30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ‌: ಮಸ್ಲಕ್ ನವೀಕೃತ ಮದರಸ ಉದ್ಘಾಟನೆ: ಹಜ್ಜ್ ಯಾತ್ರಿ ಕಾಜೂರು ತಂಙಳ್ ರಿಗೆ ಬೀಳ್ಕೊಡುಗೆ

ಬೆಳ್ತಂಗಡಿ: ಮಸ್ಲಕ್ ಮುಂಡಾಜೆ ಇದರ ಸಂಪೂರ್ಣ ನವೀಕೃತ ಮದರಸದ ಉದ್ಘಾಟನೆ, ಮಾಸಿಕ ಸ್ವಲಾತ್ ಮಜ್ಲಿಸ್‌ ಹಾಗೂ ಸಕುಟುಂಬಿಕರಾಗಿ‌ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಸಯ್ಯಿದ್ ಕಾಜೂರು ತಂಙಳ್ ರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.

ಅಧ್ಯಕ್ಷತೆಯನ್ನು ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಬಶೀರ್ ನೆಕ್ಕರೆ ವಹಿಸಿದ್ದರು. ಸ್ವಲಾತ್ ಕಾರ್ಯಕ್ರಮಕ್ಕೆ ಮಸ್ಜಿದ್ ಖತೀಬ್ ಸಿರಾಜುದ್ದೀನ್ ಸ‌ಅದಿ ಗಡಿಯಾರ್ ನೇತೃತ್ವ ವಹಿಸಿದ್ದರು. ಮದರಸ ನವೀಕರಣಕ್ಕೆ ಸಹಕರಿಸಿದ ಉದ್ಯಮಿಗಳು ಹಾಗೂ‌ ದಾನಿಗಳಾದ ಶಮೀಮ್ ಯೂಸುಫ್ ಹಾಜಿ‌ ಮದ್ದಡ್ಕ,‌ ಯು.ಕೆ ಮುಹಮ್ಮದ್ ಹನೀಫ್ ಉಜಿರೆ, ಸದರ್ ತ್ವಾಹಿರ್ ಸ‌ಅದಿ, ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಶನ್ ಎಸ್.ಎಮ್.ಎ ಉಜಿರೆ ರೀಜಿನಲ್ ಸಮಿತಿ ಮುಖಂಡರಾದ ಹೈದರ್ ಮದನಿ ಉಜಿರೆ, ಇಬ್ರಾಹಿಂ ಸಖಾಫಿ ಕಬಕ, ಹನೀಫ್ ಮುಸ್ಲಿಯಾರ್ ಟಿ.ಹೆಚ್ ನಿಡಿಗಲ್, ಇಸ್ಮಾಯಿಲ್ ಹನೀಫಿ ಉಜಿರೆ ಟೌನ್, ಮುಂಡಾಜೆ ಜಮಾಅತ್ ಪ್ರಮುಖರಾದ ಕರೀಂ‌‌ ಕೆ.ಎಸ್, ಹಾಜಬ್ಬ, ಹಮೀದ್ ನೆಕ್ಕರೆ, ಉಸ್ಮಾನ್ ಎಂ.ಕೆ ಕೂಳೂರು, ಕಾರ್ಯದರ್ಶಿ ಅಶ್ರಫ್ ಇಸ್ಮಾಯಿಲ್ ಕುರುಡ್ಯ, ಕೋಶಾಧಿಕಾರಿ ಅದ್ದು‌ ಹಾಜಿ ರೋಝ, ಅಬ್ಬಾಸ್ ಸಿ, ಶಬೀರ್‌ ಬಿಕೆಹೆಚ್, ಬಾವಾಕ ಮೊದಲಾದವರು‌ ಉಪಸ್ಥಿತರಿದ್ದರು. ಎಸ್ ವೈ ಎಸ್ ಮುಂಡಾಜೆ ಸಮಿತಿ ನೇತೃತ್ವದಲ್ಲಿ ನಡೆದ ಈ‌ನವೀಕರಣಕ್ಕೆ ದೇಣಿಗೆ ಹಾಗೂ ವಸ್ತುರೂಪದ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.

ಈ ವೇಳೆ ಮಂಡಾಜೆ‌ ಜಮಾಅತ್ ವತಿಯಿಂದ‌ ಹಾಗೂ ಉಜಿರೆ ರೀಜಿನಲ್ ಎಸ್.ಎಮ್.ಎ ವತಿಯಿಂದ ಕಾಜೂರು‌ ತಂಙಳ್ ಅವರಿಗೆ ಹಜ್ಜ್‌ಯಾತ್ರೆಗೆ ಬೀಳ್ಕೊಡುಗೆ ನಡೆಯಿತು. ಹೈದರ್ ಮದನಿಯವರೂ‌ ಹಜ್ಜ್ ಯಾತ್ರೆ ಕೈಗೊಳ್ಳುತ್ತಿದ್ದು ಅವರನ್ನೂ‌ ಗೌರವಿಸಲಾಯಿತು.
ಮಾಸಿಕ ಸ್ವಲಾತ್ ನ ದುಆ ಪ್ರಾರ್ಥನೆಗೆ ಕಾಜೂರು ತಂಙಳ್ ನೇತೃತ್ವ ನೀಡಿದರು. ಮಸ್ಲಕ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಸ್ವಾಗತಿಸಿ ಪ್ರಸ್ತಾವನೆಗೈದರು.

ಮದರಸ‌ ನವೀಕರಣದ‌ ಭಾಗವಾಗಿ‌ ಒಳಾಂಗಣದ‌ ಗೋಡೆಯೂ ಸೇರಿದಂತೆ ನೆಲಕ್ಕೆ ಪೂರ್ತಿ‌ ಟೈಲ್ಸ್ ಅಳವಡಿಕೆ, 14 ಸೆಟ್ಟ್ ಹೊಸ ಬೆಂಚ್ ಡೆಸ್ಕ್ ಗಳ, ಫ್ಯಾನ್ ಗಳ ಖರೀದಿ, ಪೈಂಟಿಂಗ್ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ.

Related posts

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Suddi Udaya

ಕೊಕ್ಕಡ: ವಾಮನ ನಾಯ್ಕ ಹೃದಯಾಘಾತದಿಂದ ನಿಧನ

Suddi Udaya

ಲಯನ್ಸ್ ಕ್ಲಬ್ ನಲ್ಲಿ “ಕ್ಲಬ್ ಕ್ವಾಲಿಟಿ ಇನೀಶಿಯೇಟಿವ್” ಕಾರ್ಯಾಗಾರ

Suddi Udaya

ಹಿರಿಯರ ಹಲವು ದಶಕಗಳ ಹೋರಾಟಕ್ಕೆ ಸಂದ ಫಲ: ಸತೀಶ್ ಕೆ. ಕಾಶಿಪಟ್ಣ

Suddi Udaya

ಕಾಶಿಬೆಟ್ಟು ನಿವಾಸಿ ಶತಾಯುಷಿ ಚೆಲುವಮ್ಮ ನಿಧನ

Suddi Udaya

ಬೆಳ್ತಂಗಡಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಆಯುಧ ಪೂಜೆ

Suddi Udaya
error: Content is protected !!