udaya
error: Content is protected !!