September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ದೈಹಿಕ ಶಿಕ್ಷಕ ಜೋನ್ ಕೆ ಪಿ ಸೇವಾ ನಿವೃತ್ತಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಬೀಳ್ಕೊಡುಗೆ ಸನ್ಮಾನ

ಬೆಳ್ತಂಗಡಿ : ಬೆಳ್ತಂಗಡಿ ಹಳೆ ಪೇಟೆಯ ಸರಕಾರಿ ಹಿ. ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಸೇವೆಗೆ ಸೇರ್ಪಡೆಗೊಂಡು, ಸುದೀರ್ಘ ಮೂವತ್ತು ವರ್ಷಗಳ ಸೇವೆಯ ನಂತರ ಜುಲೈ 31ರಂದು ವಿದಾಯ ಹೇಳಿದ ಜೋನ್ ಕೆ ಪಿ ಅವರನ್ನು, ಗೋಳಿತಟ್ಟು ಉನ್ನತಿಕರಿಸಿದ ಹಿ. ಪ್ರಾಥಮಿಕ ಶಾಲೆಯಿಂದ ನಿವೃತ್ತಿ ಪಡೆದ ಅವರನ್ನು, ಅವರ ಸ್ವಗೃಹದಲ್ಲಿ ಹಿರಿಯರ, ವೃತ್ತಿ ಬಾಂಧವರ, ನಾಡಿನ ಪ್ರಮುಖ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಸಂತ ಅಲ್ಫೋನ್ಸ ಚರ್ಚ್‌ನ ಧರ್ಮಗುರು ವಂದನೀಯ ಶಾಜಿ ಮಾತ್ಯು ಅವರ ಸೇವೆಯನ್ನು ಪ್ರಶಂಸಿಸಿ ಮಾತನಾಡಿದರು. ದೇಶದ ಇತಿಹಾಸದಲ್ಲಿ ಪ್ರಥಮ ಬಾರಿಗೆ, ವಿದಾಯದ ಸಂದರ್ಭದಲ್ಲಿ, ಶಿಕ್ಷಕರೊಬ್ಬರು ರಾಷ್ಟ್ರಪಿತ ಮಹಾತ್ಮ ಗಾಂಧಿಯ ಪುತ್ತಳಿಕೆಯನ್ನು ಸಾವಿರಾರು ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಶಾಲಾ ವಠಾರದಲ್ಲಿ ಸ್ಥಾಪನೆ ಮಾಡಿರುವುದು, ಎಲ್ಲಾ ಸರಕಾರಿ ನೌಕರರಿಗೆ ಹೊಸದೊಂದು ಪರಿಕಲ್ಪನೆಗೆ ನಾಂದಿಯಾಗಿರುವುದು ಜೋನ್ ಕೆ ಪಿ ಅವರ ವಿಶೇಷ ಸಾಧನೆಯಾಗಿದೆ ಮತ್ತು ಅನುಕರಣೀಯ ಮಾದರಿಯಾಗಿದೆ.

ಈ ಸಂದರ್ಭದಲ್ಲಿ ಚರ್ಚ್‌ನ ಟ್ರಸ್ಟಿಗಳಾದ ನಿವೃತ್ತ ಸೈನಿಕ ಅಲೆಕ್ಸ್, ಪಾಲನ ಸಮಿತಿಯ ಜಿನೋಯ್ ಜಾರ್ಜ್, ಭಗೀನಿಯರಾದ ವಂದನೀಯ ಲಿಸ್ ಮಾತ್ಯು, ವಂದನೀಯ ಎಲ್ ಸ್ಲೀಟ್, ಹಿರಿಯ ಮುಖಂಡ ಕೆ ಪಿ ತೋಮಸ್, ವಂದನೀಯ ಫಾ. ಜಿಬಿನ್ ಮೊದಲಾದವರು ಉಪಸ್ಥಿತರಿದ್ದರು.

Related posts

ನೆರಿಯ ಅರ್ಬಿಬೊಟ್ಟುನಲ್ಲಿ ಕುಸಿಯುವ ಹಂತದಲ್ಲಿರುವ ಕಿರುಸೇತುವೆ

Suddi Udaya

ಅಳದಂಗಡಿಯಲ್ಲಿ ಭೀಕರ ರಸ್ತೆ ಅಪಘಾತ, ಮುಖ್ಯ ರಸ್ತೆಯಲ್ಲಿ ಅಡ್ಡ ಬಂದ ಮಹಿಳೆ: ರಕ್ಷಿಸಲೆತ್ನಿಸಿದ ಟೆಂಪೋ ಟ್ರಾವೆಲ್ಲರ್ ಪಲ್ಟಿ,ದೊಡ್ಡ ದುರಂತ ತಪ್ಪಿಸಿದ ಡ್ರೈವರ್

Suddi Udaya

ಧರ್ಮಸ್ಥಳ ಸಹಕಾರ ಸಂಘದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರ

Suddi Udaya

ಸೆ.7: ಕೊಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ನಡ ಸರ್ಕಾರಿ ಪದವಿಪೂರ್ವ ಕಾಲೇಜು: ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya
error: Content is protected !!