30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭಸಂಘ-ಸಂಸ್ಥೆಗಳು

ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಸೋಮಂತಡ್ಕ ಶಾಖೆಯ ಉದ್ಘಾಟನೆ

ಮುಂಡಾಜೆ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ ನೂತನ ಸೋಮಂತಡ್ಕ ಶಾಖೆಯ ಉದ್ಘಾಟನಾ ಸಮಾರಂಭವು ಮೇ 20 ರಂದು ಸೋಮಂತಡ್ಕ ಬ್ರದರ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ನೂತನ ಶಾಖೆಯನ್ನು ಮುಂಡಾಜೆ ಸಂತ ಮೇರಿ ಚರ್ಚ್ ನ ಧರ್ಮಗುರು ಫಾ. ಶಿಬಿ ಪುದಿಯರ ಉದ್ಘಾಟಿಸಿ ಶುಭಹಾರೈಸಿದರು. ಉಜಿರೆ ಸಂತ ಅಂತೋನಿ ಚರ್ಚಿನ ಧರ್ಮಗುರು ಫಾ. ಅಬೆಲ್ ಲೋಬೊ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆನ್ರಿ ಲೋಬೊ ವಹಿಸಿದರು.

ಮುಂಡಾಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ, ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಭದ್ರತಾ ಕೊಠಡಿ ಉದ್ಘಾಟಿಸಿದರು. ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಗಣಕಯಂತ್ರ ವಿಭಾಗವನ್ನು ಉದ್ಘಾಟಿಸಿದರು. ಮುಂಡಾಜೆ ಗ್ರಾಪಂ ಮಾಜಿ ಅಧ್ಯಕ್ಷ ಗಣೇಶ್ ಬಂಗೇರ, ಕಟ್ಟಡದ ಮಾಲಕ ಜಿ. ಮಹಮ್ಮದ್, ಸಂಘದ ಉಪಾಧ್ಯಕ್ಷ ಡೇನಿಸ್ ಸಿಕ್ವೇರ, ನಿರ್ದೇಶಕರಾದ ಜೇಮ್ಸ್ ಡಿಸೋಜ, ಜೋಸೆಫ್ ಪೀಟರ್ ಸಲ್ದಾನ, ಹೆರಾಲ್ಡ್ ಪಿಂಟೋ, ಅಲ್ಫೋನ್ಸ್ ರೊಡ್ರಿಗಸ್, ವಿನ್ಸೆಂಟ್ ಪ್ರಕಾಶ್ ಪಿಂಟೋ, ತೋಮಸ್ ಆರ್. ನೊರೊನ್ಹಾ, ಪ್ರಸಾದ್ ಪಿಂಟೋ,ರಫಾಯಲ್ ವೇಗಸ್, ಪೌಲಿನ್ ರೇಗೊ, ಪ್ಲಾವಿಯ ಡಿಸೋಜಾ, ವೃತ್ತಿಪರ ನಿರ್ದೇಶಕರಾದ ವಿನಯ್ ಜಾನ್ಸನ್ ಡಿಸೋಜ, ರಿಯೋ ಮೈಕಲ್ ರೊಡ್ರಿಗಸ್, ಸಿಇಒ ಐವನ್ ಗೊನ್ಸಾಲಿಸ್ ಉಪಸ್ಥಿತರಿದ್ದರು.


ಡಾ. ವಿಶಾಲ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಸೋಮಂತಡ್ಕ ಶಾಖೆಯ ವ್ಯವಸ್ಥಾಪಕಿ ಸುನಿತಾ ಪಾಯಸ್ ವಂದಿಸಿದರು.

Related posts

ಶಾಸಕ ಹರೀಶ್ ಪೂಂಜರ ಅನುದಾನದಲ್ಲಿ ಗರ್ಡಾಡಿ ಮಿತ್ತೊಟ್ಟು – ಪಾರ ರಸ್ತೆಯ ಕಾಂಕ್ರಿಟೀಕರಣ ರಸ್ತೆ ನಿರ್ಮಾಣ

Suddi Udaya

ಉಜಿರೆ: ಎಸ್‌ಡಿಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Suddi Udaya

ಕೊಯ್ಯೂರು ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಬಗ್ಗೆ ಸಮಾಲೋಚನೆ ಸಭೆ

Suddi Udaya

ಮಚ್ಚಿನ: ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸೇಸು ಮೂಲ್ಯ ನಿಧನ

Suddi Udaya

ಜ. 20 ರಂದು ನಡೆಯಲಿರುವ ಗಮಕ ಸಮ್ಮೇಳನ ಶಾಸಕರಿಗೆ ಆಹ್ವಾನ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ

Suddi Udaya
error: Content is protected !!