28.1 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿಸಂಘ-ಸಂಸ್ಥೆಗಳು

ಉಜಿರೆಯಲ್ಲಿ 5ನೇ ವರ್ಷದ ಕೇರಳ ಸಾಂಪ್ರದಾಯಿಕ “ವಿಷುಕಣಿ” ಆಚರಣೆ

ಉಜಿರೆ: ವಿಷುಕಣಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಶಾಸಕರಾದ ಹರೀಶ್ ಪೂಂಜರವರ ನೇತೃತ್ವದಲ್ಲಿ ನಡೆಯುವ 5ನೇ ವರ್ಷದ ಕೇರಳ ಸಾಂಪ್ರದಾಯಿಕ ವಿಷುಕಣಿ ಆಚರಣೆಯು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಶಾಸಕ ಹರೀಶ್ ಪೂಂಜರವರು ಉದ್ಘಾಟನೆಗೊಳಿಸಿದರು.

ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯದ ಮುಖ್ಯಸ್ಥರಾದ ಡಾ.ಕೃಷ್ಣಪ್ರಸಾದ್ ಅವರು ಭಾಗವಹಿಸಿ ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುವ ಎಲ್ಲಾ ಜನಪರ ವಿಶೇಷ ಕಾರ್ಯಕ್ರಮಗಳು ಇನ್ನೂ ಮುಂದೆಯೂ ಶಾಸಕರ ನೇತೃತ್ವದಲ್ಲಿ ನಡೆಯಲಿ. ನಾವೆಲ್ಲಾ ಹಿಂದೂ ಎಲ್ಲಾ ಸಮುದಾಯದವರು ನನ್ನವರು ಎಂದು ಭಾವನೆ ಇನ್ನಷ್ಟೂ ಮೂಡಲಿ ಎಂದ ಅವರು ಶಾಸಕರ ಪತ್ರಮುಖೇನಾ ನಮ್ಮ ನೇತ್ರಾಲಯಕ್ಕೆ ಯಾರಾದರೂ ಅಂಧ ವ್ಯಕ್ತಿಗಳು ಬಂದರೆ ಅಂತವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗುವುದು, ಶಾಸಕರ ಸಹಯೋಗದೊಂದಿಗೆ ಬೆಳ್ತಂಗಡಿಯನ್ನು ಅಂಧಮುಕ್ತವನ್ನಾಗಿ ಮಾಡಲಾಗುವುದು‌ ಎಂದರು.

ಈ ಸಂದರ್ಭದಲ್ಲಿ ಖ್ಯಾತ ವಕೀಲರಾದ ಉಮೇಶ್ ಟಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀನಿವಾಸ್ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಮನ್ ಕಿ ಭಾತ್ ಪ್ರಮುಖರಾದ ಸೀತಾರಾಮ ಬೆಳಾಲು, ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಹರೀಸದ್ ಕಳೆಂಜ, ಯಶವಂತ್ ಪುದುವೆಟ್ಟು, ಉಜಿರೆ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರುಗಾಳಾದ ಉಷಾ ಕಾರಂತ್, ಪುಷ್ಪ ಆರ್ ಶೆಟ್ಟಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ವಿಷು ಕಣಿ ಆಚರಣಾ ಸಮಿತಿಯವರಾದ ಅನಿಲ್ ಶಿಬಾಜೆ, ಬಾಲಕೃಷ್ಣ ನೈಮಿಷ, ಪ್ರಸಾದ್ ಬಿ.ಎಸ್, ದಿವಿನೇಶ್ ಹಾಗೂ ಸದಸ್ಯರು, ಮುಖಂಡರಾದ ಸದಾನಂದ ಉಂಗಿಲಬೈಲು, ಸುಪ್ರಿತ್ ಜೈನ್, ಶಶಿಕಲಾ ಅರಳಿ,ಪ್ರಸಾದ್ ಕೆವಿ, ಉಪಸ್ಥಿತರಿದ್ದರು‌‌.

Related posts

ಶಿರ್ಲಾಲು: ಬಸ್ಸ್ ಚಾಲಕ, ಯುವಕ ಶಶಿಧರ ದೇವಾಡಿಗ ನಿಧನ

Suddi Udaya

ವಿ.ಹಿಂ.ಪ. ಬಜರಂಗದಳ ಮಾತೃಮಂಡಳಿ ದುರ್ಗವಾಹಿನಿ ಹಾಗೂ ಮುಂಡಾಜೆ ಮಂಜುಶ್ರೀ ಭಜನಾಮಂಡಳಿಯಿಂದ ಧನಸಹಾಯ ಹಾಗೂ ದಿನಸಿ ಸಾಮಾಗ್ರಿ ವಿತರಣೆ

Suddi Udaya

ಮಿತ್ತಬಾಗಿಲು ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರಿಗೆ ಸನ್ಮಾನ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ಪಟ್ಟಣ ಪ೦ಚಾಯತ್ ಎದುರು ಪ್ರತಿಭಟನೆ

Suddi Udaya

ಮಾ.22: ಉಜಿರೆಯಲ್ಲಿ 500 ವಿದ್ಯಾರ್ಥಿ ಕಲಾವಿದರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ

Suddi Udaya

ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

Suddi Udaya
error: Content is protected !!