October 31, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೌಜನ್ಯ ಪ್ರಕರಣ: ಎಸ್.ಐ.ಟಿ ತಂಡದ ಅಧಿಕಾರಿಗಳು ಧರ್ಮಸ್ಥಳ ಮಣ್ಣಸಂಕಕ್ಕೆ ಭೇಟಿ, ಸೌಜನ್ಯ ನಾಪತ್ತೆಯಾದ ಸ್ಥಳ ಹಾಗೂ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮಹಜರು

ಬೆಳ್ತಂಗಡಿ: ಸೌಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್.ಐ.ಟಿ ತಂಡದ ಅಧಿಕಾರಿಗಳು ಅ.31 ರಂದು ಶನಿವಾರ ಧರ್ಮಸ್ಥಳ ಗ್ರಾಮದ ಮಣ್ಣಸಂಕದ ಸಮೀಪ ಸೌಜನ್ಯ ನಾಪತ್ತೆಯಾದ ಸ್ಥಳ ಹಾಗೂ ಸೌಜನ್ಯ ಮೃತದೇಹ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಎಸ್.ಐ.ಟಿ ತನಿಖಾಧಿಕಾರಿ ಐಪಿಎಸ್ ಅಧಿಕಾರಿ ಲೋಕೇಶ್ ಜಗಲಾಸರ್‌, ಎಸಿಪಿ ಮನೋಜ್ ಕುಮಾರ್ ಸೇರಿದಂತೆ ಬೆಂಗಳೂರು ಎಫ್. ಎಸ್. ಎಲ್ ತಂಡ, ಸೋಕೋ ತಂಡ, ವೈದ್ಯರ ತಂಡ, ಗ್ರಾಮ ಆಡಳಿತಾಧಿಕಾರಿ, ಪಿಡಬ್ಲ್ಯೂಡಿ ಇಂಜಿನಿಯರ್ ಹಾಗೂ ಅಧಿಕಾರಿಗಳು ಶವ ಪತ್ತೆಯಾದ ಜಾಗಕ್ಕೆ ತೆರಳಿ ಮಹಜರು ನಡೆಸುತ್ತಿದ್ದಾರೆ.
ಅಂದು ಸೌಜನ್ಯ ಶವ ಸಿಕ್ಕಾಗ ದೂರು ನೀಡಿದ್ದ ಸೌಜನ್ಯ ಮಾವ ಪುರಂದರ ಗೌಡ ಹಾಗೂ ಪಂಚರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

ತಲೆಮರೆಸಿಕೊಂಡಿದ್ದ ಖತರ್ನಾಕ್ ಕಳ್ಳನ ಹೆಡೆ ಮುರಿ ಕಟ್ಟಿದ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪೂರ್ ಮಠ ತಂಡ

Suddi Udaya

ಹೊಸಂಗಡಿ ವಲಯದ ಭಜನಾ ಪರಿಷತ್ ಸಭೆ

Suddi Udaya

ಬಿಜೆಪಿ ಜಿಲ್ಲಾ ಮಟ್ಟದ ವಿವಿಧ ಮೋರ್ಚಾಗಳ ಪ್ರಧಾನ ಕಾರ್ಯದರ್ಶಿಗಳ ನೇಮಕ

Suddi Udaya

ಬೆಳ್ತಂಗಡಿ ಅಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

Suddi Udaya

ಬೆಳಾಲು ಶಾಲೆಯಲ್ಲಿ ದ.ರಾ. ಬೇಂದ್ರೆ ಕುರಿತು ಉಪನ್ಯಾಸ ಕಾರ್ಯಕ್ರಮ

Suddi Udaya

ಓಡಿಲ್ನಾಳ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!