23.9 C
ಪುತ್ತೂರು, ಬೆಳ್ತಂಗಡಿ
September 30, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪುತ್ತೂರುಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ದೈವದೇವರ ಅವಹೇಳನ ಆರೋಪ: ಕಲಾವಿದರ ವಿರುದ್ಧ ದೂರು

ಬೆಳ್ತಂಗಡಿ: ಟಿವಿ ಚಾನೆಲ್‌ವೊಂದರ ಕಾರ್ಯಕ್ರಮದಲ್ಲಿ ತುಳುನಾಡಿನ ದೈವಗಳ ಬಗ್ಗೆ ಮತ್ತು ಹಿಂದೂ ಧರ್ಮದ ಸಂಸ್ಕೃತಿಯ ಬಗ್ಗೆ ತೀರಾ ಕೆಳಮಟ್ಟದಲ್ಲಿ ಅಪಹಾಸ್ಯ ಮಾಡಿ ದೈವದೇವರ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಕಲಾವಿದರ ವಿರುದ್ಧ ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಬೆಳಂದೂರು ಗ್ರಾಮದ ಧನ್ಯಕುಮಾರ್ ಟಿ ಅವರು ದೂರು ನೀಡಿದವರು. ನಾನು ನನ್ನ ಮೊಬೈಲ್ ವೀಕ್ಷಿಸುತ್ತಿರುವಾಗ ಒಂದು ವಿಡಿಯೋ ಕಂಡು ಬಂದಿದ್ದು, ಅದರಲ್ಲಿ ಖಾಸಗಿ ಟಿವಿ ಚಾನೆಲ್ ಕಾರ್ಯಕ್ರಮದಲ್ಲಿ ಕಾಳಮ್ಮನ ವಿಚಾರವಾಗಿ ಪ್ರಸ್ತಾಪಿಸಿ ತುಳುನಾಡ ದೈವಗಳ ಬಗ್ಗೆ ಮತ್ತು ಹಿಂದೂ ಧರ್ಮದ ಸಂಸ್ಕೃತಿಯ ಬಗ್ಗೆ ತೀರಾ ಕೆಳಮಟ್ಟದಲ್ಲಿ ಅಪಹಾಸ್ಯ ಮಾಡಿ ದೈವದೇವರ ಅವಹೇಳನ ಮಾಡಿದ್ದು, ಇದನ್ನು ನೋಡಿ ನನ್ನ ಮನಸ್ಸಿಗೆ ತೀವ್ರ ಘಾಸಿಯಾಗಿದ್ದು, ನನ್ನ ಧಾರ್ಮಿಕ ಭಾವನೆಗೆ ಧಕ್ಕೆಯಾಗಿರುತ್ತದೆ. ಆದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದವರನ್ನು ವಿಚಾರಣೆಗೆ ಒಳಪಡಿಸಿ ಸೂಕ್ತ ಕಾನುನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ದೂರು ಅರ್ಜಿಯನ್ನು ಸ್ವೀಕರಿಸಿ, ಈ ಕುರಿತು ದೂರು ಅರ್ಜಿಯಲ್ಲಿ ನಮೂದಿಸಿದ ವಿಚಾರದ ಬಗ್ಗೆ ಕೂಲಂಕೂಷವಾಗಿ ಪ್ರಾಥಮಿಕ ತನಿಖೆಯನ್ನು ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂಬರಹ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Related posts

ಮಹಿಳಾ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡು, ಕ್ಷೇತ್ರ‌ ಪುನರ್ ವಿಂಗಡನೆ ಮೂಲಕ ಅಧಿಕಾರ ಹಿಡಿಯಲು ಯತ್ನಿಸಿದ ಬಿಜೆಪಿಗೆ ಮುಖಭಂಗ- ರಕ್ಷಿತ್ ಶಿವರಾಂ

Suddi Udaya

ತಾಲೂಕು ತಹಶೀಲ್ದಾರರ ಭರವಸೆ: ಅಕ್ರಮ ಮರಳುಗಾರಿಕೆ ಹಾಗೂ ಕಳಪೆ ಮಟ್ಟದ ಕಾಮಗಾರಿಗಳ ತನಿಖೆಗೆ ಒತ್ತಾಯಿಸಿ ಶೇಖರ್ ಲಾಯಿಲ ನಡೆಸುತ್ತಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕ್ರಿಟಿಕಲ್ ಫಂಡ್ ಚೆಕ್ ವಿತರಣೆ

Suddi Udaya

ಮಿತ್ತಬಾಗಿಲು ಕುಕ್ಕಾವು ರಕ್ಷಾಬಂಧನ ಸಡಗರ

Suddi Udaya

ಸುಲ್ಕೇರಿ: ಅನುದಾನಿತ ಖಾಸಗಿ ಹಿ.ಪ್ರಾ. ಹಾಗೂ ಶ್ರೀರಾಮ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲಾ ಸಂಸತ್ತು ಚುನಾವಣೆ

Suddi Udaya
error: Content is protected !!