September 6, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮಾಲಾಡಿಯಲ್ಲಿ ಜನಸ್ಪಂದನ ಸಭೆ

ಮಾಲಾಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಮಟ್ಟದ ನೇ ಜನಸ್ಪಂದನ ಸಭೆ ಡಿ. 20 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

1.83 ಕೋಟಿ ರೂಪಾಯಿ ವೆಚ್ಚದಲ್ಲಿ ಜೆಜೆಎಂ ಕಾಮಗಾರಿ ನಡೆಯುತ್ತಿದ್ದು 4 ವರ್ಷದಿಂದ ಶೇ.25 ರಷ್ಟು ಮಾತ್ರ ಕೆಲಸವಾಗಿದೆ ಜನರು ಸದಸ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಟ್ಯಾಂಕ್ ಗಳ ಕಾಮಗಾರಿ ಹಂತ ಹಂತವಾಗಿ ನಡೆಸಿ ನಿಲ್ಲಿಸುತ್ತಿದ್ದಾರೆ. ಸಮರ್ಪಕವಾಗಿ ಕಾಮಗಾರಿ ನಡೆಸುತ್ತಿಲ್ಲ ಎಂದು ಸದಸ್ಯರೊಬ್ಬರು ಹೇಳಿದರು.

3 ನೀರಿನ ಟ್ಯಾಂಕ್ ಗಳನ್ನು ಡಿಸೆಂಬರ್ ಕೊನೆಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಪಂಚಾಯತ್ ಮಟ್ಟಕ್ಕೆ ಜೆಜೆಎಂ ಕಾಮಗಾರಿಯ ಟೆಂಡರ್ ಕರೆಯಲಾಗಿದ್ದು ರಾಜ್ಯದ ವಿವಿಧ ಭಾಗದ ಗುತ್ತಿಗೆದಾರರು ಟೆಂಡರ್ ಹಾಕಿದ್ದು ಸಮಸ್ಯೆಗೆ ಕಾರಣವಾಗಿದೆ. ಜನವರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಶಾಸಕರು ಇಲಾಖಾಧಿಕಾರಿಗಳಿಗೆ ಹೇಳಿದರು.

ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗುತ್ತಿದೆ. ಹಳೆಯ ತಂತಿ, ಕಂಬ, ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಬೇಕು ಎಂದು ಗ್ರಾಮಸ್ಥರೊಬ್ಬರು ಹೇಳಿದರು. ಗ್ರಾಮದಲ್ಲಿರುವ ಹಳೆ ತಂತಿಗಳ ಬದಲಾವಣೆಯ ಪಟ್ಟಿ ನೀಡುವಂತೆ ಜೆಇಗೆ ಸೂಚಿಸಿದರು. ಪುರಿಯ ರಸ್ತೆಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ಸೋಣಂದೂರು ಸೇತುವೆ ಕುಸಿಯುತ್ತಿದೆ ಎಂದು ಗ್ರಾಮಸ್ಥರು ಹೇಳಿದರು. ಸೇತುವೆ ನಿರ್ಮಾಣ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಪುರಿಯ-ಪುಂಜಾಲಕಟ್ಟೆ ರಸ್ತೆಯ ಅಭಿವೃದ್ದಿಯ ಕುರಿತು 25 ಕೋಟಿ ರೂಪಾಯಿ ಕ್ರೀಯಾ ಯೋಜನೆಯಲ್ಲಿ ಸೇರಿಸಲಾಗುವುದು. 15 ಕೋಟಿಗೂ ಮಿಕ್ಕಿ ಅನುದಾನ ಕಳೆದ ಅವಧಿಯಲ್ಲಿ ಮಾಲಾಡಿ ಗ್ರಾಮಕ್ಕೆ ನೀಡಲಾಗಿದೆ, ಗ್ರಾಮೀಣ ರಸ್ತೆಗಳ ನಿರ್ವಹಣೆಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಶಾಸಕರು ಮಾಹಿತಿ ನೀಡಿದರು.

ಸೋಣಂದೂರಿನಲ್ಲಿ 11 ಮುಂದಿ ಫಲಾನುಭವಿಗಳಿಗೆ 94 ಸಿ ಆಗದೇ ಇರುವುದರಿಂದ ವಸತಿ ನಿರ್ಮಿಸಲು ಅಸಾಧ್ಯವಾಗಿತ್ತಿದೆ ಎಂದು ಗ್ರಾಮಸ್ಥರು ಹೇಳಿದರು. ಗ್ರಾಮದಲ್ಲಿ ಕಡತಗಳು ಪೋಡಿಯಾಗದೆ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದರು.

30/1 ರಲ್ಲಿ ರಸ್ತೆ ಸಮೇತವಾಗಿ ಖಾಸಗಿ ವ್ಯಕ್ತಿಯೊಬ್ಬರಿಗೆ ಪಹಣಿಯಾಗಿದೆ ಇದರಿಂದ ರಸ್ತೆ ದುರಸ್ತಿಗೊಳಿಸಲು ಮುಂದಾದಗ ಅವರು ತಡೆ ನೀಡುತ್ತಿದ್ದಾರೆ. ಅಕ್ರಮ ಸಕ್ರಮ ಮಂಜೂರಾತಿ ಜಮೀನಿನಲ್ಲಿ ರಸ್ತೆಗೆ ದಾರಿ ನೀಡಬೇಕು ಎಂಬ ನಿಯಮವಿದೆ ಅದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಸಡಕ್ ಯೋಜನೆಗೆ ಮಡಂತ್ಯಾರು – ನವುಂಡ ರಸ್ತೆಯನ್ನು ಸೇರಿಸಬೇಕು ರಸ್ತೆಯ ಅಗಲೀಕರಣವಾಗಬೇಕು ಎಂದು ಗ್ರಾಮಸ್ಥರು ಹೇಳಿದರು.

