24.8 C
ಪುತ್ತೂರು, ಬೆಳ್ತಂಗಡಿ
October 8, 2026
ಅಭಿನಂದನೆವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಇಂಟ್ರಾಕ್ಟ್ ಕ್ಲಬ್ ನ ಪದಗ್ರಹಣ

ಉಜಿರೆ :ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆ ಉಜಿರೆ ಯಲ್ಲಿ ಇಂಟ್ರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ ಕಾರ್ಯಕ್ರಮ ಜು.7ರಂದು ಜರಗಿತು.

ಬೆಳ್ತಂಗಡಿ ರೋಟರಿ ಕ್ಲಬ್ಬಿನ ಅಧ್ಯಕ್ಷರು ಶಾಲೆಯ ಹಿರಿಯ ವಿದ್ಯಾರ್ಥಿ ಆಗಿರುವ ರೋಟೋರಿಯನ್ ಶ್ರೀಧರ ಕೆ. ವಿ ದೀಪ ಬೆಳಗಿಸಿ ಉದ್ಘಾಟಿಸಿದರು ನಂತರ ಮಾತಾಡಿ ರೋಟರಿ ಕ್ಲಬ್ ನ ದೆಯೋದ್ದೇಶ ಇನ್ನೊರ್ವ ನೋವುಗಳಿಗೆ ಸ್ಪಂದಿಸುವ ಗುಣ ಸ್ವಾರ್ಥಕ್ಕಿಂತ ಸೇವೆಯೇ ಶ್ರೇಷ್ಠ ಎನ್ನುವ ಧ್ಯೇಯದೊಂದಿಗೆ ಸಮಾಜದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅದೇ ರೀತಿ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಮತ್ತು ಜೀವನದಲ್ಲಿ ಸಂಸ್ಕಾರವಿರಲಿ ಗುರು ಹಿರಿಯರಿಗೆ ಗೌರವ ನೀಡಿ ಎಂದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ರೋಟಾರಿಯನ್ ಬಿ ಸೋಮಶೇಖರ್ ಶೆಟ್ಟಿ ಪದಾಧಿಕಾರಿಗಳಾಗಿರುವ ಕನಕಶ್ರೀ, ಸ್ಪಂದನ,ಪವನ್ ಪೂಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೋಟರಿ ಕ್ಲಬ್ಬಿನ ವತಿಯಿಂದ 9 ಮತ್ತು 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಇಂಟ್ರಾಕ್ಟ್ ಕ್ಲಬ್ಬಿನ ಹೊಸ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು ಮತ್ತು ಹೊಸ ಪದಾಧಿಕಾರಿಗಳು ಪ್ರಮಾಣವಚನ ಮಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಶಾಲಾ ಮುಖೋಪಾಧ್ಯಾಯನಿ ವಿದ್ಯಾ ಕಿರಣ್ ವಿದ್ಯಾರ್ಥಿಗಳಿಗೆ ಶುಭ ಕೋರಿದರು ಅತಿಥಿಗಳ ಪರಿಚಯವನ್ನು ವಿದ್ಯಾರ್ಥಿಗಳಾದ ಶ್ರುತ ಆಳ್ವ ಮತ್ತು ಹೃತಿಕ್ ನೆರವೇರಿಸಿದರು ಸಂನಾಜ್ ಸ್ವಾಗತಿಸಿದರು ದಕ್ಷ ವಂದಿಸಿದರು ಪೂಜಾ ಮತ್ತು ಸಾನ್ವಿ ಕಾರ್ಯಕ್ರಮ ನಿರೂಪಿಸಿದರು

Related posts

ಬೆಳ್ತಂಗಡಿ ನಾರಾಯಣ ಗುರುಗಳ 172ನೇ ಗುರುಜಯಂತಿ, ಸಾಧಕರಿಗೆ ಸನ್ಮಾನ, ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

Suddi Udaya

ಬೆಳ್ತಂಗಡಿ : KAF ಕ್ರಿಯೇಟಿವ್ ಶಾಪ್ ನಲ್ಲಿ ಹಿಲಿಯಂ ಗ್ಯಾಸ್ ಬ್ಲಾಸ್ಟ್ : ಬೆಂಕಿ ಕೆನ್ನಾ ‌ಲಿಗೆ ಸುಟ್ಟು ಭಸ್ಮವಾದ ವಸ್ತುಗಳು

Suddi Udaya

ಆರಂಬೋಡಿ: ಹನ್ನೆರಡುಕವಲು ರಸ್ತೆ ಅವ್ಯವಸ್ಥೆ, ದುರಸ್ಥಿಗೆ ಗ್ರಾಮಸ್ಥರ ಆಗ್ರಹ, ಗ್ರಾಮ ಪಂಚಾಯತ್ ಗೆ ಮನವಿ

Suddi Udaya

ಉಜಿರೆ : ಶ್ರೀಧರ ನಾಯ್ಕ ನಿಧನ

Suddi Udaya

ಮರೋಡಿ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 27ನೇ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾ ಕಾರ್ಯಕ್ರಮ ಉದ್ಘಾಟನೆ

Suddi Udaya
error: Content is protected !!