24.9 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯರಾಜ್ಯ ಸುದ್ದಿವರದಿಸಂಘ-ಸಂಸ್ಥೆಗಳು

ಭಾರತದ ಉಪ ರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್‌ರವರಿಂದ ಸಿರಿ ಸಂಸ್ಥೆಯ ‘ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಲೋಕಾರ್ಪಣೆ

ಬೆಳ್ತಂಗಡಿ : ಹಳ್ಳಿಗಾಡಿನ ಸಾವಿರಾರು ಮಹಿಳೆಯರ ಬದುಕನ್ನು ಹಸನುಗೊಳಿಸಿ ಅವರಿಗೊಂದು ಭದ್ರವಾದ ಬದುಕನ್ನು ಕಟ್ಟಿಕೊಟ್ಟ ಬೆಳ್ತಂಗಡಿ ರೆಂಕೆದಗುತ್ತು ಎಂಬಲ್ಲಿರುವ “ಸಿರಿ” ಗ್ರಾಮೋದ್ಯೋಗ ಸಂಸ್ಥೆಗಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ “ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್”ನ್ನು ಮೇ31 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ದೀಪ ಬೆಳಗಿಸಿ, ನಾಮಫಲಕ ಅನಾವರಣ ಗೊಳಿಸಿ ಭಾರತದ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಲೋಕರ್ಪಾಣೆ ಮಾಡಿದರು.

ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಗೌರವ ಉಪಸ್ಥಿತಿ ಇದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿದ್ದರು.

ಗೌರವಾನ್ವಿತ ಅತಿಥಿಗಳಾಗಿ ಸಂಸದ ಬ್ರಿಜೇಶ್ ಚೌಟ, ವಿಧಾನಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, “ಸಿರಿ” ಸಂಸ್ಥೆಯ ಸಂಸ್ಥಾಪಕರು ಹಾಗೂ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಹೇಮಾವತಿ ವೀ. ಹೆಗ್ಗಡೆ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಉಜಿರೆಯ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್, ರಾಜ್ಯಸಭೆ ದೆಹಲಿ ಕಾರ್ಯದರ್ಶಿ ಡಾ.ಕೆ.ಎಸ್. ಸೋಮಶೇಖರ್ ಭಾಗವಹಿಸಿದ್ದರು.

ಸಿರಿ ಸಂಸ್ಥೆಯ ರಾಯಬಾರಿ ನಟ ರಮೇಶ್ ಅರವಿಂದ್, ಸಿರಿ ಸಂಸ್ಥೆಯ ನಿದೇ೯ಶಕ ರಾಜೇಶ್ ಪೈ, ಕುಸುಮ‌ ದೇವಾಡಿಗ, ಪ್ರಸನ್ನ, ಯೋಜನೆಯ ಕಾಯ೯ನಿವ೯ಕ ನಿದೇ೯ಶಕ ಅನಿಲ್ ಕುಮಾರ್ ಎಸ್. ಎಸ್ , ಶ್ರೇಯಸ್ ಕುಮಾರ್, ಎಸ್ ಡಿ ಎಂ ಆಸ್ಪತ್ರೆಯ ಕಾಯ೯ನಿವ೯ಹಕ ನಿದೇ೯ಶಕ ಎಂ.ಜನಾದ೯ನ್ ಉಪಸ್ಥಿತರಿದ್ದರು. ಕಾಯ೯ಕ್ರಮದಲ್ಲಿ ಗಣ್ಯರು, ಜನಪ್ರತಿನಿಧಿಗಳು, ಸಿರಿ ಸಂಸ್ಥೆಯ ಪದಾಧಿಕಾರಿಗಳು, ಗ್ರಾಹಕರು ಭಾಗವಹಿಸಿದ್ದರು. ಸುಪ್ರೀತಾ ಧಮ೯ಸ್ಥಳ ಇವರ ಪ್ರಾಥ೯ನೆ‌ ಬಳಿಕ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾದ೯ನ್ ಸ್ವಾಗತಿಸಿದರು. ಉಜಿರೆ ಕಾಲೇಜು ಪ್ರಾಧ್ಯಾಪಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.

Related posts

ಚೆಸ್ ಪಂದ್ಯಾಟದಲ್ಲಿ ಉಜಿರೆಯ ನ್ಯಾಚುರೋಪತಿ ಕಾಲೇಜಿಗೆ ಪ್ರಶಸ್ತಿ

Suddi Udaya

ಪೆರಾಡಿ ಸಂಘದಲ್ಲಿ ಪಶು ಆಹಾರ ಸರಬರಾಜು ಅಭಿಯಾನ

Suddi Udaya

ಕನ್ಯಾಡಿ, ಪಡ್ಪು, ಸುರ್ಯ ಪರಿಸರದಲ್ಲಿ ನೆಟ್‌ವರ್ಕ್ ಸಮಸ್ಯೆ: ಊಟಕ್ಕಿಲ್ಲದ ಉಪ್ಪಿನಕಾಯಿಂತಾದ ಪಡ್ಪು ಏರ್‌ಟೆಲ್ ಟವರ್

Suddi Udaya

ಫೆ.23: ಕುತ್ಲೂರು ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ಸಂಯುಕ್ತ ಆಶ್ರಯದಲ್ಲಿ 12ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮ್ಯಾಟ್‌ ಕಬಡ್ಡಿ ಪಂದ್ಯಾಟ ಹಾಗೂ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Suddi Udaya

ಇಳಂತಿಲ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ವೆಂಕಟ್ರಮಣ ಭಟ್, ಉಪಾಧ್ಯಕ್ಷರಾಗಿ ಉಮಾವತಿ ಆಯ್ಕೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ರಘುರಾಮ ಶೆಟ್ಟಿ, ಸಾಧನಾ ಕಾರ್ಯದರ್ಶಿಯಾಗಿ ಅಮಿತಾನಂದ ಹೆಗ್ಡೆ ಆಯ್ಕೆ

Suddi Udaya
error: Content is protected !!