32.5 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಖಿಳರ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಅಝ್ಹಾ ಪ್ರಾರ್ಥನೆ

ಬೆಳ್ತಂಗಡಿ: ಖಿಳರ್ ಜುಮ್ಮಾ ಮಸೀದಿ ವತಿಯಿಂದ ಈದ್ ಉಲ್ ಅಝ್ಹಾ ಹಬ್ಬದ ಅಂಗವಾಗಿ ಇಂದು ಬೆಳಿಗ್ಗೆ ಸಂಭ್ರಮದ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು.

ಮಸೀದಿಯ ಖತೀಬರಾದ ಹನೀಫ್ ಫೈಝಿ ಅವರ ನೇತೃತ್ವದಲ್ಲಿ ಈದ್ ಪ್ರಾರ್ಥನೆ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈದ್ ಹಬ್ಬವು ದಾನ, ಕರುಣೆ, ತ್ಯಾಗ ಮತ್ತು ಸಹೋದರತ್ವದ ಸಂದೇಶ ಸಾರುವ ಮಹತ್ವದ ಹಬ್ಬವಾಗಿದ್ದು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಬೆಳೆಸುವ ಹಬ್ಬವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಖಿಳರ್ ಜುಮ್ಮಾ ಮಸೀದಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಗೌರವ ಅಧ್ಯಕ್ಷ ಬಿ.ಎಚ್. ಮಹಮ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಚ್. ರಝಾಕ್, ಕಾರ್ಯದರ್ಶಿಗಳಾದ ಹನೀಫ್ ವರ್ಷಾ ಹಾಗೂ ಮಹಮ್ಮದ್ ಕುದ್ರಡ್ಕ, ಕೋಶಾಧಿಕಾರಿಗಳಾದ ಫೈಝಲ್ ಐ.ಜೆ., ಮದರಸ ಸಮಿತಿ ಅಧ್ಯಕ್ಷರಾದ ಬಿ. ಶೇಕುಂಞ್ಞ, ಸಲಾತ್ ಕಮಿಟಿ ಅಧ್ಯಕ್ಷರಾದ ಹೈದರ್ ಬಿ.ಕೆ. ಸೇರಿದಂತೆ ಮಸೀದಿ ಧರ್ಮಗುರುಗಳು, ಜಮಾಅತ್ ಹಿರಿಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಪ್ರಾರ್ಥನೆ ಬಳಿಕ ಜಮಾಅತ್ ಬಾಂಧವರು ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

Related posts

ರಾಜ್ಯಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ವೆಂಚುರಾ- 2023’ ಸಮಾರೋಪ ಸಮಾರಂಭ

Suddi Udaya

ಚಾರ್ಮಾಡಿ: ಬಸ್-ಸ್ಕೂಟಿ ಡಿಕ್ಕಿ:ಓರ್ವ ಸಾವು, ಮತ್ತೋರ್ವ ಗಂಭೀರ

Suddi Udaya

ನ್ಯಾಯತರ್ಪು: ಬೃಹತ್‌ ಗಾತ್ರದ ಹೆಬ್ಬಾವು ಕೋಳಿ ಗೂಡಿನಲ್ಲಿ ಪತ್ತೆ

Suddi Udaya

ಸುಲ್ಕೇರಿ ಶ್ರೀವಿದ್ಯಾ ಸಂಸ್ಥೆಯ ಶಾಲಾ ನೂತನ ಕಟ್ಟಡ ಹಾಗೂ ನೂತನ ಶಿಶುಮಂದಿರದ ಕುಟೀರ ಉದ್ಘಾಟನೆ

Suddi Udaya

ತೆಕ್ಕಾರು ಗೋಪಾಲಕೃಷ್ಣ ದೇವರ ಬ್ರಹ್ಮಕಲಶೋತ್ಸವಕ್ಕೆ ತಾಲೂಕಿನಿಂದ ಹೊರೆ ಕಾಣಿಕೆ; ಸಮಾಲೋಚನ ಸಭೆ

Suddi Udaya

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ಅಶಕ್ತರ ಮನೆ ಬಾಗಿಲಿಗೆ ಆಧಾರ್ ಸೇವೆ

Suddi Udaya
error: Content is protected !!