September 24, 2026
Uncategorized

ಕುವೆಟ್ಟು ಗ್ರಾಮ ಪಂಚಾಯತ್ ಅರಿವು ಕೇಂದ್ರದ ಸಹಾಭಾಗೀತ್ವದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

ಬೆಳ್ತಂಗಡಿ: ಗ್ರಾಮ ಪಂಚಾಯತ್ ಕುವೆಟ್ಟು ಗ್ರಾಮ ಪಂಚಾಯತ್ ಅರಿವು ಕೇಂದ್ರ ಕುವೆಟ್ಟು ಇದರ ಸಹಾಭಾಗೀತ್ವದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಮೇ 04 ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರು ಶಿಬಿರಕ್ಕೆ ಚಾಲನೆ ನೀಡಿದರು ಐದು ದಿವಸಗಳಿಂದ ಮಕ್ಕಳಿಗೆ ಶಿಬಿರದಲ್ಲಿ ವಿವಿಧ ಚಟುವಟಿಕೆ ಗಳನ್ನು ನಡೆಸಲಾಯಿತು ಸುಗಮಗಾ ರರಾಗಿ ಆನಂದ ಕೋಟ್ಯಾನ್ ಯೋಗಾಸನ ದ ವಿವಿಧ ಪ್ರಕಾರಗಳು. ಭುವನ್ ಮಕ್ಕಳಿಗೆ ಮನೋರಂಜನೆ ಯನ್ನು, ಸುಲೋಚನಾ ಇವರು ವಿವಿಧ ರೀತಿಯ ಆಟೋಟ ಗಳನ್ನು, ಕುಮಾರಿ ಭುವನೇಶ್ವರಿ ಮಕ್ಕಳಿಗೆ ಕ್ರ್ಯಾಪ್ಟ್ ನ ವಿವಿಧ ಚಟುವಟಿಕೆಗಳನ್ನು, ಜಾಲಜಾಕ್ಷಿ ಇವರು ಮಕ್ಕಳಿಗೆ ಆರೋಗ್ಯ ಮಾಹಿತಿ ಯನ್ನು ನೀಡಿರುತ್ತಾರೆ.

ಶಿಬಿರದಲ್ಲಿ ಹಾಡು ಕುಣಿತ ಗೇಮ್ಸ್, ಓದುವುದು, ಕ್ವಿಜ್ ಸ್ಮರಣೆ ಶಕ್ತಿ ಇವುಗಳನ್ನು ಕೂಡ ಮಕ್ಕಳಿಗೆ ನಡೆಸಲಾಯಿತು. ಸಮಾರೋಪ ಸಮಾರಂಭ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಇಮ್ತಿಯಾಜ್ , ಕಾರ್ಯದರ್ಶಿ ಶ್ರೀಮತಿ ಸೇವಂತಿ ಪಂಚಾಯತ್ ಸಿಬ್ಬಂದಿ ಆನಂದ್ ಕೋಟ್ಯಾನ್ ಇವರು ಭಾಗವಹಿಸಿ ಮಕ್ಕಳಿಗೆ ಹಿತವಚನ ನೀಡಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ಹಾಗೂ ಪುಸ್ತಕ ಮತ್ತು ಪೆನ್ ವಿತರಣೆ ಮಾಡಿದರು. ಗ್ರಂಥಾಲಯ ಸಲಹಾ ಸಮಿತಿ ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿಗಳಾದ ಶ್ರೀಮತಿ ಯಶೋಧ ಶ್ರೀಮತಿ ಸೌಮ್ಯ ದಿಲೀಪ್ ಕುಲಾಲ್ ಸುಲೋಚನಾ ಇವರು ಕಾರ್ಯಕ್ರಮದಲ್ಲಿ ಸಹಕರಿಸಿ ಗ್ರಂಥಾಲಯ ಮೇಲ್ವಿಚಾರಕರು ಶ್ರೀಮತಿ ವಸಂತಿ ಕಾರ್ಯಕ್ರಮ ನಡೆಸಿಕೊಟ್ಟರು.

Related posts

ತೆಕ್ಕಾರು ಪ್ರಾ.ಕೃ.ಪ.ಸ. ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸಾಧನ ಪ್ರಶಸ್ತಿ

Suddi Udaya

ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ: ಉಜಿರೆಯಲ್ಲಿ ಮ್ಯಾರಥಾನ್ ಓಟ

Suddi Udaya

ಗುರುವಾಯನಕೆರೆ ಹರಿಯಪ್ಪ ಮೂಲ್ಯರ ಮನೆಯ ಎದುರಿನ ಎರಡು ತೆಂಗಿನ ಮರಗಳಿಗೆ ಬಡಿದ ಸಿಡಿಲು

Suddi Udaya

ಮೈರೋಳ್ತಡ್ಕ ಇದರ ಸಂಯುಕ್ತ ಆಶ್ರಯದಲ್ಲಿ 35ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

Suddi Udaya

ಬೆಳ್ತಂಗಡಿ ಎಸ್. ಡಿ .ಎಮ್ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ವಿಡಿಯೋ: ಯುವಕನ ಮೇಲೆ ಪ್ರಕರಣ ದಾಖಲು

Suddi Udaya
error: Content is protected !!