23.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ಪಾದ ತಪಾಸಣಾ ಶಿಬಿರ

ಉಡುಪಿ: ಮಧುಮೇಹ ರೋಗಿಗಳಲ್ಲಿ ಪಾದದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಗಂಭೀರ ಪರಿಣಾಮಗಳು ಹಾಗೂ ಅಂಗಚ್ಛೇದನವನ್ನು ತಡೆಗಟ್ಟುವ ಉದ್ದೇಶದಿಂದ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿ ಇದರ ಶಲ್ಯತಂತ್ರ ವಿಭಾಗವು, PRIAS (Podiatry Reach Across India for Awareness and Screening) ಸಂಸ್ಥೆಯ ಸಹಯೋಗದಲ್ಲಿ, 2026ರ ಮೇ 20 ಮತ್ತು ಮೇ 23ರಂದು ಉಡುಪಿಯ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ಪಾದ ತಪಾಸಣಾ ಶಿಬಿರವನ್ನು ಆಯೋಜಿಸಿದೆ.

ಮಧುಮೇಹದಿಂದಾಗಿ ಪಾದಗಳಲ್ಲಿ ಉಂಟಾಗುವ ನರಗಳ ಸಂವೇದನೆ ಕುಂಠಿತವಾಗುವುದು, ರಕ್ತಪ್ರವಾಹದ ಅಡಚಣೆ ಹಾಗೂ ಪಾದದ ಮೇಲಿನ ಅಸಾಮಾನ್ಯ ಒತ್ತಡದಿಂದ ಹುಣ್ಣುಗಳು ಉಂಟಾಗುವಂತಹ ಸಮಸ್ಯೆಗಳು ಅನೇಕ ಬಾರಿ ಗಂಭೀರ ಸ್ಥಿತಿಗೆ ತಲುಪುತ್ತವೆ. ಇವುಗಳನ್ನು ಸಮಯೋಚಿತ ತಪಾಸಣೆಯ ಮೂಲಕ ತಡೆಗಟ್ಟಬಹುದಾಗಿದೆ.

ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ಆಧುನಿಕ ತಪಾಸಣಾ ಸಾಧನಗಳ ಮೂಲಕ ಕೆಳಕಂಡ ಪರೀಕ್ಷೆಗಳು ನಡೆಸಲಾಗುತ್ತದೆ:
ಪಾದದ ತಳಭಾಗದ ನರಗಳ ಸಂವೇದನೆ (Neuropathy) ತಪಾಸಣೆ, ಕಾಲುಗಳಿಗೆ ರಕ್ತಪ್ರವಾಹ ಸಮರ್ಪಕವಾಗಿದೆಯೇ ಎಂಬುದನ್ನು ತಿಳಿಯುವ ABI ಪರೀಕ್ಷೆ, ಪಾದದ ಮೇಲೆ ಅಸಾಮಾನ್ಯ ಒತ್ತಡದಿಂದಾಗಿ (Abnormal loading) ಕಾರ್ನ್ (Corn) ಅಥವಾ ಕಾಲೋಸಿಟಿ (Callosity) ಉಂಟಾಮಾಡುವ ಸಾಧ್ಯತೆ ಇರುವುದನ್ನು ಪತ್ತೆಹಚ್ಚುವುದು. ಪಾದದ ಹುಣ್ಣನ್ನು ತಡೆಗಟ್ಟುವುದು.

ಮಧುಮೇಹ ರೋಗಿಗಳಲ್ಲಿ ಪಾದದ ಹುಣ್ಣು ಮತ್ತು ಅಂಗಚ್ಛೇದನದ ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಶಿಬಿರ ಅತ್ಯಂತ ಉಪಯುಕ್ತವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಭಾರತದಾದ್ಯಂತ ೬೭ ನಗರಗಳಲ್ಲಿ ಈ ವಿಶೇಷ ಶಿಬಿರ ನಡೆಯುತ್ತಿದೆ. ಸೂಕ್ತ ಮಧುಮೇಹ ರೋಗಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅಗತ್ಯವಿರುವ ರೋಗಿಗಳನ್ನು ಶಿಬಿರಕ್ಕೆ ಕಳುಹಿಸುವಂತೆ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Related posts

ಪಟ್ರಮೆ ಶ್ರೀ ವಿಷ್ಣುಮೂರ್ತಿ ದೇವರ ದೃಶ್ಯ ಭರಿತ ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆ

Suddi Udaya

ಅರಣ್ಯ ಇಲಾಖೆಯ ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ಜನಾರ್ದನ ನಿಧನ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ನಾರಾವಿ ಸಿಎ ಬ್ಯಾಂಕಿಗೆ ಸತತ 5 ವರ್ಷದಿಂದ ಸಾಧನಾ ಪ್ರಶಸ್ತಿ

Suddi Udaya

ಬಂದಾರು : ಮೈರೋಳ್ತಡ್ಕ ಸ.ಉ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya

ಲಾಯಿಲ ಸೇತುವೆ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Suddi Udaya

ಬಂಗಾಡಿ ಶ್ರೀ ವೀರಭದ್ರ ಭದ್ರಕಾಳಿ ಲಿಂಗತ್ಯಾರ್ ನಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya
error: Content is protected !!