23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಶ್ರೀ ಪಾಂಡುರಂಗ ಶಾಖೆಯ ವಾರ್ಷಿಕೋತ್ಸವ ವೈಭವ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪಾಂಡುರಂಗ ಶಾಖೆಯ ವಾರ್ಷಿಕೋತ್ಸವವು ಅತ್ಯಂತ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಪಣೆಜಾಲ್ ನ ಸಂಭ್ರಮ ಸಭಾ ಭವನದಲ್ಲಿ ನೆರವೇರಿತು. ಯೋಗದ ಮಹತ್ವವನ್ನು ಸಾರುವ ಈ ಕಾರ್ಯಕ್ರಮದಲ್ಲಿ ಅನೇಕ ಯೋಗಬಂಧುಗಳು, ಯೋಗೇತರ ಬಂಧುಗಳು ಹಾಗೂ ಗಣ್ಯರು ಭಾಗವಹಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರಿನ ಹಿರಿಯ ಯೋಗ ಶಿಕ್ಷಕರಾದ ರವೀಶ್ ಭಾಗವಹಿಸಿ, ಯೋಗವು ಆರೋಗ್ಯಕರ ಜೀವನಕ್ಕೆ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರೂ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಭಾ ಅಧ್ಯಕ್ಷತೆಯನ್ನು ಪಾಂಡುರಂಗ ಶಾಖೆಯ ಸಂಚಾಲಕರಾದ ದಿನೇಶ್ ವಹಿಸಿಕೊಂಡು, ಶಾಖೆಯ ಬೆಳವಣಿಗೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ನಮ್ಮ ಮನೆ ಶಾಖೆಯ ಸಂಚಾಲಕರಾದ ಸುಮಲತಾ ಉಪಸ್ಥಿತರಿದ್ದರು.
ಪಾಂಡುರಂಗ ಶಾಖೆಯ ಆನಂದ ಸ್ವಾಗತಿಸಿ, ವಾರ್ಷಿಕ ವರಧಿಯನ್ನು ಪಾಂಡುರಂಗ ಶಾಖೆಯ ಶಿಕ್ಷಕ ದಯಾನಂದ ವಾಚಿಸಿದರು. ಪಾಂಡುರಂಗ ಶಾಖೆಯ ಜಯಂತಿ ಧನ್ಯವಾದವಿತ್ತರು. ಚಿದಾನಂದ ಇಡ್ಯಾ ರವರ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ನಮ್ಮ ಮನೆ ಶಾಖೆ, ಶ್ರೀ ಪಾಂಡುರಂಗ ಶಾಖೆ ಹಾಗೂ ಮದ್ದಡ್ಕ ಶಾಖೆಯ ಯೋಗ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಪಾಂಡುರಂಗ ಶಾಖೆಯ ಯೋಗ ಬಂಧು ವಿಧ್ಯಾ ವಿಶೇಷ ಮುತುವರ್ಜಿಯಿಂದ ಹಿರಿಯ ಯೋಗ ಬಂಧುಗಳಾದ ರಾಮಕೃಷ್ಣ , ಯೋಗೀಶ್ ರವರ ಸಲಹೆ ಸಹಕಾರದೊಂದಿಗೆ ಪಾಂಡುರಂಗ ಶಾಖೆ, ನಮ್ಮ ಮನೆ ಶಾಖೆ ಮದ್ದಡ್ಕ ಶಾಖೆಯ ಯೋಗ ಬಂಧುಗಳ ಒಗ್ಗೂಡುವಿಕೆಯಿಂದ ಶಿಕ್ಷಕರಾದ ಪ್ರದೀಪ್, ಆನಂದ ಸಹಕಾರದಿಂದ ನಡೆಯಿತು.

Related posts

ಲಾಯಿಲ ಶ್ರೀ ರಾಘವೇಂದ್ರ ಸ್ವಾಮಿಗಳ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಆಮಂತ್ರಣ ಸೇವಾ ಪ್ರತಿಷ್ಠಾನ ಗೌರವ ಸಲಹೆಗಾರರಾಗಿ ಕಿರಣ್‌ಚಂದ್ರ ಡಿ.ಪುಷ್ಪಗಿರಿ

Suddi Udaya

ತೋಟತ್ತಾಡಿ: ವಿದ್ಯುತ್ ಅವಘಡದಿಂದ ಗುಡ್ಡಕ್ಕೆ ಬೆಂಕಿ

Suddi Udaya

“ಕಲಾ -ಸಂಭ್ರಮ 2024” ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಳದಂಗಡಿ ಸರಕಾರಿ ಪ್ರೌಢ ಶಾಲೆಗೆ ಪ್ರಶಸ್ತಿ

Suddi Udaya

ತಣ್ಣೀರುಪಂತ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ. 306.80ಕೋಟಿ ವ್ಯವಹಾರ, ರೂ. 1.09 ಕೋಟಿ ಲಾಭ, ಶೇ.12 ಡಿವಿಡೆಂಡ್

Suddi Udaya

ಸರಕಾರಿ ನೌಕರರ ಕ್ರೀಡಾಕೂಟ: ಯೋಗಾಸನ ಸ್ಪರ್ಧೆಯಲ್ಲಿ ರೆಖ್ಯದ ಬಾಲಕೃಷ್ಣರವರಿಗೆ ಚಿನ್ನದ ಪದಕ

Suddi Udaya
error: Content is protected !!