24.8 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಪ್ಪಿನಂಗಡಿಯ ವೃತ್ತಕ್ಕೆ ಸ್ವಾತಂತ್ರ್ಯ ಹೋರಾಟಗಾರ ಉಬಾರ್ ಮಂಜ ಬೈದ್ಯರ ಹೆಸರಿನಲ್ಲಿ ನಾಮಕರಣ ಮಾಡಲು ಶ್ರೀ ಕ್ಷೇತ್ರ ಗೆಜ್ಜೆಗಿರಿ ಸಮಿತಿಯಿಂದ ಮನವಿ

ಬೆಳ್ತಂಗಡಿ: ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಅಪ್ರತಿಮ ವೀರತ್ವವನ್ನು ಮೆರೆದು ಕೆಚ್ಚೆದೆಯಿಂದ ಹೋರಾಡಿ ಬ್ರಿಟಿಷರಿಂದ 1837 ಮೇ 7ರಂದು ಗಲ್ಲಿಗೇರಿಸಲ್ಪಟ್ಟ ಉಬಾರ್ ಮಂಜ ಬೈದ್ಯರವರ ವೀರತ್ವವನ್ನು ಸಾರುವ ಸಲುವಾಗಿ ಉಪ್ಪಿನಂಗಡಿಯ ಮುಖ್ಯ ರಸ್ತೆಯ ವೃತ್ತಕ್ಕೆ ಮಂಜ ಬೈದ್ಯರ ಪುತ್ಥಳಿಯನ್ನು ಮತ್ತು ಹೆಸರು ನಾಮಕರಣ ಮಾಡಬೇಕೆಂದು ಸರಕಾರಕ್ಕೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈರವರ ಮುಖಾಂತರ ಮೇ 13ರಂದು ಬೆಂಗಳೂರಿನಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಸಮಿತಿ ಪ್ರಮುಖರಾದ ಸಂಜೀವ ಪೂಜಾರಿ ಬಿರ್ವ ,ಜಯಂತ್ ನಡುಬೈಲು ಪುತ್ತೂರು, ಡಾ. ರಾಜಾರಾಮ್ ಉಪ್ಪಿನಂಗಡಿ, ಉಲ್ಲಾಸ್ ಕೋಟ್ಯಾನ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Related posts

ನಾಳೆ (ಜು.28) ಕುಲಾಲ ಮಂದಿರದಲ್ಲಿನೂತನ ಸಂಸದ ಕ್ಯಾ| ಬೃಜೇಶ್ ಚೌಟರಿಗೆ ಅಭಿನಂದನೆ – ವಿದ್ಯಾರ್ಥಿ ವೇತನ ವಿತರಣೆ – ಆಟಿ ಕೂಟ ಕಾಯ೯ಕ್ರಮ

Suddi Udaya

ಬೆಳ್ತಂಗಡಿ: ದ.ಕ.ಜಿ.ಪ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಮರೋಡಿ: ಹಲ್ಲೆ, ಜೀವ ಬೆದರಿಕೆ ಆರೋಪ, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ವಿಶ್ವಕರ್ಮ ಬ್ಯಾಂಕಿನ ಉಜಿರೆ ಶಾಖೆಯ ವತಿಯಿಂದ ಸ್ವಚ್ಛತಾ ಶ್ರಮದಾನ

Suddi Udaya

ಕುತ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಧನಲಕ್ಷ್ಮೀ ಪೂಜೆ, ಗೋ ಪೂಜೆ, ವಾಹನ ಪೂಜೆ ,ಆಯುಧ ಪೂಜೆ ಹಾಗೂ ಹೆಣ್ಣು ಕರು ದಾನ ಕಾರ್ಯಕ್ರಮ

Suddi Udaya

ಪ್ರಾಮಾಣಿಕ ಜನಸೇವೆಗಾಗಿ ಸಹಕಾರ ಸಂಘಗಳು ಕಟಿಬದ್ದರಾಗಬೇಕು; ಬೆಳ್ತಂಗಡಿ ತಾಲೂಕು ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆ ಕರೆ

Suddi Udaya
error: Content is protected !!