24.9 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಪತ್ತನಾಜೆ ಗೆಜ್ಜೆ ಸೇವೆ ಸಮಾಪ್ತಿ

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಪತ್ತನಾಜೆ ಪ್ರಯುಕ್ತ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಮೂಡಬಿದ್ರೆ ಶಿವಾನಂದ ಶಾಂತಿಯವರ ಪೌರೋಹಿತ್ಯದಲ್ಲಿ ಮೇ 27ರಂದು ಧೂಮಾವತಿ ಮತ್ತು ದೇಯೀ ಬೈದೆದಿ ಸನ್ನಿಧಿಯಲ್ಲಿ ಗೆಜ್ಜೆ ಸೇವೆ ಮಾಡಿ ಶ್ರೀ ದೇಯಿ ಬೈದೆದಿ ಹಾಗೂ ಆದಿ ದೂಮಾವತಿಗೆ ಮಹಾ ಮಂಗಳಾರತಿ ಮಾಡುವುದರೊಂದಿಗೆ ಶ್ರೀ ಗೆಜ್ಜೆಗಿರಿ ಮೇಳದ ತಿರುಗಾಟಕ್ಕೆ ಮಂಗಳವನ್ನು ಹಾಡಲಾಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರನ್ನು ಮೇಳದ ಪ್ರಧಾನ ಸಂಚಾಲಕರಾದ ಪ್ರಮಲ್ ಕುಮಾರ್ ಕಾರ್ಕಳ ರವರ ನೇತೃತ್ವದಲ್ಲಿ ಗೌರವಿಸಲಾಯಿತು ಕ್ಷೇತ್ರದಲ್ಲಿ ನಡೆಯುತ್ತಿರುವ ದೇಯೀ ಬೈದೆತಿ ಆಯುರ್ವೇದ ಕೇಂದ್ರದ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿದ್ದು ಕ್ಷೇತ್ರದ ಭಕ್ತರು ಹೆಚ್ಚಿನ ಧನಸಹಾಯವನ್ನು ನೀಡಬೇಕೆಂದು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಜೀವ ಪೂಜಾರಿ ಬಿರುವ ರವರು ಮನವಿ ಮಾಡಿದರು.

ರವಿ ಪೂಜಾರಿ ಚಿಲಿಂಬಿ ರವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿಯ ಸಭೆ ಜರಗಿದ್ದು ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ ಬಿ ಸ್ವಾಗತಿಸಿ ವರದಿಯನ್ನು ವಾಚಿಸಿದರು. ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಗೌರವ ಮಾರ್ಗದರ್ಶಕರಾಗಿ ಗುಜರಾತ್ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷರೂ ಉದ್ಯಮಿಗಳೂ ಆಗಿರುವ ಶ್ರೀ ದಯಾನಂದ ಬೊಂಟ್ರಾ, ಹಾಗೂ ಮಹಾರಾಷ್ಟ್ರದ ನಾಸಿಕದ ಉದ್ಯಮಿಗಳಾಗಿರುವ ಶ್ರೀ ಗಂಗಾಧರ ಅಮೀನ್ ರವರನ್ನು ಗೌರವ ಮಾರ್ಗದರ್ಶಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾದ ಪೀತಾಂಬರ ಹೆರಾಜೆ, ಗಲ್ಫ್ ರಾಷ್ಟ್ರಗಳ ಸಂಚಾಲಕರೂ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿರುವ ಶ್ರೀ ಸತೀಶ್ ಪೂಜಾರಿ ಬೆಳಪು,ಶ್ರೀ ಉಲ್ಲಾಸ್ ಕೋಟ್ಯಾನ್, ಶ್ರೀ ದೀಪಕ್ ಕೋಟ್ಯಾನ್, ಶ್ರೀ ಹರೀಶ್ ಸಾಲಿಯಾನ್ ಬಜಗೋಳಿ, ಶ್ರೀ ಜಯಾನಂದ ಎಂ, ಶ್ರೀ ನಿತ್ಯಾನಂದ ನಾವರ, ಡಾ ಸಂತೋಷ್ ಕುಮಾರ್ ಬೈರಂಪಲ್ಲಿ, ಶ್ರೀ ನಾರಾಯಣ ಮಚ್ಚಿನ, ಶ್ರೀ ರಾಜೇಂದ್ರ ಚಿಲಿಂಬಿ, ಹರೀಶ್ ಪೂಜಾರಿ ಬೈಲಬರಿ, ಶ್ರೀ ನಾಗೇಶ್ ಪೂಜಾರಿ ಬೈಕಂಪಾಡಿ, ಶ್ರೀ ನವೀನ ಸುವರ್ಣ ಸಜೀಪ, ಶ್ರೀ ಜಯರಾಮ್ ಬೆಳುವಾಯಿ, ವಿಜಯ ಪೂಜಾರಿ ಸುರತ್ಕಲ್ ಹಾಗೂ ಗೆಜ್ಜೆ ಗಿರಿ ಮೇಳದ ಕಲಾವಿದರು ಹಾಜರಿದ್ದರು.

Related posts

ಕೊಕ್ಕಡ ಶ್ರೀ ಕ್ಷೇತ್ರ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ತ್ರೋಬಾಲ್ ಪಂದ್ಯಾಟದಲ್ಲಿ ಜೈ ಶ್ರೀ ರಾಮ್ ಫ್ರೆಂಡ್ಸ್ ಮುರ ತಂಡ ದ್ವಿತೀಯ ಸ್ಥಾನ

Suddi Udaya

ಕುಂಟಿನಿ ಎಸ್.ಬಿ.ಎಸ್ ಚುನಾವಣೆ: ಅಧ್ಯಕ್ಷರಾಗಿ ಮುಹಮ್ಮದ್ ಉವೈಸ್ ಆಯ್ಕೆ

Suddi Udaya

ಬೆಳ್ತಂಗಡಿ: ಸಹಾಯಕ ಪ್ರಾಧ್ಯಾಪಕಿ ಸೌಮ್ಯಲತಾ ರವರಿಗೆ ಪಿಹೆಚ್ ಡಿ ಪದವಿ

Suddi Udaya

ವರ್ಲ್ಡ್ ರೈಲ್ವೇಸ್ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಅಶ್ವಲ್ ರೈ ರಿಗೆ ಭಾರತದ ಅತ್ಯುತ್ತಮ ಆಟಗಾರ -2024 ಹಾಗೂ ಉದಯ ಕುಮಾರ್ ರಾಷ್ಟ್ರೀಯ ಪ್ರಶಸ್ತಿ

Suddi Udaya

ಮಂಗಳೂರಿನಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿ ಸಭೆ

Suddi Udaya
error: Content is protected !!