September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರರ 2ನೇ ವರ್ಷದ ಪುಣ್ಯಸ್ಮರಣೆ ;ಶ್ರೀ ಗುರುದೇವ ಸಹಕಾರಿ ಸಂಘ ಮತ್ತು ಶ್ರೀ ಗು.ನಾ.ಸ್ವಾ.ಸೇ ಸಂಘದಿಂದ ಸಿಯೋನ್ ಆಶ್ರಮದಲ್ಲಿ ಆಚರಣೆವಸಂತ ಬಂಗೇರರು ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು: ಭಗೀರಥ ಜಿ

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಬೆಳ್ತಂಗಡಿ ಹಾಗೂ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಇವರ ಆಶಯದಲ್ಲಿ ಜನಪ್ರಿಯ ಮಾಜಿ ಶಾಸಕರೂ, ಸಮಾಜಸೇವಕರೂ ಆದ ಕೆ ವಸಂತ ಬಂಗೇರ ಅವರ ದ್ವಿತೀಯ ವರ್ಷದ ಪುಣ್ಯಸ್ಮರಣೆಯನ್ನು ಸಿಯೋನ್ ಆಶ್ರಮ, ಗಂಡಿಬಾಗಿಲು ಇಲ್ಲಿನ ಆಶ್ರಮವಾಸಿಗಳಿಗೆ ಅನ್ನದಾನದ ಕಾರ್ಯಕ್ರಮದ ಮೂಲಕ ಭಾವಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಭಗೀರಥ ಜಿ ಅವರು ವಸಂತ ಬಂಗೇರರವರ ಜನಸೇವೆಯನ್ನು ಸ್ಮರಿಸಿ ಮಾತನಾಡಿ, ತಮ್ಮ ಶಾಸಕತ್ವದ ಅವಧಿಯಲ್ಲಿ ಅವರು ಜನಪರ ಕಾಳಜಿಯಿಂದ ನಡೆಸಿದ ಅಭಿವೃದ್ಧಿ ಕಾರ್ಯಗಳು ಹಾಗೂ ಬಡವರ ಮೇಲಿನ ಅವರ ಅಪಾರ ಪ್ರೀತಿ-ವಿಶ್ವಾಸವನ್ನು ನೆನಪಿಸಿಕೊಂಡರು. ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ವಸಂತ ಬಂಗೇರರು ಸದಾ ಜನಹಿತದ ಚಿಂತನೆಯಲ್ಲೇ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.

ಸಿಯೋನ್ ಆಶ್ರಮದ ಧರ್ಮಗುರುಗಳಾದ ಯು.ಸಿ ಪೌಲೂಸ್ ಮಾತನಾಡಿ ಆಶ್ರಮ‌ ಮತ್ತು ವಸಂತ ಬಂಗೇರರ ನಡುವೆ ಇದ್ದ ನಿಕಟ ಸಂಬಂಧದ ಬಗ್ಗೆ ತಿಳಿಸಿ ಭಾವಪೂರ್ಣ ಶ್ರದ್ದಾಂಜಲಿ ಕೋರಿದರು.

