23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ : ಮಹಾರಥೋತ್ಸವ

ಶಿಶಿಲ: ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಮೇ 14ರಂದು ಪ್ರಾರಂಭಗೊಂಡು ಮೇ 22 ರವರೆಗೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಮೇ 18ರಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ,ಸಂಜೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಕಲಾಕೇಂದ್ರ ಶಿಶಿಲ ಇದರ ವಿದ್ಯಾರ್ಥಿಗಳ ರಂಗಪ್ರವೇಶ ಮತ್ತು ಶ್ರೀ ಶಿಶಿಲೇಶ್ವರ ಮಹಿಳಾ ಮತ್ತು ಮಕ್ಕಳ ಯಕ್ಷಕಲಾ ಸಂಘ ಶಿಶಿಲ ಇವರಿಂದ ವೀರಮಣಿ ಕಾಳಗ ಯಕ್ಷಗಾನ ಪ್ರಸಂಗ ನಡೆಯಿತು. ಈ ವೇಳೆ ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಭೇಟಿ ನೀಡಿದರು.

ಮೇ 19ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು ನಡೆದು ರಾತ್ರಿ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.

ಶಾಸಕರ ಭೇಟಿ ಸಂದರ್ಭ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಸುನೀಲ್ ಗೋಖಲೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೂರಜ್ ನೆಲ್ಲಿತ್ತಾಯ, ಜಯರಾಮ ನೆಲ್ಲಿತ್ತಾಯ ಶಿಶಿಲ, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಸಂದೀಪ್ ಅಮ್ಮುಡಂಗೆ, ಸುದೀನ್ ಡಿ, ಆನಂದ ಪೂಜಾರಿ ದೆನೋಡಿ, ಗ್ರಾಮಸ್ಥರಾದ ರಾಧಕೃಷ್ಣ ಗುತ್ತು, ಕರುಣಾಕರ ಶಿಶಿಲ, ಊರವರು ಉಪಸ್ಥಿತರಿದ್ದರು.

ಮೇ 21ರಂದು ಪೂರ್ವಾಹ್ನ ಕುಮಾರಗುಡ್ಡೆಯಲ್ಲಿ ರುದ್ರಾಭಿಷೇಕ, ಕುಮಾರಾದಿ ದೈವಗಳಿಗೆ ನೇಮ, ರಾತ್ರಿ ಗೋಪುರದ ಬಾಗಿಲಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳಿಗೆ ನೇಮ, ವರ್ಷಾವಧಿ ಕಟ್ಟೆಯ ಬಳಿ ದೈವಗಳ ನೇಮ ಜರುಗಲಿದೆ.

Related posts

ಪಿಯುಸಿ ಫಲಿತಾಂಶ: ಪುತ್ತೂರಿನ ವಿವೇಕಾನಂದ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ಅಭಿರಾಮ್ ವಿ. ಭಟ್ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

Suddi Udaya

ಕಲ್ಮಂಜ ಶ್ರೀ ಬದಿನಡೆ ಕ್ಷೇತ್ರದಲ್ಲಿ ಬ್ರಹ್ಮರ ಶಿಲೆ ಹಾಗೂ ನಾಗಶಿಲಾ ಬಿಂಬ ಪ್ರತಿಷ್ಠಾಪನೆ ಮತ್ತು ಕಲಶಾಭಿಷೇಕ

Suddi Udaya

ಕೆರೆಗೆ ಜಾರಿ ಬಿದ್ದು ಗರ್ಡಾಡಿ ನಿವಾಸಿ ನವ ವಿವಾಹಿತ ಸಾವು

Suddi Udaya

ಫೆ.1-2: ಚಿಬಿದ್ರೆ ಪರನೀರು ನಾಗಬ್ರಹ್ಮ ಪರಿವಾರ ದೇವರ ಸಾನಿಧ್ಯದಲ್ಲಿ ನಾಗಬ್ರಹ್ಮ ಪರಿವಾರ ದೇವರ ಸಾನಿಧ್ಯದ ಪ್ರತಿಷ್ಠೆ ಹಾಗೂ ರಕೇಶ್ವರಿ ಪ್ರಾರ್ಥನೆ

Suddi Udaya

ಕಳೆಂಜ ಸಂಘಪರಿವಾರದ ಕಾರ್ಯಕರ್ತರಿಂದ ಮನೆ ನಿರ್ಮಾಣ

Suddi Udaya
error: Content is protected !!