22.9 C
ಪುತ್ತೂರು, ಬೆಳ್ತಂಗಡಿ
August 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಭೇಟಿ

ಮಿತ್ತಬಾಗಿಲು: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಬೆಳ್ತಂಗಡಿ ತಾಲೂಕು ವತಿಯಿಂದ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಬೇಟಿ ಮಾಡಲಾಯಿತು.

ಭೇಟಿಯ ಸಂದರ್ಭದಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ. ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಚಂದ್ರಶೇಖರ್ ಇಂದಬೆಟ್ಟು, ವಲಯದ ಅಧ್ಯಕ್ಷರಾಗಿರುವ ಶಶಿಧರ್ ಗೌಡ ಮನ್ನಡ್ಕ ಮತ್ತು ವಲಯ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಜೊತೆಯಾಗಿದ್ದರು.

ಭಜನಾ ಕಾರ್ಯಕ್ರಮ ಹಾಗೂ ದೇವಸ್ಥಾನದ ಮಹಾಪೂಜೆ ಮುಗಿದ ಮೇಲೆ ಪರಿಷತ್ತಿನ ಪದಾಧಿಕಾರಿಗಳು ಮಂಡಳಿಯ ಪದಾಧಿಕಾರಿಗಳ ಹಾಗೂ ಭಜಕರ ಜೊತೆಗೆ ಸಮಾಲೋಚನೆ ನಡೆಸಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ರವರು ಇಲ್ಲಿ ನಡೆದಂತಹ ಭಜನೆ ಮತ್ತು ಭಜನೆಯನ್ನು ಹಾಡಿದ ಭಜಕರನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಾ ದೇವಾಲಯದ ಒಳಗಡೆ ವಿರಾಜಮಾನವಾಗಿರುವ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಕ್ಷಣ ಕಾಲವು ನಿಮ್ಮ ಭಕ್ತಿ ಭಾವದ ಈ ಭಜನೆಯನ್ನು ಬಿಟ್ಟು ಬೇರೆನನ್ನು ಆಲಿಸಿರಲಾರರು ಎನ್ನುತ್ತಾ ಮುಂದಿನ ದಿನಗಳಲ್ಲಿ ಈ ವಲಯದ ಕುಳಿತು ಭಜನೆ ಮಾಡುವಂತಹ ಎಲ್ಲಾ ತಂಡಗಳಿಗೆ ಒಂದು ದಿನ ವಲಯ ಭಜನಾ ಪರಿಷತ್ತಿನ ನೇತೃತ್ವದಲ್ಲಿ ಕುಳಿತು ಭಜನಾ ಸೇವೆಯನ್ನು ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಭರವಸೆಯನ್ನು ನೀಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಖಾವಂದರ ಮತ್ತು ಮಾತೃಶ್ರೀ ಅಮ್ಮನವರ ದೂರ ದೃಷ್ಟಿಯ ಯೋಚನೆ ಮತ್ತು ಯೋಜನೆಯ ಭಜನಾ ಕಮ್ಮಟದಿಂದಾಗಿ ಇಂದು ನೂರಾರು ಕುಣಿತ ಭಜನಾ ತರಬೇತಿದಾರರಾಗಿ ನಿಸ್ವಾರ್ಥ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುತ್ತಾ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟೋತ್ಸವದ ಬಗ್ಗೆ ಮಾಹಿತಿಯನ್ನು ನೀಡಿ ಪ್ರತಿ ಭಜನಾ ಮಂಡಳಿಗಳಿಂದ ಕನಿಷ್ಠ ಇಬ್ಬರು ಶಿಬಿರಾರ್ಥಿಗಳನ್ನು ಕಳುಹಿಸಿಕೊಡುವಂತೆ‌ ಕೇಳಿಕೊಂಡರು.

ಭಜನಾ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಚಂದ್ರಶೇಖರ ಗೌಡ ಇಂದಬೆಟ್ಟು ಇವರು ಭಜನೆಯಲ್ಲಿನ ಈಗಿನ ವಾಸ್ತುತಿಯ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ನಾರಾಯಣ ಗೌಡ ಕೊಲ್ಲಿ, ಕಾರ್ಯದರ್ಶಿ ಗಣೇಶ್ ಕಾಲಾಜೆ, ಕೋಶಾಧಿಕಾರಿ ವಿಶ್ವನಾಥ್ ಗೌಡ ಬೆದ್ರಬೆಟ್ಟು, ಮಾಜಿ ಅಧ್ಯಕ್ಷರು ವಿಜಯ್ ಪೂಜಾರಿ, ಅಣ್ಣಿ ಪೂಜಾರಿ, ಹಿರಿಯ ಸದಸ್ಯರಾದ ಸುಧಾಕರ್ ಕೊಲ್ಲಿ,ಜ್ಯೋತಿಲಕ್ಷ್ಮಿ ಕಿಲ್ಲೂರು,ಹಾಗೂ ಭಜಕರು ಉಪಸ್ಥಿತರಿದ್ದರು.
ಗಣೇಶ್ ಗೌಡ ಪಗರೆಯವರು ಸ್ವಾಗತಿಸಿ, ಶ್ರೀಮತಿ ಜ್ಯೋತಿ ಲಕ್ಷ್ಮಿ ಕಿಲ್ಲೂರು ವಂದಿಸಿದರು.

Related posts

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹಟ್ಟಿಗೆ ಬೆಂಕಿ ತಗುಲಿ ಕಂಬಳ ಕೋಣಗಳು ಸಾವು

Suddi Udaya

ಲಾಯಿಲ: ತಾಲೂಕು ಮಟ್ಟದ ಮಂದಿರ ಅಧಿವೇಶನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ದೀಪಾವಳಿ ಸಂಭ್ರಮ

Suddi Udaya

ಅಂಡಿOಜೆ … ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ

Suddi Udaya

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ಆರ್ ಪಿಎಲ್ ತರಬೇತಿಯ ಕಿಟ್ ಮತ್ತು ಸರ್ಟಿಫಿಕೇಟ್ ವಿತರಣೆ

Suddi Udaya

ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ: ಮುಂಡಾಜೆ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya
error: Content is protected !!