32.5 C
ಪುತ್ತೂರು, ಬೆಳ್ತಂಗಡಿ
October 15, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ದೇಶದ ಪ್ರತಿಷ್ಠಿತ “ಎಮಿನೆಂಟ್ ಎಂಜಿನಿಯರ್ ಅವಾರ್ಡ್”ಗೆ ಭಾಜನರಾದ ಇಂಜಿನಿಯರ್ ಜಗದೀಶ್ ಪ್ರಸಾದ್ ಎನ್.

ಬೆಳ್ತಂಗಡಿ: Association of Consulting Civil Engineers (India) ಸಂಸ್ಥೆಯ ವತಿಯಿಂದ ಮೈಸೂರಿನಲ್ಲಿ ಮೇ 27 ನಡೆದ Silver Jubilee Celebrations ಹಾಗೂ National Awards Day ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಕೇಂದ್ರದ ಹಿರಿಯ ಸಿವಿಲ್ ಇಂಜಿನಿಯರ್ ಇಂಜಿನಿಯರ್ ಜಗದೀಶ್ ಪ್ರಸಾದ್ ಎನ್ ಅವರಿಗೆ ದೇಶದ ಪ್ರತಿಷ್ಠಿತ “ಎಮಿನೆಂಟ್ ಎಂಜಿನಿಯರ್ ಅವಾರ್ಡ್” ಪ್ರದಾನ ಮಾಡಲಾಯಿತು.

ನಿರ್ಮಾಣ ಕ್ಷೇತ್ರದಲ್ಲಿ ದೀರ್ಘಕಾಲದ ಸೇವೆ, 150ಕ್ಕೂ ಹೆಚ್ಚು ವಸತಿ ಗೃಹಗಳ ನಿರ್ಮಾಣ, ಬಹುಮಹಡಿ ಕಟ್ಟಡಗಳ ನಿರ್ಮಾಣ, ವೃತ್ತಿಪರ ಸಂಘಟನೆಗಳ ಬೆಳವಣಿಗೆಗೆ ನೀಡಿದ ಕೊಡುಗೆ, ಸಮಾಜಸೇವೆ ಹಾಗೂ ಕೃಷಿ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ACCE(I) ಬೆಳ್ತಂಗಡಿ ಕೇಂದ್ರದ ಅಧ್ಯಕ್ಷರಾದ ಇಂಜಿನಿಯರ್ ಸುರೇಶ್ ಬಂಗೇರ, ಕಾರ್ಯದರ್ಶಿ ಇಂಜಿನಿಯರ್ ಶಿಜೋ ಜೋಸೆಫ್, ಕೋಶಾಧಿಕಾರಿ ಇಂಜಿನಿಯರ್ ನಾಗೇಶ್ ಎಂ ಹಾಗೂ ಸದಸ್ಯ ಇಂಜಿನಿಯರುಗಳು ಉಪಸ್ಥಿತರಿದ್ದರು.

ಇಂಜಿನಿಯರ್ ಜಗದೀಶ್ ಪ್ರಸಾದ್ ಎನ್ ಅವರು ACCE(I) ಬೆಳ್ತಂಗಡಿ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿದ್ದು, ಅವರ ಅವಧಿಯಲ್ಲಿ ಕೇಂದ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ಜೊತೆಗೆ ACCE(I) ಪುತ್ತೂರು ಕೇಂದ್ರ ಸ್ಥಾಪನೆಗೂ ಪ್ರೋತ್ಸಾಹ ನೀಡಿದ್ದು, ಅನೇಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ತಾಂತ್ರಿಕ ವಿಚಾರಗೋಷ್ಠಿಗಳನ್ನು ಆಯೋಜಿಸಿದ್ದರು. ಕಾರ್ಯಕ್ರಮವು ಮೈಸೂರಿನ North Avenue Event Space & Banquet Hall ನಲ್ಲಿ ಭವ್ಯವಾಗಿ ಜರುಗಿತು.

Related posts

ಕಣಿಯೂರು ವಲಯದ ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya

ಕಟೀಲು ಕ್ಷೇತ್ರದಲ್ಲಿ ಶಾಸಕ ಹರೀಶ್ ಪೂಂಜರಿಗೆ ಗೌರವ ಅಭಿನಂದನೆ

Suddi Udaya

ಅಳದಂಗಡಿ ಪ್ರಾದ್ವಿ ಚಾಲೆಂಜರ್ಸ್ ಅರ್ವ ಮತ್ತು ನಮ್ಮ ಜವನೆರ್ ಹವ್ಯಾಸಿ ಕ್ರೀಡಾ ತಂಡದಿಂದ ಕೆಸರ್ದ ಗೊಬ್ಬು : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಡ: ಅರಣ್ಯ ಇಲಾಖೆ, ಗ್ರಾ.ಪಂ. ನಡ ಮತ್ತು ವಿಪತ್ತು ತಂಡದ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

Suddi Udaya

ಕರಿಮಣೇಲು: ಗಾಂಧಿನಗರ ನಿವಾಸಿ ಹಸನಬ್ಬ ನಿಧನ

Suddi Udaya

ಬೆಳ್ತಂಗಡಿ : ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ

Suddi Udaya
error: Content is protected !!