ಗ್ರಾಮೀಣ ಪ್ರದೇಶದ ರಸ್ತೆಯಲ್ಲಿ ಅಂತರ ಬಿಟ್ಟು ನಿಯಮವನ್ನು ಉಲ್ಲಂಘಿಸಿ ಕಾಂಪೌಂಡ್ ರಚಿಸಿದರೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಎಲ್ಲಾ ಗ್ರಾಮ ಪಂಚಾಯತ್ ಪಿಡಿಒಗಳಿಗೆ ನಿರ್ದೇಶನ ನೀಡಬೇಕು. ಇದರಲ್ಲಿ ರಾಜಕೀಯ ರಹಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಇಓ ಅವರಿಗೆ ಸೂಚಿಸಿದರು.

ಡಿಸಿ ಮನ್ನಾ ಭೂಮಿಯನ್ನು ಸಮರ್ಪಕವಾಗಿ ಸರ್ವೇ ನಡೆಸಿ ಅರ್ಹ ಫಲಾನುಭವಿಗಳಿಗೆ ಹಂಚಬೇಕು ಎಂದು ಗ್ರಾಮಸ್ಥರು ಹೇಳಿದರು. ರಸ್ತೆ ಬದಿಯಲ್ಲಿ ಕಸ ವಿಲೇವಾರಿ ನಡೆಸುವವರು ವಿರುದ್ಧ ಕ್ರಮ ಕೈಗೊಳ್ಳಬೇಕು, ನೆಟ್ವರ್ಕ್ ಸಮಸ್ಯೆ ವ್ಯಾಪಕವಾಗಿದೆ ಎಂದು ಗ್ರಾಮಸ್ಥರು ಹೇಳಿದರು.

ಕುಡಿಯುವ ನೀರಿನ ದರ ಹೆಚ್ಚಳದಿಂದ ಕೂಲಿ ಕಾರ್ಮಿಕರಿಗೆ , ಬಡವರಿಗೆ ಬರೆ ಎಳೆದ್ದಂತಾಗಿದೆ ಎಂದು ಗ್ರಾಮಸ್ಥರು ಹೇಳಿದರು. ಸರ್ಕಾರದ ನಿರ್ದೇಶನದಂತೆ ಕ್ರಮ ವಹಿಸಲಾಗಿದೆ ಎಂದು ಪಿಡಿಒ ತಿಳಿಸಿದರು. ತೋಟಕ್ಕೆ ಕುಡಿಯುವ ನೀರನ್ನು ಬೀಡುವರ ವಿರುದ್ಧ ತಡೆಗಟ್ಟಲು ಹಾಗೂ ನೀರು ಸರಬರಾಜುನಲ್ಲಿ ನಿರ್ವಹಣೆಗೆ ಮುಂದೆ ಸರ್ಕಾರದಿಂದ ಹಣ ಬರುತ್ತದೆ, ನೀರೀನ ಬಿಲ್ ಪಾವತಿಸದವರ ವಿರುದ್ಧ ಕ್ರಮ ವಹಿಸಬೇಕು ಎಂದು ಇಓ ಹೇಳಿದರು.

ಗ್ರಾ.ಪಂ.ಅಧ್ಯಕ್ಷ ಪುನೀತ್ ಕುಮಾರ್, ತಹಶೀಲ್ದಾರ್ ಪ್ರಥ್ವಿ ಸಾನಿಕಂ ಹಾಗೂ ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಶೆಟ್ಟಿ , ಸದಸ್ಯರು, ಅಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.ಗ್ರಾ

Related posts

ಬೆಳ್ತಂಗಡಿ :ಸ್ವಸ್ತಿಕ್ ಆಟೋ ಗ್ಯಾರೇಜ್ ಗೆ ಬೆಂಕಿ, ಹೊತ್ತಿ ಉರಿದ ಆಟೋ ಮತ್ತು ಸಾಮಾಗ್ರಿ, ಲಕ್ಷಾಂತರ ನಷ್ಟ

Suddi Udaya

ಶಿಬಾಜೆ ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ವೃತಾಚರಣೆ

Suddi Udaya

ತೆಕ್ಕಾರು ಗ್ರಾಮ ಪಂಚಾಯತ್ ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಅಂಚೆ ಇಲಾಖೆಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Suddi Udaya

ಉಜಿರೆ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಮಂತ್ರಿಮಂಡಲದ ಪದಗ್ರಹಣ ಮತ್ತು ಶಾಲಾ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

Suddi Udaya

ನ.21: ಧರ್ಮಸ್ಥಳ ವಿದ್ಯುತ್ ಉಪಕೇಂದ್ರದ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!