ಈ ಸಂದರ್ಭದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಇದರ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಕೆ.ಪಿ. ದಿವಾಕರ, ಶ್ರೀಮತಿ ತನುಜಾ ಶೇಖರ್, ಚಿದಾನಂದ ಪೂಜಾರಿ ಎಲ್ದಕ್ಕ, ರಕ್ಷಿತ್ ಶಿವರಾಂ,ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಪಿ.ಕೆ. ರಾಜು ಪೂಜಾರಿ, ಕಾರ್ಯದರ್ಶಿ ನಿತೀಶ್ ಎಚ್., ಜತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು, ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ಪ್ರಸಾದ್ ಎಂ.ಕೆ. ನಿರ್ದೇಶಕರಾದ ಗುರುರಾಜ್ ಗುರಿಪಲ್ಲ, ಕಮಲಾಕ್ಷ, ಶ್ರೀಮತಿ ವಿನೋದಿನಿ ರಾಮಪ್ಪ, ಶ್ರೀಮತಿ ನಮಿತಾ, ಶ್ರೀಮತಿ ಉಷಾ ಶರತ್ ಹಾಗೂ ಸಂತೋಷ್ ಕೆ.ಸಿ, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್, ಮುಖ್ಯ ಲೆಕ್ಕಿಗ ಕೀರ್ತನ್ ಕುಮಾರ್, ಮಾನವ ಸಂಪನ್ಮೂಲ ಅಧಿಕಾರಿ ರೂಪಲತಾ, ಸಿಯೋನ್ ಆಶ್ರಮದ ಟ್ರಸ್ಟೀ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ.,ಆಡಳಿತಾಧಿಕಾರಿ ಶ್ರೀಮತಿ ಶೋಭಾ ಯು.ಪಿ. ಮತ್ತು ಸಿಬ್ಬಂದಿವ ರ್ಗದವರು ಉಪಸ್ಥಿತರಿದ್ದರು.

ಸರಕಾರಿ ಅಪರ ವಕೀಲರಾದ ಮನೋಹರ ಕುಮಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು.

Related posts

ದ.ಕ.ಜಿ.ಪಂ.ಹಿ. ಪ್ರಾ. ಕೊಡಿಯಾಲಬೈಲು ಶಾಲೆಯಲ್ಲಿ ಸಾಮಾಜಿಕ ಪರಿಶೋಧನಾ ಶಾಲಾ ಪೋಷಕರ ಸಭೆ

Suddi Udaya

ಕಲ್ಮಂಜ: ನಿಡಿಗಲ್ ಅಂಗನವಾಡಿಯಲ್ಲಿ ಪೋಷಣಾ ಅಭಿಯಾನ

Suddi Udaya

ರಾಜ್ಯದಲ್ಲಿ ಅನಧಿಕೃತ ಲೋಡ್‌ ಶೆಡ್ಡಿಂಗ್‌ನಿಂದಾಗಿ ಅಸಮರ್ಪಕ ವಿದ್ಯುತ್‌ ವಿತರಣೆ: ಸಾರ್ವಜನಿಕರು, ಉದ್ಯಮಿಗಳು ಹಾಗೂ ರೈತರಿಗೆ ಸಂಕಷ್ಟ: ಪ್ರತಾಪಸಿಂಹ ನಾಯಕ್‌

Suddi Udaya

ಮಡಂತ್ಯಾರು: ರಾಜ್ಯಕ್ಕೆ ಕೀರ್ತಿ ತಂದುಕೊಟ್ಟ ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್ ಸಿ ಸಿ ಕೆಡೆಟ್: ರಾಷ್ಟ್ರಮಟ್ಟದ ಎನ್.ಸಿ.ಸಿ ಶಿಬಿರಕ್ಕೆ ಜೂನಿಯರ್ ಅಂಡರ್ ಆಫೀಸರ್ ಮಂಜುಷಾ ಆಯ್ಕೆ

Suddi Udaya

ನಡ ಗ್ರಾ.ಪಂ. ನ ಅಧ್ಯಕ್ಷರಾಗಿ ಮಂಜುಳಾ, ಉಪಾಧ್ಯಕ್ಷರಾಗಿ ದಿವಾಕರ ಪೂಜಾರಿ ಆಯ್ಕೆ

Suddi Udaya

ಪಟ್ರಮೆ ಅನಾರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ಕೊರತೆ: ಶಾಲಾ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ಇಲ್ಲಂದತಹ ಪರಿಸ್ಥಿತಿ: ಮಕ್ಕಳನ್ನು ಶಾಲೆಗೆ ಕಳುಹಿಸದೇ ಪೋಷಕರ ಪ್ರತಿಭಟನೆ

Suddi Udaya
error: Content is protected !!