24.5 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಣ್ಣೀರುಪಂತ ಶ್ರೀ ಶಾರದಾಂಬ ಭಜನಾ ಮಂಡಳಿಯಲ್ಲಿ ವಿದ್ಯಾರ್ಥಿಗಳಿಗೆ ವ್ವ್ಯಕ್ತಿತ್ವ ವಿಕಸನಾ ಮಾಹಿತಿ‌ ಶಿಬಿರ

ಗುರುವಾಯನಕೆರೆ ತಣ್ಣೀರುಪಂಥ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರವು ಪ್ರಾರಂಭವಾಯಿತು.

ತಣ್ಣೀರುಪಂಥ ಶ್ರೀ ಶಾರದಾಂಬ ಭಜನಾ ಮಂದಿರ ಕಾರ್ಯದರ್ಶಿ ದೇಜಪ್ಪ ಪೂಜಾರಿ ಅಳಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಜಯಾನಂದ ಕಲ್ಲಾಪು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಜ್ರ ಕುಮಾರ್ ಜೈನ್ ,ತುಳಸೀಧರ್ ಕಜೆಕಾರು, ಯೋಗೀಶ್ ಅಳಕ್ಕೆ, ಹರೀಶ್ ಯೋಜನಾಧಿಕಾರಿಗಳು, ಕಮಲಾಕ್ಷ ಗೌಡ ಕರ್ಪಾಡಿ, ರವಿ ಮಂಜನಾಡಿ, ನಾರಾಯಣ ಪೂಜಾರಿ ಮತ್ತಿತರ ಅತಿಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪೋಷಕರು, ತರಬೇತುದದಾರ ಆಕಾಶ್, ಸೃಜನ್ ಕುದ್ರಡ್ಕ, ಸೃಜನ್ ಪಣಕಜೆ, ಭಜನಾ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು.

ಭಜನಾ ಗುರುಗಳಾದ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪುರಸ್ಕ್ರತ ಸಂದೇಶ್ ಮದ್ದಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಶಾರದಾಂಬ ಭಜನಾ ಮಂದಿರದ ಅಧ್ಯಕ್ಷ ಧನ್ಯವಾದವಿತ್ತರು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

Related posts

ಎಸ್‌ಕೆಎಸ್‌ಎಸ್‌ಎಫ್ ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಯಾಸಿರ್ ಕಕ್ಕಿಂಜೆ ಆಯ್ಕೆ

Suddi Udaya

ಡಾ ರವೀಶ್ ಪಡುಮಲೆಗೆ ಅಕ್ಷಯ ಗುರು ಪುರಸ್ಕಾರ

Suddi Udaya

ಮಡಂತ್ಯಾರಿನಲ್ಲಿ ಆಧಾರ್ ಶಿಬಿರ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ನಬಾರ್ಡಿನ ಸಿಜಿಎಂ ಸುರೇಂದ್ರ ಬಾಬು ಮತ್ತು ದ.ಕ. ಜಿಲ್ಲಾ ನಬಾರ್ಡಿನ ಉಸ್ತುವಾರಿ ಸಂಗೀತ ಕರ್ತ ಭೇಟಿ

Suddi Udaya

ಅಳದಂಗಡಿ ಸಿಎ ಬ್ಯಾಂಕಿನಿಂದ ರೂ.25 ಸಾವಿರ ವೈದ್ಯಕೀಯ ನೆರವು ಹಸ್ತಾಂತರ

Suddi Udaya

ವೇಣೂರು: ಮೂಡುಕೋಡಿ ನಿವಾಸಿ ಪಿ. ಎಸ್. ಅಬ್ದುಲ್ ರಹಿಮಾನ್ ನಿಧನ

Suddi Udaya
error: Content is protected !!