24.2 C
ಪುತ್ತೂರು, ಬೆಳ್ತಂಗಡಿ
September 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ ಉಪಪ್ರಾಂಶುಪಾಲರಾಗಿ ನಿವೃತ್ತಿಗೊಂಡ ಈಶ್ವರಿ ಕೆ ರವರಿಗೆ ಬೀಳ್ಕೊಡುಗೆ ಸಮಾರಂಭ

ಗೇರುಕಟ್ಟೆ: ಸರಕಾರಿ ಪದವಿ ಪೂರ್ವ ಕಾಲೇಜು ಗೇರುಕಟ್ಟೆ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾಗಿ ಮೇ 31ಕ್ಕೆ ವಯೋನಿವೃತ್ತಿಗೊಂಡ ಈಶ್ವರಿ ಕೆ ಅವರ ಬೀಳ್ಕೊಡುಗೆ ಸಮಾರಂಭವು ಎಸ್ಡಿಎಂಸಿ ಕಾರ್ಯಾಧ್ಯಕ್ಷ ಗೋಪಾಲಗೌಡ ಇವರ ಅಧ್ಯಕ್ಷತೆಯಲ್ಲಿ ಜರಗಿತು .

ಈಶ್ವರಿ ಕೆ ಇವರು ತಮ್ಮ ವೃತ್ತಿಜೀವನದ ಅನುಭವ ಮತ್ತು ಹಾಗೂ ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯಲ್ಲಿ ಉಪ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.

ಕಳಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಂಞ್ಞ , ಸಹಕಾರ ಭಾರತಿಯ ತಾಲೂಕು ಮಾಜಿ ಅಧ್ಯಕ್ಷ ರಾಜೇಶ್ ಪೆರ್ಮುಡ, . ನಾಳ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೇಶವ ಪೂಜಾರಿ ಉಪಸ್ಥಿತರಿದ್ದು ನಿವೃತ್ತರನ್ನು ಗೌರವಿಸಿದರು . ಕಳಿಯ ಗ್ರಾಮ ಪಂಚಾಯತ್ , ಪದವಿಪೂರ್ವ ಕಾಲೇಜು ಹಾಗೂ ಅಕ್ಷರ ದಾಸೋಹದ ಸಿಬ್ಬಂದಿಗಳು ನೆನಪಿನ ಕಾಣಿಕೆಯನ್ನು ನೀಡಿದರು.

ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಹಮ್ಮದ್ ರಿಯಾಜ್ ನೇತೃತ್ವದಲ್ಲಿ ಸಹ ಶಿಕ್ಷಕರ ಸಂಘ ಬೆಳ್ತಂಗಡಿ ಇದರ ತಾಲೂಕು ಘಟಕದ ವತಿಯಿಂದ ನಿವೃತ್ತರನ್ನು ಸನ್ಮಾನಿಸಲಾಯಿತು .

ಜ್ಯೋತಿ ಸ್ವಾಗತಿಸಿ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಸನ್ಮಾನ ಪತ್ರ ವಾಚಿಸಿದರು. ದಿನೇಶ್ ಕಾರ್ಯಕ್ರಮ ನಿರೂಪಿಸಿ ರಮ್ಯಾ ವಂದಿಸಿದರು.

Related posts

ವಾಣಿ ಪಿಯು ಕಾಲೇಜಿಗೆ ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗೀಯ ಅಧಿಕಾರಿ ಶ್ರೀಮತಿ ಸವಿತಾ ಎರ್ಮಾಳ್ ಭೇಟಿ

Suddi Udaya

ಆದಿವಾಸಿ ಸಮುದಾಯದ ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ವಿ.ಪ. ಶಾಸಕ ಬಿ.ಕೆ ಹರಿಪ್ರಸಾದ್ ರವರಿಗೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯಿಂದ ಮನವಿ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಸ್ಕೌಟ್ಸ್ ಗೈಡ್ಸ್ , ಕಬ್ಸ್ ಮತ್ತು ಬುಲ್ ಬುಲ್ಬಸ್ ಹಾಗೂ ಬನ್ನಿಸ್ ವತಿಯಿಂದ ಧ್ವಜ ದಿನಾಚರಣೆ

Suddi Udaya

ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ, ಇದರ ನೂತನ ಅಧ್ಯಕ್ಷರಾಗಿ ಮಿತ್ತಬಾಗಿಲು ಕಕ್ಕೆನೇಜಿ ಶಿವಾನಂದ ರಾವ್ ಆಯ್ಕೆ

Suddi Udaya

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ “ತನ್’ಶೀತ್ವ್” ದ‌ಅ್‌ವಾ ಕ್ಯಾಂಪ್

Suddi Udaya

ಸುಲ್ಕೇರಿಯಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷರು ಹಾಗೂ ವಲಯ ಅಧ್ಯಕ್ಷರ ಭೇಟಿ ಕಾರ್ಯಕ್ರಮ

Suddi Udaya
error: Content is protected !!