32.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಎಸ್‌.ಡಿ.ಎಂ. ಐಟಿಐ ವೇಣೂರಿನಲ್ಲಿ ಯಂತ್ರಗಳ ಬಿಡಿಭಾಗ ತಯಾರಿಕಾ ಕಂಪೆನಿಯಿಂದ ಕ್ಯಾಂಪಸ್ ಸಂದರ್ಶನ

ವೇಣೂರು: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ 2026ರಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗಾಗಿ ಪ್ರಖ್ಯಾತ ಬಿಡಿ ಭಾಗಗಳ ತಯಾರಿಕಾ ಕಂಪೆನಿಯಾದ ಭವಾನಿ ಇಂಡಸ್ಟ್ರೀಸ್ ವತಿಯಿಂದ ಉದ್ಯೋಗ ನೇಮಕಾತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಯಿತು.

ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿ ಲೋಕೆಶ್‌ ರೆಡ್ಡಿಯವರು ಸಂದರ್ಶನವನ್ನು ನಡೆಸಿದರು. ಫಿಟ್ಟರ್ ಮತ್ತು ಟರ್ನರ್ ವಿಭಾಗದ ಒಟ್ಟು 32 ವಿದ್ಯಾರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಲೋಕೆಶ್‌ ರೆಡ್ಡಿಯವರು ಕೈಗಾರಿಕಾ ವಲಯದಲ್ಲಿ ಐಟಐ ವಿದ್ಯಾರ್ಥಿಗಳಿಗಿರುವ ಬೃಹತ್‌ ಉದ್ಯೋಗ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಸ್ವಾಗತಿಸಿದರು. ನೇಮಕಾತಿ ಅಧಿಕಾರಿ ಶ್ರೇಯಸ್ ಹಾಗೂ ಕಿರಿಯ ತರಬೇತಿ ಅಧಿಕಾರಿಗಳಾದ ಕುಶ ಮತ್ತು ಶ್ರವಣ್ ಅವರು ಸಂದರ್ಶನ ಪ್ರಕ್ರಿಯೆಯಲ್ಲಿ ಸಹಕರಿಸಿದರು.

Related posts

ಕುತ್ಲೂರು ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ

Suddi Udaya

ಎಕ್ಸೆಲ್‌ ಕಾಲೇಜು ವಿಜ್ಞಾನ ವಿಭಾಗಕ್ಕೆ ಶೇ.100 ಫಲಿತಾಂಶ: ಅಕ್ಷಯ್ ಗೆ 595 ಅಂಕ

Suddi Udaya

ರಾಷ್ಟ್ರೀಯ ಮಟ್ಟದ ಕರಕುಶಲ ಸ್ಪರ್ಧೆ: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಶ್ರೇಯಾ ಕೆ ಎಚ್ ಗೆ ಪ್ರಥಮ ಸ್ಥಾನ

Suddi Udaya

ಕೊಕ್ಕಡ: ಕೊಟ್ಟಿಗೆಯಲ್ಲಿ ಪತ್ತೆಯಾದ 12 ಅಡಿ ಉದ್ದದ ಕಾಳಿಂಗ ಸರ್ಪ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಪ್ರಕಾಶ್

Suddi Udaya

ಬೆಳ್ತಂಗಡಿಯಲ್ಲಿ ಪೇಪರ್ ಲೇಸ್ ರಿಜಿಸ್ಟ್ರೇಷನ್ ತರಬೇತಿ

Suddi Udaya

ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ

Suddi Udaya
error: Content is protected !!