23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಂಡಿಂಜೆ ಗ್ರಾಮ ಪಂಚಾಯತ್ ಹಾಗೂ ಒಕ್ಕೂಟದ ವತಿಯಿಂದ ರೈತ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ : ಕೃಷಿ ಇಲಾಖೆ ಬೆಳ್ತಂಗಡಿ , ಗ್ರಾಮ ಪಂಚಾಯತ್ ಅಂಡಿಂಜೆ , ನಿಸರ್ಗ ಸಂಜೀವಿನಿ ಗ್ರಾಮ್ ಪಂಚಾಯತ್ ಮಟ್ಟದ ಒಕ್ಕೂಟ ಅಂಡಿಂಜೆ ಇದರ ಸಂಯುಕ್ತ ಆಶ್ರಯದಲ್ಲಿ “ಸಮತೋಲನ ರಸ ಗೊಬ್ಬರಗಳ ಬಳಕೆ ಹಾಗೂ ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ “ಒಂದು ದಿನದ ರೈತ ತರಬೇತಿಯನ್ನು ಮೇ 15 ರಂದು ಅಂಡಿಂಜೆ ಪಂಚಾಯಿತಿ ಸಭಾಂಗಣದಲ್ಲಿ ಒಕ್ಕೂಟದ ಉಪಾಧ್ಯಕ್ಷೆ ರಮಣಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ತರಬೇತಿ ಕಾರ್ಯಾಗಾರವನ್ನು ಪ್ರಗತಿಪರ ಕೃಷಿಕರು ಸಾವ್ಯ ಬಾಲಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಕೃಷಿ ಅಧಿಕಾರಿ ಗಣೇಶ್ ಆಡಿಗ ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾದ ವಿಜ್ಞಾನಿ ಡಾI ಮಲ್ಲಿಕಾರ್ಜುನ ತರಬೇತಿಯನ್ನು ಪ್ರಾರಂಭಿಸಿ ಸಮತೋಲನ ರಸಗೊಬ್ಬರಗಳ ಬಳಕೆ ಹಾಗೂ ಮಣ್ಣು ಪರೀಕ್ಷೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಸಹಾಯ ಕೃಷಿ ನಿರ್ದೇಶಕರಾದ ವೀರಭದ್ರಪ್ಪ ಮಾತನಾಡಿ ರಸಗೊಬ್ಬರದ ಬಳಕೆ , ಮಣ್ಣು ಪರೀಕ್ಷೆಗೆ ಮಣ್ಣು ತೆಗೆಯುವ ವಿಧಾನ , ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯ, ವಿವಿಧ ರೀತಿಯ ಕಾಳು ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸಿದರು. ಕಳೆನಾಶಕಗಳನ್ನು ಬೆಳೆಗನುಗುಣವಾಗಿ ಬಳೆಸಬೇಕು, ಪೊಟ್ಯಾಶಿಯಂನ ಮಹತ್ವ, ಮುಂತಾದ ವಿಷಯದ ಬಗ್ಗೆ ಮಾಹಿತಿ ನೀಡಿದರು.

ತರಬೇತಿಯಲ್ಲಿ ಸಂಜೀವಿನಿ ಅಭಿಯಾನ ಘಟಕದ ವ್ಯವಸ್ಥಾಪಕರು ಕೃಷಿ ಬಂಗಾರಪ್ಪ , ಒಕ್ಕೂಟದ ಅಧ್ಯಕ್ಷರು, ಆತ್ಮ ಯೋಜನೆಯ ಸಿಬ್ಬಂದಿ ಅಭಿಲಾಶ್, ಪ್ರಗತಿಪರ ಕೃಷಿಕರಾದ ಸಾವ್ಯ ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಅಂಡಿಂಜೆ, ಸಾವ್ಯ, ಕೊಕ್ರಾಡಿ ಗ್ರಾಮದ ರೈತರು , ಒಕ್ಕೂಟದ ಪದಾಧಿಕಾರಿಗಳು, ಒಕ್ಕೂಟದ ಸಿಬ್ಬಂದಿಗಳು, ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.

ಕೃಷಿ ಸಖಿ ಶ್ರೀಮತಿ ವತ್ಸಲಾ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಶೀನ ಕಾರ್ಯಕ್ರಮ ನಿರೂಪಿಸಿದರು. ಪಶು ಸಖಿ ಶ್ವೇತಾ ಧನ್ಯವಾದ ನೀಡಿದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭೇಟಿ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಕೊಯ್ಯೂರು: ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಮಕ್ಕಳ ಕುಣಿತ ಭಜನಾ ತಂಡದ ಉದ್ಘಾಟನಾ ಕಾರ್ಯಕ್ರಮ

Suddi Udaya

ಬಂಗಾಡಿ ಸಹಸ್ರ ನಾಗಬನದಲ್ಲಿ ಶ್ರೀ ಅಷ್ಟಪವಿತ್ರ ನಾಗಬ್ರಹ್ಮಲಿಂಗೇಶ್ವರ ದೇವರು ಮತ್ತು ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ

Suddi Udaya

ಮುಂಡಾಜೆ ಕೀರ್ತನಾ ಕಲಾತಂಡದಿಂದ ದೀಪಾವಳಿ ಹಬ್ಬದ ಪ್ರಯುಕ್ತ ಅವಲಕ್ಕಿ– ಬೆಲ್ಲ ವಿತರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ಜಿತೇಶ್, ಕಾರ್ಯದರ್ಶಿಯಾಗಿ ರಕ್ಷಿತ್ ಅಂಡಿಂಜೆ ಆಯ್ಕೆ

Suddi Udaya
error: Content is protected !!