27.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಎ.ಬಿ.ಕೆ ಗಲ್ಫ್ ಕಮಿಟಿ ಕುದ್ರಡ್ಕ ವಾರ್ಷಿಕ ಮಹಾಸಭೆ ಹಾಗೂ “ಮೆಹ್ಫಿಲ್-ಈ-ಗಲ್ಫ್ ಮೀಟ್”

ಬೆಳ್ತಂಗಡಿ: ಅನಿವಾಸಿ‌ ಬ್ರದರ್ಸ್ ಕುದ್ರಡ್ಕ ಎ.ಬಿ.ಕೆ ಸಾಂತ್ವನ ಕಾರುಣ್ಯ ಗಲ್ಫ್ ಸಮಿತಿ ಕುದ್ರಡ್ಕ ಇದರ ವಾರ್ಷಿಕ ಮಹಾಸಭೆ ಹಾಗೂ “ಮೆಹ್ಫಿಲ್-ಈ-ಗಲ್ಫ್ ಮೀಟ್” ಗಲ್ಫ್ ಸ್ನೇಹಿತರ ಸ್ನೇಹ-ಸಮ್ಮಿಲನ ಕಾರ್ಯಕ್ರಮ ಮೇ28 ರಂದು ಸೌದಿ ಅರೇಬಿಯಾದ ದಮ್ಮಾಮ್ “ಗಝಾಝ್” ಇಸ್ತಿರಾದಲ್ಲಿ ನಡೆಯಿತು.

ಸೌದಿ ಅರೇಬಿಯಾದ ವಿವಿಧ ಭಾಗಗಳಿಂದ ಸದಸ್ಯರು ಭಾಗವಹಿಸಿದ್ದು ಹಾಗೂ ಯುಏಯಿ, ದುಬೈ ಹಾಗೂ ಅಬುದಾಬಿ ಸೇರಿದಂತೆ ಹೆಚ್ಚಿನ ಗಲ್ಫ್ ಸದಸ್ಯರು ಆಧುನಿಕ ಆನ್ಲೈನ್ ತಂತ್ರಜ್ಞಾನ ಸಂಪರ್ಕದ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.ಕಾರ್ಯಕ್ರಮವು ಆಧ್ಯಾತ್ಮಿಕ ದ್ಸಿಕ್ರ್ ಸ್ವಲಾತ್, ತಹ್ಲೀಲ್ ಸಮರ್ಪಣೆ, ಮಜ್ಲಿಸ್, ದುವಾಃದೊಂದಿಗೆ ಪ್ರಾರಂಭಿಸಲಾಯಿತು.

ಎ.ಬಿ.ಕೆ ಗಲ್ಫ್ ಸಮಿತಿ ಇದರ ಮಾರ್ಗದರ್ಶಕ ನಿಝಾರ್ ಕೆ.ಎಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕೆ.ಎಮ್ ಕಳೆದ ಅವಧಿಯ ವರದಿ ಮಂಡಿಸಿದರು. ಸಾಮಾಜಿಕ-ಶೈಕ್ಷಣಿಕ ಸೇವೆ ಮತ್ತು ಜೀವಕಾರುಣ್ಯ ಸಾಂತ್ವನ ‌ಯಶಸ್ವಿ ಕಾರ್ಯವೈಖರಿಗಳು ಮತ್ತು ಭವಿಷ್ಯದಲ್ಲಿ ಹಮ್ಮಿಕೊಳ್ಳುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ವಾರ್ಷಿಕ ಬಜೆಟ್ ಪ್ರಸ್ತಾಪಿಸಿದರು.ಕೋಶಾಧಿಕಾರಿ ಶಂಸುದ್ದೀನ್ ಕುದ್ರಡ್ಕ ಲೆಕ್ಕಪತ್ರ ವಾಚಿಸಿದರು.ಈ ವೇಳೆ 2026-27ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಇಮ್ತಿಯಾಝ್ ಕುದ್ರಡ್ಕ, ಉಪಾಧ್ಯಕ್ಷರಾಗಿ ಸಮೀರ್ ಕೆ, ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕೆ.ಎಮ್,ಜೊತೆ ಕಾರ್ಯದರ್ಶಿಯಾಗಿ ಮುಸ್ತಫಾ ಫೈಸ್ಟಾರ್, ಕೋಶಾಧಿಕಾರಿ ಶಂಸುದ್ದೀನ್ ಕುದ್ರಡ್ಕ ಹಾಗೂ ಕ್ಯಾಬಿನೆಟ್ ಸದಸ್ಯರುಗಳನ್ನೊಳಗೊಂಡ ನೂತನ ಸಮಿತಿ ರಚಿಸಲಾಯಿತು. ಕಾರ್ಯಕ್ರಮದಲ್ಲಿ “ಮೆಹ್ಫಿಲ್-ಈ-ಗಲ್ಫ್ ಮೀಟ್ ಸ್ನೇಹಿತರ ಚರ್ಚಾಗೋಷ್ಠಿ, ಸ್ನೇಹ ಭೋಜನ ಸಭೆಗೆ ಮೆರುಗು ತಂದುಕೊಟ್ಟಿತು.

Related posts

ಪ್ರಸಾರ ಭಾರತಿ ದೂರದರ್ಶನದಲ್ಲಿ ಇಳಂತಿಲದ ಭರತನಾಟ್ಯ ಕಲಾವಿದೆ ಕೃತಿ ಕೈಲಾರ್‌ಗೆ ಮಾನ್ಯತೆ

Suddi Udaya

ಶಿರ್ಲಾಲು ಸ.ಉ.ಪ್ರಾ. ಶಾಲೆಯ ಮಕ್ಕಳಿಗೆ ವಕೀಲರು ಮುರುಳಿ ಬಿ. ರವರಿಂದ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ನಾರಾವಿ: “ಕಲ್ಕುಡ ಮಹಿಮೆ” ತುಳು ಭಕ್ತಿ ಗೀತೆ ಬಿಡುಗಡೆ

Suddi Udaya

ಇಂದಬೆಟ್ಟು-ನಾವೂರು ವಿಶ್ವ ಹಿಂದೂ ಪರಿಷತ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ರಾಜ್ಯಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟ :ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ಚಾಂಪಿಯನ್

Suddi Udaya

ಮೇಲಂತಬೆಟ್ಟು ಸ.ಹಿ.ಪ್ರಾ. ಶಾಲೆಯ ಶತಮಾನೋತ್ಸವದ ಪ್ರಯುಕ್ತ ಸ್ಮರಣ ಸಂಚಿಕೆ ಬಿಡುಗಡೆ

Suddi Udaya
error: Content is protected !!