30.8 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಬಂಟ್ವಾಳದಲ್ಲಿ ಪತ್ತೆ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಗಳ ಮದುವೆ ಕಾರ್ಯಕ್ರಮಕ್ಕೆ ಬಂದ ವ್ಯಕ್ತಿಯೊಬ್ಬರು ವಾಪಸ್ ಮನೆಗೆ ಹೋಗದೆ ನಾಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ವ್ಯಕ್ತಿ ಮೇ 2ರಂದು ಬಂಟ್ವಾಳದಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿವಾಸಿ ಮಂಜುನಾಥ. ಇ(47) ರವರು ದಿನಾಂಕ 29-04-2026 ರಂದು ತನ್ನ ಮಗಳ ಮದುವೆಗೆಂದು ಮನೆಯವರ ಜೊತೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ದೇವಸ್ಥಾನಕ್ಕೆಂದು ಬಂದವರು ದೇವರ ದರ್ಶನ ಮುಗಿಸಿ ದೇವಸ್ಥಾನದ ಮುಂಭಾಗದಲ್ಲಿರುವ ಬೃಂದಾವನ ಪಾರ್ಕಿಗೆ ಹೋಗಿ ವಾಪಾಸ್ಸು ಬರುವ ಸಮಯ ಬೆಳಿಗ್ಗೆ 11:30 ಗಂಟೆ ಸುಮಾರಿಗೆ ದೇವಸ್ಥಾನ ಮುಂಭಾಗದಿಂದ ಕಾಣೆಯಾಗಿರುತ್ತಾರೆ. ಈ ಬಗ್ಗೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ಮೇ.1 ರಂದು ನಾಪತ್ತೆಯಾದ ಮಂಜುನಾಥ್ ಅವರ ಚಿಕ್ಕಪ್ಪನ ಮಗ ದಿನೇಶ್ ಪಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

Related posts

ಬೆಳ್ತಂಗಡಿ : ಕಂದಾಯ ನಿರೀಕ್ಷಕರಾಗಿ ಮಲ್ಲೇಶ್ ಕರ್ತವ್ಯಕ್ಕೆ ಹಾಜರು

Suddi Udaya

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕುಂದುಕೊರತೆ ಸಭೆ

Suddi Udaya

ಬಂದಾರು: ಚಂದ್ರಶೇಖರ್ ನಾಯಕ್ ರವರ ತೋಟಕ್ಕೆ ಕಾಡಾನೆ ದಾಳಿ-ಅಪಾರ ನಷ್ಟ

Suddi Udaya

ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಭವಿಷ್ಯಕ್ಕೆ ಪೂರಕ ಬಜೆಟ್ ; ಯುವ ಕಾಂಗ್ರೇಸ್ ರಾಜ್ಯ ಸಮಿತಿ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್

Suddi Udaya

ಪಾರೆಂಕಿ ಖಾಸಗಿ ವ್ಯಕ್ತಿಯಿಂದ ಸಾರ್ವಜನಿಕ ಕಾಲು ದಾರಿಗೆ ತಡೆಯಾಗಿದ್ದು, ತೆರವುಗೊಳಿಸಲು ಆಗ್ರಹ: ಸಾರ್ವಜನಿಕರು, ಕೃಷಿಕರ ಕುಂದುಕೊರತೆಗಳ ನಿವಾರಣೆಗೆ ಕನ್ನಡ ಸೇನೆ ಕರ್ನಾಟಕ ಹೋರಾಟ

Suddi Udaya

ವೇಣೂರು ಸರಕಾರಿ ಪ್ರೌಢ ಶಾಲೆಯಲ್ಲಿ “ಸ್ವಾಸ್ಥ್ಯ ಸಂಕಲ್ಪ “ಕಾರ್ಯಕ್ರಮ

Suddi Udaya
error: Content is protected !!