24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ: ಚಿನ್ಮಯ್ ಜಿ.ಕೆ. 597, ನೇಹಾ ಭಟ್ 592 ಅಂಕದೊಂದಿಗೆ ಹೊಸ ದಾಖಲೆ

ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ಪ್ರಥಮ ಪ್ರಯತ್ನದಲ್ಲೇ ಅದ್ವಿತೀಯ ಫಲಿತಾಂಶ ದಾಖಲಿಸಿರುವ ನಡುವೆ ಮರು ಮೌಲ್ಯಮಾಪನದಲ್ಲಿ ಇದೀಗ ಚಿನ್ಮಯ್ ಜಿ.ಕೆ. (ವಿಜ್ಞಾನ ವಿಭಾಗ) ಅವರಿಗೆ ಮತ್ತೆರಡು ಅಂಕ ಸೇರ್ಪಡೆಯಾಗಿ (597) ಶೇ.99.50 ಫಲಿತಾಂಶ ದಾಖಲಿಸುವ ಮೂಲಕ ರಾಜ್ಯಕ್ಕೆ 3 ನೇ ಸ್ಥಾನ ಪಡೆದಿದ್ದಾರೆ. ಜೆಇಇ ಮೈನ್ಸ್ ನಲ್ಲಿ 99.646 ಪರ್ಸೆಂಟೈಲ್ ದಾಖಲಿಸಿದ್ದ ಚಿನ್ಮಯ್ ಬೋರ್ಡ್ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ.

ಚಿನ್ಮಯ್ ಜಿ.ಕೆ. ಅವರು (ಭೌತಶಾಸ್ತ್ರ-100, ರಸಾಯನಶಾಸ್ತ್ರ-100, ಗಣಿತ-100 ಮತ್ತು ಗಣಕ ವಿಜ್ಞಾನ-100) ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ನೇಹಾ ಭಟ್ ಅವರು ಮರು ಪರೀಕ್ಷೆಗೆ ಹಾಜರಾಗುವ ಮೂಲಕ 600 ರಲ್ಲಿ 592 ಅಂಕ (ವ್ಯವಹಾರ ಅಧ್ಯಯನ-100, ಲೆಕ್ಕಶಾಸ್ತ್ರ-100, ಗಣಕ ವಿಜ್ಞಾನ-100) ದೊಂದಿಗೆ ರಾಜ್ಯಕ್ಕೆ 8 ನೇ ಸ್ಥಾನಿಯಾಗಿದ್ದಾರೆ. ಪ್ರಸ್ತುತ ಸಿಎ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಈ ಹಿಂದೆ ವಿಜ್ಞಾನದಲ್ಲಿ ತನುಶ್ರೀ (593) ಶೇ.98.83% (ರಸಾಯನಶಾಸ್ತ್ರ-100, ಭೌತಶಾಸ್ತ್ರ-100 ಗಣಿತಶಾಸ್ತ್ರ-100, ಜೀವಶಾಸ್ತ್ರ-100) ನಾಲ್ಕು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದು ರಾಜ್ಯಕ್ಕೆ 7 ನೇ ಸ್ಥಾನಿಯಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಧ್ಯಾನ ಈ ಹಿಂದೆ (591) ಅಂಕ (ಕನ್ನಡ-100, ವ್ಯವಹಾರ ಅಧ್ಯಯನ-100, ಲೆಕ್ಕಶಾಸ್ತ್ರ-100) ಶೇ.98.50 ಅಂಕ ಪಡೆದು ರಾಜ್ಯಕ್ಕೆ 9 ನೇ ಸ್ಥಾನಿಯಾಗಿದ್ದರು.

ಈ ಫಲಿತಾಂಶದಿಂದ ವಿದ್ವತ್ ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಗೆ ಬಂದಂತಾಗಿದ್ದು, ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳ ಪಾಲಿಗೆ ಪ್ರಪ್ರಥಮ ಆಯ್ಕೆಯಾಗಿದೆ. ಈ ಫಲಿತಾಂಶವನ್ನು ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ರೈ, ಖಜಾಂಚಿ ಎಂ.ಕೆ.ಕಾಶಿನಾಥ್., ಶೈಕ್ಷಣಿಕ ನಿರ್ದೇಶಕ ಗಂಗಾಧರ್ ಇ.ಮಂಡಗಳಲೆ ಪ್ರಶಂಸಿದ್ದಾರೆ.

Related posts

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರ ಕೇಂದ್ರ ನಿರ್ಮಾಣಕ್ಕೆ ರೂ. 50 ಲಕ್ಷ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜರ ಮನವಿಗೆ ಸ್ಪಂದಿಸಿದ ಸರ್ಕಾರ

Suddi Udaya

ಓಡಿಲ್ನಾಳ ಸ. ಉ. ಪ್ರಾಥಮಿಕ ಶಾಲಾ ಮಕ್ಕಳಿಗೆ ಮುಳಿಯ ಜ್ಯುವೆಲ್ಲರ್ಸ್ ಹಾಗೂ ದಾನಿಗಳಿಂದ ಬ್ಯಾಗ್, ಸಮವಸ್ತ್ರ ವಿತರಣೆ

Suddi Udaya

ಅದ್ಬುತ ವೇದಿಕೆಯಲ್ಲಿ ಬಳಂಜ ಶಾಲೆಯ ಅಮೃತ ಮಹೋತ್ಸವದ ಉದ್ಘಾಟನೆ,ಸ್ವಾಗತ ದ್ವಾರ ಲೋಕಾರ್ಪಣೆ, ಶಾಸಕರ ನಿಧಿಯಿಂದ ನಿರ್ಮಾಣಗೊಂಡ ಮಕ್ಕಳ ತಂಗುದಾನ ಉದ್ಘಾಟನೆ

Suddi Udaya

ಶ್ರೀ ಗುರುದೇವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಜೂ.21: ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಮೈರೋಳ್ತಡ್ಕ ಶಾಲಾ ಅಮೃತಮಹೋತ್ಸವ ಪ್ರಯುಕ್ತ ಆಧಾರ್ ನೋಂದಣಿ-ತಿದ್ದುಪಡಿ ಕಾರ್ಯಕ್ರಮ

Suddi Udaya
error: Content is protected !!