September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಮರ್ಪಿತ ಸೇವೆಗೆ ಗೌರವದ ಬೀಳ್ಕೊಡುಗೆ – ಸಿಬ್ಬಂದಿ ಧನ್ಯ ಅವರಿಗೆ ಸೋಜಾ ಎಲೆಕ್ಟ್ರಾನಿಕ್ಸ್‌ನಿಂದ ಸನ್ಮಾನ

ಬೆಳ್ತಂಗಡಿ: ತಾಲೂಕಿನ ಗ್ರಾಹಕರ ವಿಶ್ವಾಸ ಗಳಿಸಿರುವ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಯಲ್ಲಿ ಹಲವು ಸಮಯಗಳಿಂದ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದ ಧನ್ಯ ಅವರಿಗೆ ಬೀಳ್ಕೊಡುಗೆ ಸಮಾರಂಭವು ಜು 18ರಂದು ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಬದ್ಯಾರು ಚರ್ಚ್‌ನ ಧರ್ಮಗುರು, ಫಾ ಎಲ್.ಎನ್ ಪಿಂಟೋ ಆಸ್ಪತ್ರೆಯ ಆಡಳಿತ ನಿರ್ದೇಶಕ ಫಾ.ರೋಶನ್ ಕ್ರಾಸ್ತ, ಬೆಳ್ತಂಗಡಿ ಟಿವಿಎಸ್ ಲೋಬೋ ಮೋಟಾರ್ಸ್‌ನ ಮಾಲಕ, ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೋ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಸತ್ಯ ಭಟ್, ಸುದ್ದಿ ಉದಯ ವಾರಪತ್ರಿಕೆಯ ಮುಖ್ಯಸ್ಥ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಎಸ್.ಡಿ.ಪಿ.ಐ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಎಸ್.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ಬೆಳ್ತಂಗಡಿ ಮುಳಿಯ ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ಲೋಹಿತ್ ಕುಮಾರ್ ಹಾಗೂ ಸಾಮಾಜಿಕ ಕಾರ್ಯಕರ್ತ ಶೇಖರ್ ಲಾಯಿಲ ಉಪಸ್ಥಿತರಿದ್ದು ಧನ್ಯ ಅವರ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.

ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಯ ಮಾಲಕ ಅಲ್ಫೋನ್ಸಾ ಫ್ರಾಂಕೋ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಇಂಜಿನಿಯರ್ ರಾಹುಲ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ಗುರುವಾಯನಕೆರೆ: ಅನುಮಾನಸ್ಪದ ರೀತಿಯಲ್ಲಿ ಯುವಕನೋರ್ವ ಮೃತದೇಹ ಪತ್ತೆ

Suddi Udaya

ಅಂತರರಾಷ್ಟ್ರೀಯ ಇಂಗ್ಲಿಷ್ ಒಲಿಂಪಿಯಾಡ್ 2025–26: ಎಕ್ಸೆಲ್ ಪಿಯು ಕಾಲೇಜು, ಗುರುವಾಯನಕೆರೆ ವಿದ್ಯಾರ್ಥಿಗಳ ಅದ್ಭುತ ಸಾಧನೆ: ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್

Suddi Udaya

ಖ್ಯಾತ ಕಾದಂಬರಿಕಾರ ಮತ್ತು ಲೇಖಕ ಎಸ್.ಎಲ್. ಭೈರಪ್ಪ ನಿಧನ: ಡಾ. ಹೆಗ್ಗಡೆಯವರಿಂದ ಸಂತಾಪ

Suddi Udaya

ಗೇರುಕಟ್ಟೆ: ಕಬಕದ ಇನೋವ ಕಾರು ಡಿಕ್ಕಿ: ಜೀವ ಉಳಿಸಿದ ಮಣ್ಣಿನ ದಿಣ್ಣೆ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ಮಂತ್ರಿಮಂಡಲ ಪ್ರಮಾಣವಚನ ಸಮಾರಂಭ

Suddi Udaya

ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಕುಂದಾಪುರದ ಪ.ಪೂ. ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ಅವರ ಆಯ್ಕೆಯನ್ನು ತಡೆ ಹಿಡಿದದ್ದು ಶಿಕ್ಷಕ ಸಮುದಾಯಕ್ಕೆ ಮಾಡಿದ ಅವಮಾನ: ಪ್ರತಾಪಸಿಂಹ ನಾಯಕ್

Suddi Udaya
error: Content is protected !!