September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರತಿಭಟನೆವರದಿ

ಮಲೆಕುಡಿಯ ಕಾಲನಿ ರಸ್ತೆಯ ಅವ್ಯವಸ್ಥೆಗೆ ತೀವ್ರ ಆಕ್ರೋಶ: ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಚುನಾವಣಾ ಬಹಿಷ್ಕಾರದ ಕೂಗು…

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಮುಳಿಕ್ಕಾರಿನ ಮಲೆಕುಡಿಯ ಕಾಲನಿಯ ಸತ್ಯ ಕಥೆ. ಇಲ್ಲಿ 80 ಕ್ಕೂ ಹೆಚ್ಚು ಮಲೆಕುಡಿಯ ಸಮುದಾಯದ ಕುಟುಂಬಗಳು ತಲೆತಲಾಂತರಗಳಿಂದಲೂ ವಾಸಿಸುತ್ತಿದೆ. ಇಲ್ಲಿ 10 ಕ್ಕೂ ಹೆಚ್ಚು ಇತರ ಜಾತಿಯ ಕುಟುಂಬಗಳೂ ಇವೆ. ಇಲ್ಲಿಯ ರಸ್ತೆ ಇಂದಿಗೂ ಪಕ್ಕಾ ಮಣ್ಣಿನ ರಸ್ತೆ. ರಸ್ತೆಯಲ್ಲಿ ಬಾರಿ ಗಾತ್ರದ ಕಲ್ಲುಗಳು , ಮರದ ಬೇರುಗಳು ಜೊತೆಗೆ ರಸ್ತೆ ಮಧ್ಯೆದಲ್ಲೇ ಪ್ರಕೃತಿ ರೂಪಿಸಿದ ತಾತ್ಕಾಲಿಕ ಚರಂಡಿ ಇದರಲ್ಲಿಯೇ ಜನ , ವಾಹನ ಸಂಚಾರ. ತುರ್ತು ಅಗತ್ಯಗಳಿಗೆ ಆಂಬುಲೆನ್ಸ್ ವಾಹನಗಳೂ ಕೂಡ ಇಲ್ಲಿ ಬರಲು ಒಪ್ಪಲ್ಲ ಅಂತಹ ದುಸ್ಥಿತಿ.ರಸ್ತೆಯ ಡಾಮರೀಕರಣ ಅಥವಾ ಕಾಂಕ್ರೀಟಿಕರಣಕ್ಕಾಗಿ ಹೋರಾಟದ ಅಂತಿಮ ಹೆಜ್ಜೆ ಚುನಾವಣಾ ಬಹಿಷ್ಕಾರ.

ಈ ರಸ್ತೆಯು ಕೊಲ್ಪೆ , ನೆಲ್ಲಿಕಟ್ಟೆ , ಮುಳಿಕ್ಕಾರು ಪ್ರದೇಶಕ್ಕೆ 5 ಕಿಮೀ , ಇಲ್ಲಿಂದ ಭೀಮಂಡೆ ಪ್ರದೇಶದ 6 ಕಿಮೀ ರಸ್ತೆ ಅವ್ಯವಸ್ಥೆಯ ಬಗ್ಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ, ಜಿಲ್ಲಾ ಪಂಚಾಯತ್ ವರೆಗೂ , ಸಮಾಜ ಕಲ್ಯಾಣ ಇಲಾಖೆ , ಗಿರಿಜನ ಕಲ್ಯಾಣ ಇಲಾಖೆಯಿಂದಿ ಹಿಡಿದು ಸರ್ಕಾರದ ವರೆಗೂ , ಗ್ರಾಮ ಪಂಚಾಯತ್ ನ ಸದಸ್ಯನಿಂದ ತಾಲೂಕು , ಜಿಲ್ಲಾ ಪಂಚಾಯತ್ ಸದಸ್ಯರ ವರೆಗೂ , ಶಾಸಕ , ಸಂಸದರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಅಧಿಕಾರಿಗಳು ಯಾವುದೋ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಂತೆ ಬಂದು ಹೋಗಿದ್ದು ಬಿಟ್ಟರೆ ಉಳಿದ ಯಾವುದೇ ಕೆಲಸವಾಗಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ ಈ ಪ್ರದೇಶದ ಜನರು.

ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಪ್ರದೇಶದ ಕೋಲ್ಪೆಯಿಂದ ನೆಲ್ಲಿಕಟ್ಟೆ ; ಪಿಜತಡ್ಕದಿಂದ ಭೀಮಂಡೆವರೆಗಿನ ರಸ್ತೆಯ ಅವ್ಯವಸ್ಥೆಯ ಸರಿ ಪಡಿಸಲು ಹೋರಾಟದ ಅಂತಿಮ ಭಾಗವಾಗಿ ಚುನಾವಣಾ ಬಹಿಷ್ಕಾರ ಹಾಕಲಾಗಿದೆ. ಭೀಮಂಡೆ ಪ್ರದೇಶದಲ್ಲಿ 26 , ಕೊಲ್ಪೆ 20 , ನೆಲ್ಲಿಕಟ್ಟೆ 15 , ಕುದ್ರಾಯ 3 ಮತ್ತು ಹೊಳೆಬದಿ 13 ಹೀಗೆ ಒಟ್ಟು 77 ಮಲೆಕುಡಿಯ ಸಮುದಾಯ ವಾಸವಾಗಿರುವ ಈ ರಸ್ತೆಯ ಅಭಿವೃದ್ಧಿಗಾಗಿ ಈ ತನಕವೂ ಜನಪ್ರತಿನಿಧಿಗಳು , ಅಧಿಕಾರಿಗಳು ಮುಂದಾಗಲಿಲ್ಲ.ಇಂತಹ ನಿರ್ಲಕ್ಷ್ಯತೆಯ ವಿರುದ್ಧದ ಅಂತಿಮ ಹೋರಾಟದ ಭಾಗವೇ ಚುನಾವಣಾ ಬಹಿಷ್ಕಾರಎಂದು ಇಲ್ಲಿನ ಜನರ ನಿಧ೯ರಿಸಿದ್ದಾರೆ.

Related posts

ಬೆಳ್ತಂಗಡಿ ಶ್ರೀ ಗುರುದೇವ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ

Suddi Udaya

ಬೆಳ್ತಂಗಡಿ: ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆಗಳ ಸಭೆ

Suddi Udaya

ದೇಯಿ ಬೈದೇತಿ ಆಯುರ್ವೇದ ಕೇಂದ್ರದ ಕಟ್ಟಡ ಕಾಮಗಾರಿಗೆ ಸರ್ಕಾರದ ಅನುದಾನಕ್ಕೆ ಮನವಿ

Suddi Udaya

ಬಂದಾರು: ಕೋಡಿಮಜಲು ನಿವಾಸಿ ಕುಕ್ಕಪ್ಪ ಗೌಡ ನಿಧನ

Suddi Udaya

ಕೊಕ್ಕಡ: ಕಲ್ಲಡ್ಕ ನಿವಾಸಿ ಬಾಬು ಮಲೆಕುಡಿಯ ನಿಧನ

Suddi Udaya

ಕೊಕ್ಕಡ: ಉಪ್ಪಾರಪಳಿಕೆ ವಿ.ಹಿಂ.ಪ. ಭಜರಂಗದಳ ಮತ್ತು ಶ್ರದ್ಧಾ ಗೆಳೆಯರ ಬಳಗದ ವತಿಯಿಂದ ಗೋಪೂಜೆ ಹಾಗೂ ದೋಸೆ ಹಬ್ಬ

Suddi Udaya
error: Content is protected !!