September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಡಿ. ಕೆ.ಆರ್.ಡಿ.ಎಸ್ – ಮಕ್ಕಳ ಶಿಬಿರ

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಮೇ 6 ರಂದು ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮ , ಮಕ್ಕಳ ರಜಾ ಶಿಬಿರ ಹಾಗೂ ಉಚಿತ ಬ್ಯಾಗ್ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮವು ಬೆಳ್ತಂಗಡಿ ಸಾಂತೋಮ್ ಟವರ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಷ್ಪರಾಜ್ ವಹಿಸಿದ್ದರು. ವಂ. ಫಾ| ಸನೀಶ್ ಪುದುಪರಂಬಿಲ್ ನಿರ್ದೇಶಕರು ಎಸ್.ಎಮ್. ವೈ. ಎಮ್ ಮತ್ತು ಕಲ್ಪತರು ನರ್ಸಿಂಗ್ ಕಾಲೇಜು ಬೆಳ್ತಂಗಡಿ ಇವರು ಆಗಮಿಸಿ ಶಿಬಿರವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನಿವೃತ್ತ ಪ್ರಾಂಶುಪಾಲರು ಡಾ. ಆಂಟೋನಿ ಟಿ.ಪಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ಇವರು ನವಜೀವನ ಕೇಂದ್ರದ ಸದಸ್ಯರಿಗೂ ಹಾಗೂ ಮಕ್ಕಳಿಗೂ ಪ್ರೇರಣಾ ತರಬೇತಿ ನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸೈಂಟ್ ಅಲ್ಫೋನ್ಸಾ ಚರ್ಚ್ ನೆಲ್ಯಾಡಿ ಇಲ್ಲಿನ ಧರ್ಮಗುರುಗಳಾದ ವಂ. ಫಾದರ್ ಶಾಜಿ ಮಾಥ್ಯೂ ಹಾಗೂ ಸೈಂಟ್ ಜೋರ್ಜ್ ಚರ್ಚ್ ಉಜಿರೆ ಇಲ್ಲಿನ ಧರ್ಮಗುರುಗಳಾದ ವಂ. ಫಾದರ್ ಮಾಥ್ಯೂ ಅಂಬಾಟ್ ಹಾಗೂ ಸತ್ಯ ಸ್ವ- ಸಹಾಯ ಸಂಘ ಧರ್ಮಸ್ಥಳ ಇದರ ಅಧ್ಯಕ್ಷೆ ಸಾಲಿ ವರ್ಗೀಸ್ ಕಾರ್ಯಕ್ರಮಕ್ಕೆ ಶುಭಹಾರೈಸಿ ಬ್ಯಾಗ್, ಪುಸ್ತಕ, ಕಲಿಕಾ ಸಾಮಗ್ರಿಗಳು ಮತ್ತು ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಕಾರ್ಯಕ್ರಮದಲ್ಲಿ ಮಾನಿನಿ ಮಹಿಳಾ ರಾಜ್ಯ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜೋನ್, ಸ್ನೇಹ ಕಿರಣ್ ಜಿಲ್ಲಾ ಒಕ್ಕೂಟ ಬೆಳ್ತಂಗಡಿ ಅಧ್ಯಕ್ಷೆ ಎಲಿಯಮ್ಮ ತೋಮಸ್ , ಸ್ನೇಹ ಕಿರಣ್ ಜಿಲ್ಲಾ ಒಕ್ಕೂಟ ಬೆಳ್ತಂಗಡಿ ಇದರ ಕಾರ್ಯದರ್ಶಿ ಉಷಾ, ಹಾಗೂ ನೆಲ್ಯಾಡಿ ಮತ್ತು ಉಜಿರೆ ಸಂಡೇ ಸ್ಕೂಲ್ ಮುಖ್ಯೋಪಾಧ್ಯಾಯರು, ಅಧ್ಯಾಪಕರು ಮತ್ತು, ಪ್ರತಿನಿಧಿಗಳು ಹಾಗೂ ವಂ. ಸಿ. ಕ್ರಿಸ್ಟೀನ ಮದರ್ ಸುಪಿರಿಯರ್ ಎಫ್.ಸಿ.ಸಿ ಕಾನ್ವೆಂಟ್ ಉಜಿರೆ, ವಂ.ಸಿ. ಆಲ್ಫಿ ನೆಲ್ಯಾಡಿ, ಹಾಗೂ ಸಿ.ಎಮ್.ಎಲ್ ಉಜಿರೆ ಮತ್ತು ನೆಲ್ಯಾಡಿ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಂ. ಸಿ. ಕ್ರಿಸ್ಟೀನ ಮದರ್ ಸುಪಿರಿಯರ್ ಎಫ್.ಸಿ.ಸಿ ಕಾನ್ವೆಂಟ್ ಉಜಿರೆ, ಕು. ರೀನು ಸಿ. ಎಮ್. ಎಲ್ ಹಾಗೂ ನವಜೀವನ ಕೇಂದ್ರದ ಸದಸ್ಯರು ಹಾಡನ್ನಾಡಿದರು.
ಕಾರ್ಯಕ್ರಮದಲ್ಲಿ ಸೈಂಟ್ ಅಲ್ಫೋನ್ಸಾ ಚರ್ಚ್ ನೆಲ್ಯಾಡಿ ಇಲ್ಲಿನ ಧರ್ಮಗುರುಗಳಾದ ವಂ. ಫಾದರ್ ಶಾಜಿ ಮಾಥ್ಯೂ ಹಾಗೂ ಅಲ್ಲಿನ ಸಿ.ಎಮ್. ಎಲ್ ಮಕ್ಕಳು ಪದಾಧಿಕಾರಿಗಳು, ಸೈಂಟ್ ಜೋರ್ಜ್ ಚರ್ಚ್ ಉಜಿರೆ ಇಲ್ಲಿನ ಧರ್ಮಗುರುಗಳಾದ ವಂ. ಫಾದರ್ ಮಾಥ್ಯೂ ಅಂಬಾಟ್ ಹಾಗೂ ಸಿ.ಎಮ್.ಎಲ್ ಮಕ್ಕಳು, ಪದಾಧಿಕಾರಿಗಳು ಹಾಗೂ ಸಂಘ ದಿನಾಚರಣೆಯ ಪ್ರಯುಕ್ತ ಸತ್ಯ
ಸ್ವ – ಸಹಾಯ ಸಂಘದ ಅಧ್ಯಕ್ಷೆ ಸಾಲಿ ವರ್ಗೀಸ್ ಮತ್ತು ಸದಸ್ಯರು, ನವಜೀವನ ಕೇಂದ್ರದ ಸದಸ್ಯರಿಗೆ ಕಿರುಕಾಣಿಕೆ ಮತ್ತು ಸಿಹಿ ತಿಂಡಿ ಹಂಚಿ ಧನ ಸಹಾಯ ನೀಡಿದರು.


