25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು 5 ಮೆಗಾ ವಾಲ್ಟ್ ವಿದ್ಯುತ್ ಫೀಡರನ್ನು 10 ಮೆಗಾ ವಾಲ್ಟ್ ವಿದ್ಯುತ್ ಫೀಡರ್ ಪರಿವರ್ತಿಸಲು ಮನವಿ

ಬೆಳ್ತಂಗಡಿ: ವೇಣೂರು ಸಬ್ ಸ್ಕ್ರೆಷನ್ ಎರಡು ವಿದ್ಯುತ್ ಫೀಡರ್ ಗಳಿದ್ದು ಕಳೆದ ಬಾರಿ ಒಂದು ವಿದ್ಯುತ್ ಫೀಡರನ್ನು 5 ಮೆಗಾವೋಲ್ಟ್ ನಿಂದ 8 ಮೆಗಾ ವೋಲ್ಟ್ ಗೆ ಪರಿವರ್ತಿಸಿ ವೇಣೂರು ಮತ್ತು ಸುತ್ತ ಮುತ್ತಲಿನ ಗ್ರಾಮದ ರೈತರು ಮತ್ತು ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ.
ಇದೀಗ ಆಗಾಗ ವಿದ್ಯುತ್ ಕಡಿತವಾಗುವುದರಿಂದ ಈಗ ಬಾಕಿ ಇರುವ ವಿದ್ಯುತ್ ಫೀಡರನ್ನು ಸಹ ಐದು ಮೆಗಾ ವೋಲ್ಟ್ ನಿಂದ ಹತ್ತು ಮೆಗಾ ವೋಲ್ಟ್ ಪರಿವರ್ತಿಸಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವಂತೆ ಸರ್ಕಾರದ ಗಮನವನ್ನು ಸೆಳೆಯಬೇಕೆಂದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರಿಗೆ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ನಗರದ ಅಧ್ಯಕ್ಷ ದಯಾನಂದ ದೇವಾಡಿಗ ಇವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಶೇಖರ್ ಕುಕ್ಕೇಡಿ, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಜಯರಾಮ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ನಗರದ ಅಧ್ಯಕ್ಷರಾದ ವಂದನಾ ಬಂಡಾರಿ, ತಾಲೂಕು ಆರಾಧನಾ ಸಮಿತಿಯ ಸದಸ್ಯರಾದ ಬಾಲಕೃಷ್ಣ ಭಟ್, ಗ್ಯಾರಂಟಿ ಯೋಜನೆಯ ಸದಸ್ಯರಾದ ಸತೀಶ್ ಹೆಗ್ಡೆ, ಪಕ್ಷದ ಪ್ರಮುಖರಾದ, ರಮೇಶ್ ಪೂಜಾರಿ ಪಡ್ಡಾಯಿ ಮಜಲ್, ಹರೀಶ್ ಪೊಕ್ಕಿ, ಅಶ್ರಫ್ ಕರಿಮಣೇಲು, ತೋಮಸ್ ಅಂಡಿಂಜೆ, ಹಾಗೂ ಪಕ್ಷದ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಬೆಳ್ತಂಗಡಿ ತಾಲೂಕಿನ ಉತ್ತಮ ಸಂಘ ಪ್ರಶಸ್ತಿ

Suddi Udaya

ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ನಾರಾಯಣ್ ಶೆಟ್ಟಿ ರವರಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ಆರ್ಥಿಕ ನೆರವು

Suddi Udaya

ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಶಾಂತಿವನದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆ: ಸಿಡಿಲು ಬಡಿದು ಮನೆ ವಿದ್ಯುತ್ ವಯರಿಂಗ್ ಹಾನಿ

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ 2026 ರ ಕ್ಯಾಲೆಂಡರ್ ಬಿಡುಗಡೆ

Suddi Udaya

ಸುಂದರ ಮಲೆಕುಡಿಯ ಕೈ ಬೆರಳು ತುಂಡರಿಸಿ ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟ: ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ: ಅಕ್ಬರ್ ಬೆಳ್ತಂಗಡಿ

Suddi Udaya
error: Content is protected !!