23.8 C
ಪುತ್ತೂರು, ಬೆಳ್ತಂಗಡಿ
October 8, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮ

ಕಳೆಂಜ: ಪ್ರಸಿದ್ದ ಶ್ರೀ ಸದಾಶಿವೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮೇ 23 ರಂದು ಭತ್ತದ ನೇಜಿ ನಾಟಿ ಕಾರ್ಯಕ್ರಮವು ಜರುಗಿತು. ಕೊಡಂಗೆಯ ಪ್ರಮುಖರಾದ ಸುಬ್ರಾಯ ಗೌಡ ಕೊಡಂಗೆ ಅವರು ಭತ್ತದ ನೇಜಿ ನಾಟಿ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ದೇವಸ್ಥಾನದಿಂದ ಗಣೇಶ ಚತುರ್ಥಿಯ ಪವಿತ್ರ ಸಂದರ್ಭದಲ್ಲಿ ವಿವಿಧ ದೇವಸ್ಥಾನ ಹಾಗೂ ದೈವಸ್ಥಾನಗಳಿಗೆ ಪೂಜೆಗಾಗಿ ಭತ್ತದ ತೆನೆಯನ್ನು (ಹೊಸತು) ಸಮರ್ಪಿಸುವ ಉದಾತ್ತ ಉದ್ದೇಶದಿಂದ ಈ ಕೃಷಿ ಕಾಯಕವನ್ನು ನಡೆಸಿಕೊಂಡು ಬರಲಾಗುತ್ತಿದೆ.


ಈ ಸಂದರ್ಭದಲ್ಲಿ ಶ್ರೀ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಶ್ರೀಧರ್ ರಾವ್, ದೇವಸ್ಥಾನದ ಸಮಿತಿ ಸದಸ್ಯ ನೀಲಯ್ಯ ಗೌಡ, ಶಾಲೆತ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹರೀಶ್ ರಾವ್ ಕಾಯಡ, ರಘು ಚಂದ್ರ ಪೂಜಾರಿ ಚಾಕೋಟೆತ್ತಡಿ ಹಾಗೂ ರಾಮಚಂದ್ರ ಗೌಡ ಕೊಳಂಬೆ, ಗ್ರಾ.ಪಂ. ಸಿಬ್ಬಂದಿ ಉಮೇಶ್, ಸೀತಾರಾಮ ಶೆಟ್ಟಿ ಕಡಮದಕೋಡಿ, ಬಾಬು ಶೆಟ್ಟಿ ಕಡಮದಕೋಡಿ, ಪ್ರಭಾಕರ ಗೌಡ ಕಾಂತ್ರೆಲು, ಮೀನಾಕ್ಷಿ ಮುಡಾಯಿ ಮಜಲು, ಗೀತಾ ಕಜೆತ್ತ ಕೋಡಿ, ವೆಂಕಪ್ಪ ಬರಮೇಲು, ಶೀಲಾವತಿ ಬರೆಂಗಾಯ ಹಾಗೂ ಗ್ರಾಮ ಪಂಚಾಯತ್‌ ಸಿಬ್ಬಂದಿ ಉಮೇಶ್ ಉಪಸ್ಥಿತರಿದ್ದರು.

Related posts

ಸುಲ್ಕೇರಿ ಶ್ರೀರಾಮ ಶಾಲೆಗೆ ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆಯವರಿಂದ 650 ಊಟದ ಸ್ಟೀಲ್ ತಟ್ಟೆ ಹಸ್ತಾಂತರ

Suddi Udaya

ಗ್ಲೋಬಲ್ ಕ್ಯಾಥೋಲಿಕ್ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ ಆಯ್ಕೆಯಾದ ಜೈಸನ್ ಪಟ್ಟೇರಿಲ್ ರವರಿಗೆ ಉಜಿರೆ ಕೆ.ಎಸ್.ಎಂ.ಸಿ.ಎ ಘಟಕದಿಂದ ಅಭಿನಂದನೆ

Suddi Udaya

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

Suddi Udaya

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 40ನೇ ಸಂಭ್ರಮಾಚರಣೆಯ ಪ್ರಯುಕ್ತ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ಸ್ವಸ್ತಿ ಸಿರಿ ಪ್ರಶಸ್ತಿ ಪ್ರದಾನ

Suddi Udaya

ಭಾರೀ ಮಳೆಯಿಂದಾಗಿ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತಕ್ಷಣದ ಸಹಾಯಕ್ಕಾಗಿ ಸಂಪರ್ಕಿಸುವಂತೆ ಶ್ರಮಿಕ‌ ಶಾಸಕರ ಕಾರ್ಯಾಲಯ ಮನವಿ

Suddi Udaya

ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ಶಿಶಿಲದಲ್ಲಿ ರೂ. 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಹರ್ಷಿ ವಾಲ್ಮೀಕಿ ಆದಿವಾಸಿ ಶಾಲೆಯ ಉದ್ಘಾಟನೆ

Suddi Udaya
error: Content is protected !!