25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಹಿಶ್ಛತ್ರ ಗುರುಕುಲದಲ್ಲಿ ಸಂಸ್ಕಾರ ಶಿಬಿರದ ಸಮಾರೋಪ

ಉಜಿರೆ ಶಾರದಾ ನಿಲಯದ ಅಹಿಶ್ಛತ್ರ ಗುರುಕುಲ ಹಾಗೂ ದಿ| ಕೃಷ್ಣ ಭಟ್ ಪ್ರತಿಷ್ಠಾನ ಚೂoತಾರು ಸಹಯೋಗದಲ್ಲಿ ನಡೆದ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ಮೇ 20 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಎಮ್. ಎಲ್. ಗೋಪಾಲಕೃಷ್ಣ ಭಟ್ ವಹಿಸಿ ಇಂದಿನ ಕಾಲಘಟ್ಟದಲ್ಲಿ ನಮ್ಮ ಸನಾತನ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಅವಶ್ಯಕತೆ ಇದೆ ಎಂದರು.
ಪ್ರತಿಷ್ಠಾನದ ಕಾರ್ಯದರ್ಶಿಗಳಾದ ವೇದಮೂರ್ತಿ ಶಿವ ಪ್ರಸಾದ್ ಭಟ್, ಚೂಂತಾರು ಅವರು ಮಾತನಾಡಿ ಶಿಬಿರದಲ್ಲಿ ಕಲಿತ ಶ್ಲೋಕಗಳನ್ನು  ಮರೆತು ಹೋಗದಂತೆ ನಿರಂತರ ಅಭ್ಯಾಸ ನಡೆಸಬೇಕು. ಈ ದಿಸೆಯಲ್ಲಿ ಪೋಷಕರು ಸಹಕರಿಸಬೇಕು ಎಂದು ಕಿವಿ ಮಾತು ನುಡಿದರು.

ವಿದ್ಯಾರ್ಥಿಗಳು ತಾವು ಕಲಿತ ಶ್ಲೋಕಗಳನ್ನು ಹೇಳಿದರು. ಬಳಿಕ ಶಿಬಿರದ ಅಧ್ಯಾಪಕರಾದ ವೇದಮೂರ್ತಿ ಮುರಳೀಕೃಷ್ಣ ಭಟ್, ಹೇವಾಜೆ ಶಿಶಿಲರವರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿ ಹರಸಿದರು. ಪೋಷಕರು ಶಿಬಿರದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಶಿಬಿರದ ಗುರುಗಳನ್ನು ಪ್ರತಿಷ್ಟಾನ ವತಿಯಿಂದ ಸನ್ಮಾನಿಸಲಾಯಿತು.
ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ರವರು ವಂದಿಸಿದರು. ಅನಂತನಾರಾಯಣ ಹಾಗೂ ದೀಪಿಕಾ ದಂಪತಿಗಳು ಶಿಬಿರದ ಸಂಯೋಜನೆ ಮಾಡಿದ್ದರು.

Related posts

ಧರ್ಮಸ್ಥಳದಲ್ಲಿ “ಕೆಸರ್‌ಡ್ ಒಂಜಿ ದಿನ”

Suddi Udaya

ಲಾಯಿಲ ಗ್ರಾ.ಪಂ. ನಲ್ಲಿ ಗೃಹಜ್ಯೋತಿ ಮರುಪರಿಶೀಲನಾ ಶಿಬಿರಕ್ಕೆ ಚಾಲನೆ: ರಾಜಕೀಯ‌ ಬೇಡ ಯೋಜನೆಯನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಮಾಡಿ: ಕೆಡಿಪಿ ಸದಸ್ಯ ಸಂತೋಷ್ ಕುಮಾರ್

Suddi Udaya

ಕಳಿಯ ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya

ಜೋಡುಸ್ಥಾನ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಯುಗಂಧರ್, ಕಾರ್ಯದರ್ಶಿ ಚೇತನ್

Suddi Udaya

ಬಾರ್ಯ : ಸರಳೀಕಟ್ಟೆಯಲ್ಲಿ ಹಾರಿ ಹೋದ ಹಲವು ಮನೆಯ ಮೇಲ್ಛಾವಣಿ

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಗೆ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಬಹುಮಾನ

Suddi Udaya
error: Content is protected !!