25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿವರದಿಶಾಲಾ ಕಾಲೇಜು

ಎಸ್‌.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ‘ಸರ್ವಧರ್ಮ ಪ್ರಾರ್ಥನೆ’ – ಭಾವೈಕ್ಯತೆಯ ಸಂದೇಶ

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ದಳದ ವತಿಯಿಂದ ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ‘ಸರ್ವಧರ್ಮ ಪ್ರಾರ್ಥನೆ’ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಸ್ತುಬದ್ಧವಾಗಿ ಪಾಲ್ಗೊಂಡ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಸಾಮರಸ್ಯದ ವಾತಾವರಣವನ್ನು ನಿರ್ಮಿಸಿದರು. ಜೈನ, ಹಿಂದೂ, ಬೌದ್ಧ, ಇಸ್ಲಾಂ ಹಾಗೂ ಕ್ರೈಸ್ತ ಧರ್ಮಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಧರ್ಮಗ್ರಂಥಗಳ ಪ್ರಾರ್ಥನಾ ಶ್ಲೋಕಗಳನ್ನು ಅತ್ಯಂತ ಭಕ್ತಿಪೂರ್ವಕವಾಗಿ ಪಠಿಸಿದರು. “ಧರ್ಮಗಳು ಬೇರೆಯಾಗಿದ್ದರೂ, ಸಿದ್ಧಾಂತಗಳು ವಿಭಿನ್ನವಾಗಿದ್ದರೂ ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ” ಎಂಬ ಉನ್ನತ ಸಂದೇಶವನ್ನು ಈ ಮೂಲಕ ಸಾರಿದರು.

ಸರಳ ಪ್ರಾರ್ಥನೆಯೇ ಮನಸ್ಸಿನ ಶುದ್ಧೀಕರಣಕ್ಕೆ ದಾರಿ: ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ., “ಪ್ರಾರ್ಥನೆ ಎಂಬುದು ಮಾನವ ಕುಲವನ್ನು ಒಂದೆಡೆ ತರುವ ಅತ್ಯಂತ ಸರಳ ಹಾಗೂ ಶಕ್ತಿಶಾಲಿ ಮಾಧ್ಯಮ. ಬಾಹ್ಯದ ಆಡಂಬರದ ಪೂಜೆಗಳಿಗಿಂತ ಮನಃಪೂರ್ವಕವಾಗಿ ಮಾಡುವ ಒಂದು ಕಿರು ಪ್ರಾರ್ಥನೆಯು ಮನಸ್ಸನ್ನು ಪವಿತ್ರಗೊಳಿಸುತ್ತದೆ. ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸುವ ಧರ್ಮ ಸಮನ್ವತೆ ನಮ್ಮಲ್ಲಿ ಬೆಳೆದಾಗ ಮಾತ್ರ ದೇಶದ ನೈಜ ಪ್ರಗತಿ ಸಾಧ್ಯ,” ಎಂದು ಪ್ರಾರ್ಥನೆಯ ಮಹತ್ವವನ್ನು ವಿವರಿಸಿದರಲ್ಲದೆ, ವಿದ್ಯಾರ್ಥಿಗಳ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಈ ವಿಶೇಷ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಚಾರ್ಯರಾದ ಡಾ. ರಾಜೇಶ ಬಿ. ಉಪಸ್ಥಿತರಿದ್ದು ಶುಭ ಹಾರೈಸಿದರು. ರೋವರ್ಸ್ ಮತ್ತು ರೇಂಜರ್ಸ್ ದಳದ ನಾಯಕರುಗಳಾದ ಲಕ್ಷ್ಮೀಶ್ ಭಟ್ ಹಾಗೂ ಅಂಕಿತಾ ಎಂ. ಕೆ. ಅವರ ಸೂಕ್ತ ಮಾರ್ಗದರ್ಶನದಲ್ಲಿ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

Related posts

ಬೆಳ್ತಂಗಡಿ: ತಲೆಮಲೆರಿಸಿಕೊಂಡಿದ್ದ ವಾರೆಂಟ್ ಆರೋಪಿ ಸತೀಶ್ ದ್ರಾವಿಡ ಪೊಲೀಸ್ ವಶಕ್ಕೆ

Suddi Udaya

ತ್ರೋಬಾಲ್ ಪಂದ್ಯಾಟ: ಅಂಡೆತ್ತಡ್ಕ ಸ.ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕು ಶ್ರೀ ನಾರಾಯಣ ಗುರು ವಿಚಾರವೇದಿಕೆ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಜಯ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಅಳಕ್ಕೆ

Suddi Udaya

ಬಾರ್ಯ ಮಂಡಲದ ಹಿಂದೂ ಸಂಗಮ

Suddi Udaya

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲಾ ಮಂತ್ರಿಮಂಡಲದ ನೂತನ ಸದಸ್ಯರಿಗೆ ಪ್ರಮಾಣ ವಚನ

Suddi Udaya

ಉಜಿರೆ: ಗ್ರಾಮ ಪಂಚಾಯತ್ ನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ತರಬೇತಿ ಕಾರ್ಯಾಗಾರ

Suddi Udaya
error: Content is protected !!