31.2 C
ಪುತ್ತೂರು, ಬೆಳ್ತಂಗಡಿ
September 30, 2026
ಧಾರ್ಮಿಕವರದಿ

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ

ಬೆಳಾಲು: ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಇದರ ಪ್ರತಿಷ್ಠಾ ವರ್ಧoತ್ಯುತ್ಸವ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಡಾ|ಡಿ. ವೀರೇಂದ್ರ ಹೆಗ್ಗಡೆಯವರ ಶುಭ ಆಶೀರ್ವಾದದೊಂದಿಗೆ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮೇ 16ರಂದು ಅತ್ಯಂತ ವಿಜ್ರಂಭಣೆಯಿಂದ ನಡೆಯಿತು.

ಬೆಳಗ್ಗೆ ಶ್ರೀ ದೇವರಿಗೆ ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ ರಾತ್ರಿ ಪ್ರಸನ್ನ ರಂಗ ಪೂಜೆ ಮತ್ತು ಶ್ರೀದೇವರ ಉತ್ಸವ ಬಲಿ ನಡೆಯಿತು. ವಾರ್ಷಿಕ ಮಹಾಸಭೆ ಹಾಗೂ ಲೆಕ್ಕ ಪತ್ರ ಮಂಡಿಸಲಾಯಿತು. ದೇವಸ್ಥಾನದಲ್ಲಿ ಕುಮಾರಿ ಕೃಷ್ಣಪ್ರಿಯಾ ಆಚಾರ್ ಮುರುಳ್ಯ ಇವರಿಂದ ಸಂಗೀತ ಕಚೇರಿ ಹಾಗೂ ಸಮರ್ಥ್ ಪರ್ಲತ್ತಾಯ ಮಾಯಾ ಇವರಿಂದ ಕೊಳಲು ವಾದನ, ಸುಪ್ರೀತಾ ಕೋರ್ನಾಯ ಇವರಿಂದ ಪಿಟೀಲು ವಾದನ ವರ್ಚಸ್ ಕೋರ್ನಾಯ ಧರ್ಮಸ್ಥಳ ಇವರಿಂದ ಮೃದಂಗ ವಾದನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಅಸ್ರಣ್ಣರಾದ ಗಿರೀಶ್ ಭಾರಿತ್ತಾಯ ಪಾರಲ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಗೌಡ ವಕೀಲರು, ಉಪಾಧ್ಯಕ್ಷರಾದ ಮಮತಾ ದಿನೇಶ್ ಪೂಜಾರಿ ಉಪ್ಪಾರ್, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕೆಮ್ಮಣ್ಣಾಯ, ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ, ಮಹಿಳಾ ಸಮಿತಿಯ ಗೌರವಾಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ, ಮಹಿಳಾ ಸಮಿತಿಯ ಅಧ್ಯಕ್ಷರಾದ ಹೇಮಲತಾ ಶ್ರೀನಿವಾಸ ಗೌಡ ಗಣಪನಗುತ್ತು, ಭಜನಾ ಮಂಡಳಿ ಅಧ್ಯಕ್ಷರಾದ ಹರೀಶ್ ಪೋಸೊಟ್ಟು, ಸಮಿತಿ ಹಿರಿಯ ಸದಸ್ಯರಾದ ಬೆಳಾಲು ಗುತ್ತು ಮನೆಯ ಹೇಮಲತಾ ಜೀವಂದರ್ ಕುಮಾರ್ ಜೈನ್,ಉದಿತ್ ಕುಮಾರ್ ಜೈನ್ ಕುಜುಂಬೊಟ್ಟು, ದೇಜಪ್ಪ ಗೌಡ ಅರಣೆಮಾರು ,ಲಿಂಗಪ್ಪ ಪೂಜಾರಿ ಬನಂದೂರು, ಬಾಬು ಗೌಡ ಅಲಕ್ಕೆ ದಡ್ಡ, ಸರೋಜಿನಿ ಬೀಮಂಡೆ , ದೇವಸ್ಥಾನದ ಲೆಕ್ಕಪರಿಶೋಧಕರಾದ ನಾರಾಯಣಗೌಡ ಎಳ್ಳುಗದ್ದೆ, ಹಾಗೂ ಸದಸ್ಯರಾದ ಶ್ರೀನಿವಾಸ ಗೌಡ ಗಣಪನ ಗುತ್ತು, ಸುಂದರ ಎಂ ಕೆ ಬೆಳಾಲು, ಜಾರಪ್ಪ ಗೌಡ ಅರಣೆ ಮಾರು ಹಾಗೂ ಸಮಿತಿ ಸದಸ್ಯರು ಭಜನ ಮಂಡಳಿ ಸದಸ್ಯರು ಮಹಿಳಾ ಸಮಿತಿ ಸದಸ್ಯರು ಹಾಗೂ ಬೈಲುವಾರು ಸಂಚಾಲಕರು ಹಾಗೂ ಸಹ ಸಂಚಾಲಕರು ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮ ಸಂಪನ್ನಗೊಂಡಿತು.

Related posts

ಎಸ್.ಐ.ಟಿ ತಂಡ ಬೆಳ್ತಂಗಡಿ ಕಚೇರಿಗೆ ಆಗಮನ: ಇಂದು ತಲೆಬುರುಡೆ ತೆಗೆದ ಸ್ಥಳ ಮಹಜರು ಸಾಧ್ಯತೆ

Suddi Udaya

ಇಂದು(ಮಾ.20): ಈದುಲ್ ಫಿತರ್ ಹಬ್ಬದ ಆಚರಣೆ: ದ.ಕ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ

Suddi Udaya

ಸುಲ್ಕೇರಿ ಗ್ರಾ.ಪಂ. ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಪಡ್ಡಂದಡ್ಕ: ಮಂಜನಬೆಟ್ಟು ಶ್ರೀ ನಾಗಬ್ರಹ್ಮ ಪರಿವಾರ ಸಾನಿಧ್ಯಗಳ ಪುನರ್ ಪ್ರತಿಷ್ಠೆ-ಎ.5 ನೂತನ ಶಿಲಾಮಯ ಶ್ರೀ ನಾಗದೇವರ ಬಿಂಬಗಳ ಜಲಾಧಿವಾಸ

Suddi Udaya

ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ 29ನೇ ಪದವಿ ಪ್ರದಾನ ಸಮಾರಂಭ

Suddi Udaya

ಬೈಕ್ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಬೆಳಾಲಿನ ಶೀನಪ್ಪ ಗೌಡ ನಿಧನ

Suddi Udaya
error: Content is protected !!