25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಾದರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರಿಯಾನ್ಷ್ ಮುಂಡಾಜೆ :ಎಂಡೋ ಪೀಡಿತ ಬಾಲೆಗೆ ಆಹಾರದ ಕಿಟ್, ಆರ್ಥಿಕ ನೆರವು ಹಸ್ತಾಂತರ

ಬೆಳ್ತಂಗಡಿ: ಎಂಡೋ ಪೀಡಿತರಾಗಿ ಹುಟ್ಟಿನಿಂದಲೇ ಬದುಕಿನ ಸಂಕಷ್ಟ ಎದುರಿಸುತ್ತಿರುವ ತೆಂಕಕಾರಂದೂರು ಗ್ರಾಮದ ಪೆರೋಡಿತ್ತಾಯಕಟ್ಟೆ ನಿವಾಸಿ 9 ರ ಬಾಲೆಗೆ ದಿನಸಿ ಸಾಮಾಗ್ರಿ ಮತ್ತು ಆರ್ಥಿಕ ನೆರವು ಹಸ್ತಾಂತರಿಸುವ ಮೂಲಕ ಮುಂಡಾಜೆಯ ಪುಟ್ಟ ಬಾಲಕ ರಿಯಾನ್ಷ್ ತನ್ನ 7 ನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.

ಮುಂಡಾಜೆಯ “ಖುಷಿ ಸ್ಟುಡಿಯೋ” ಮತ್ತು “ಈಶ ಮಲ್ಟಿ ಬ್ರ್ಯಾಂಡ್ ಕಾರ್ ಕೇರ್ ಸೆಂಟರ್” ಇದರ ಮಾಲಿಕರಾಗಿರುವ ರಾಕೇಶ್ ನಾಯ್ಕ್ ಅವರ ಪುತ್ರ ರಿಯಾನ್ಷ್ ಅವರ ಹುಟ್ಟುಹಬ್ಬವನ್ನು ಈ ರೀತಿ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಆಚರಿಸಿದ್ದಾರೆ.
ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರ ಮೂಲಕ ಈ ಅರ್ಹ ಕುಟುಂಬವನ್ನು ಮೇ18 ರಂದು ಅವರ ಬಾಡಿಗೆ ನಿವಾಸದಲ್ಲಿ ಭೇಟಿ ಮಾಡಿ ನೆರವು ಹಸ್ತಾಂತರಿಸಿದರು.

ಕೂಲಿ ಕಾರ್ಮಿಕರಾಗಿರುವ ಪ್ರಶಾಂತ್ ಮತ್ತು ಗೃಹಿಣಿ ಲಾವಣ್ಯ ದಂಪತಿ ಪುತ್ರಿ ಮಾನ್ಯ ಎಂಡೋಸಲ್ಫಾನ್ ಪೀಡಿತೆಯಾಗಿದ್ದು ವಿಶೇಷ ಚೇತನೆಯಾಗಿದ್ದಾರೆ. ದಂಪತಿಯ ಹಿರಿ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Related posts

ವಿದ್ಯಾಮಾತಾದಲ್ಲಿ ತರಬೇತಿ ಪಡೆದ ಬಸವರಾಜ ಮುದವಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆ

Suddi Udaya

ಸುಲ್ಕೇರಿ ಕುಲಾಲ ಕುಂಭಶ್ರೀ ಸಂಘದ ಅಧ್ಯಕ್ಷರಾಗಿ ಜಯ ಮೂಲ್ಯ , ಕಾರ್ಯದರ್ಶಿಯಾಗಿ ರಾಕೇಶ್ ಕುಲಾಲ್ ಆಯ್ಕೆ

Suddi Udaya

ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ

Suddi Udaya

ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ

Suddi Udaya

ಗೃಹಜ್ಯೋತಿ : ಮೆಸ್ಕಾಂ ಶಾಖಾ ಕಚೇರಿ ಹಾಗೂ ಉಪವಿಭಾಗದಲ್ಲೂ ದಾಖಲೀಕರಣಕ್ಕೆ ವ್ಯವಸ್ಥೆ

Suddi Udaya

ಗುರುವಾಯನಕೆರೆ:ವಿವಿಧ ಸ್ಪರ್ಧೆಗಳಲ್ಲಿ ಮಿಂಚಿದ ಎಕ್ಸೆಲ್ ವಿದ್ಯಾರ್ಥಿಗಳು: ಕರಾಟೆಯಲ್ಲಿ ವರ್ಣಿಕ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya
error: Content is protected !!