ಸತ್ಯ ಸ್ವ – ಸಹಾಯ ಸಂಘದ ಅಧ್ಯಕ್ಷೆ ಸಾಲಿ ವರ್ಗೀಸ್ ಮತ್ತು ಸದಸ್ಯರು ಹಾಗೂ ನವಜೀವನ ಕೇಂದ್ರದ ಸದಸ್ಯರು ಮತ್ತು ಇವತ್ತಿನ ಕೇಂದ್ರ ಬಿಂದುವಾಗಿರುವ ಮಕ್ಕಳು ಸಂಸ್ಥೆಯಿಂದ ವರ್ಗಾವಣೆಗೊಳ್ಳುತ್ತಿರುವ ಸಂಸ್ಥೆಯ ನಿರ್ದೇಶಕಾರದ ವಂ. ಫಾದರ್ ಬಿನೋಯಿ ಎ.ಜೆ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ಲಾಯಿಲ ಜ್ಯೋತಿ ಹಾಸ್ಪಿಟಲ್ ವೈದ್ಯಾಧಿಕಾರಿ ಡಾ. ಸಿ. ಅನುಜ ನವಜೀವನ ಕೇಂದ್ರದ ಸದಸ್ಯರ ಹಾಗೂ ಮಕ್ಕಳ ಮೆಡಿಕಲ್ ಚೆಕಪ್ ಮಾಡಿದರು.
ಪುಷ್ಪ ಪ್ರಾರ್ಥನೆ ಹಾಡಿದರು. ಆಳ್ವಾಸ್ ಕಾಲೇಜ್ ಮೂಡಬಿದ್ರೆ ಇಲ್ಲಿನ ಎಮ್. ಎಸ್ .ಡಬ್ಲ್ಯೂ ವಿದ್ಯಾರ್ಥಿಗಳು ಕು.ವೀಕ್ಷಿತ ಹಾಗೂ ಕು. ಶ್ರೇಯಾಂಕ್ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದರು.
ವಿದ್ಯಾನಿಧಿ ಯೋಜನೆಯ ಸಂಯೋಜಕಿ ಜಿನಿ ಪಿಜೆ ಸ್ವಾಗತಿಸಿದರು. ಆಳ್ವಾಸ್ ಕಾಲೇಜು ಮೂಡಬಿದ್ರೆ ಎಮ್.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಕು. ವೀಕ್ಷಿತ ವಂದಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಕಾರ್ಯಕರ್ತರಾದ ಮಾರ್ಕ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.

Related posts

ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದೋದ್ಧೇಶ ಸಹಕಾರ ಸಂಘ ಅಧ್ಯಕ್ಷರಾಗಿ ಲಿಂಗಪ್ಪ ನಾಯ್ಕ, ಉಪಾಧ್ಯಕ್ಷರಾಗಿ ಲಲಿತಾ

Suddi Udaya

ದೇಶಭಕ್ತಿ ಗುಂಪು ಗಾಯನ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ

Suddi Udaya

ಅಕ್ರಮ ಮದ್ಯ ಮಾರಾಟ ಪೊಲೀಸರ ದಾಳಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಮಹಿಳಾ ದಿನಾಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಉಜಿರೆ: ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ: ಶಾಲಾ ನಾಯಕನಾಗಿ ಸಾತ್ವಿಕ್ ರಾವ್ ಮತ್ತು ಉಪ ನಾಯಕನಾಗಿ ಪ್ರಾಂಜಲ್ ಆಯ್ಕೆ

Suddi Udaya
error: Content is protected !!