24.2 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಯಕ್ಷಗಾನ ಕಲಾವಿದ ವಸಂತ ಗೌಡ ಅವರಿಗೆ ಯಕ್ಷಭಾರತಿಯಿಂದ ಗೌರವ ಸನ್ಮಾನ

ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ವಸಂತೋತ್ಸವ ಕಾರ್ಯಕ್ರಮಲ್ಲಿ 51 ವರ್ಷಗಳ ಮೇಳದ ತಿರುಗಾಟ ಪೂರೈಸಿದ ಯಕ್ಷಗಾನ ಕಲಾವಿದ ವಸಂತಗೌಡ ಅವರನ್ನು ಯಕ್ಷ ಭಾರತಿ ಕನ್ಯಾಡಿ ಬೆಳ್ತಂಗಡಿ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಹರಿದಾಸ ಗಾಂಭೀರ ಧರ್ಮಸ್ಥಳ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಜೊತೆ ಕಾರ್ಯದರ್ಶಿ ರತ್ನವರ್ಮ ಜೈನ್ , ಟ್ರಸ್ಟಿಗಳಾದ ರವೀಂದ್ರ ಶೆಟ್ಟಿ ಬಳೆಂಜ, ಹರೀಶ ಕೊಳ್ತಿಗೆ, ಆಹ್ವಾನಿತ ಸದಸ್ಯರಾದ ಚಂದ್ರಶೇಖರ ಧರ್ಮಸ್ಥಳ, ಸಂಚಾಲಕ ಮಹೇಶ ಕನ್ಯಾಡಿ , ಮೇಳದ ಪ್ರಬಂಧಕರಾದ ಗಿರೀಶ್ ಹೆಗ್ಡೆ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಮತ್ತು ಮೇಳದ ಯಜಮಾನರಾದ ಡಿ. ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಕಲಾಭಿಮಾನಿಗಳ ಸಹಕಾರದಿಂದ ಕಲಾವಿದ ವಸಂತ ಗೌಡರ ಯಕ್ಷಗಾನ ಕಲಾಯಾನದ ಸುವರ್ಣ ಸಂಭ್ರಮ ವಸಂತೋತ್ಸವ ಸಮಾರಂಭವು ಅಮೃತವರ್ಷಿಣಿ ಸಭಾಭವನದಲ್ಲಿ ಗೌರವ ಸನ್ಮಾನ, ಯಕ್ಷಗಾನದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

Related posts

ಲಯನ್ಸ್ ಕ್ಲಬ್ ವತಿಯಿಂದ ಸುಲ್ಕೇರಿ ಕೋಲ್ಯಾಯದಲ್ಲಿ ನದಿಯ ಅಣೆಕಟ್ಟಿಗೆ ಸಿಲುಕಿಕೊಂಡಿದ್ದ ಮರದ ದಿಮ್ಮಿ, ಕಸಕಡ್ಡಿಗಳ ತೆರವು ಕಾರ್ಯ

Suddi Udaya

ಮಡಂತ್ಯಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವಾರ್ಷಿಕ ಸಭೆ: ನೂತನ ಅಧ್ಯಕ್ಷರಾಗಿ ಪುನೀತ್ ಕುಮಾರ್ ಆಯ್ಕೆ

Suddi Udaya

ಗರ್ಡಾಡಿಯಲ್ಲಿ ಭಾರಿ ಮಳೆಗೆ ಮಣ್ಣು ಕುಸಿದು ಮನೆಗೆ ಹಾನಿ, ಅದೃಷ್ಟವಶಾತ್ ಪಾರಾದ ಮನೆಯವರು

Suddi Udaya

22 ವರ್ಷ ಭಾರತಮಾತೆಯ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಲಾಯಿಲದ ಅಶೋಕ್ ಕುಮಾರ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

Suddi Udaya

ಅರಸಿನಮಕ್ಕಿ: ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ವಾತ್ಸಲ್ಯ ಮನೆ ನಿರ್ಮಾಣದ ಶ್ರಮದಾನ

Suddi Udaya

ಮಿತ್ತಬಾಗಿಲು ಗ್ರಾ.ಪಂ. ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!