September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ದಯಾ ಸ್ಪೆಷಲ್ ಸ್ಕೂಲ್‌ನಲ್ಲಿ ಶಾಲಾ ಪುನರಾರಂಭ ಸಂಭ್ರಮ

ಬೆಳ್ತಂಗಡಿ: ಬೆಳ್ತಂಗಡಿಯ ದಯಾ ಸ್ಪೆಷಲ್ ಸ್ಕೂಲ್ ನಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪುನರಾರಂಭ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಬೇಸಿಗೆ ರಜೆಯ ಬಳಿಕ ಶಾಲೆಗೆ ಮರಳಿದ ವಿಶೇಷ ಮಕ್ಕಳನ್ನು ಶಿಕ್ಷಕರು ಹಾಗೂ ಸಿಬ್ಬಂದಿಗಳು ಆತ್ಮೀಯವಾಗಿ ಸ್ವಾಗತಿಸಿದರು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶಾಲೆಯ ನಿರ್ದೇಶಕರು, ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದ  ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ವರ್ಷದ ಶುಭಾಶಯಗಳನ್ನು ತಿಳಿಸಿದರು. ಮಕ್ಕಳಿಗೆ  ವಿಶೇಷ ಭೋಜನ ವ್ಯವಸ್ಥೆ  ಮಾಡಲಾಯಿತು.

ಶಾಲೆಯ ಸಂಚಾಲಕ ವಂ.ಫಾದರ್ ವಿನೋದ್ ರವರು ಮಾತನಾಡಿ, “ಪ್ರತಿ ಮಗುವಿನ ಸಾಮರ್ಥ್ಯವನ್ನು ಗುರುತಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಶಾಲೆ ಸದಾ ಬದ್ಧವಾಗಿದೆ” ಎಂದು ತಿಳಿಸಿದರು. ಹೊಸ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ತರಬೇತಿ ಹಾಗೂ ಚಿಕಿತ್ಸಾ ಸೇವೆಗಳನ್ನು ಒದಗಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರು, ಶಿಕ್ಷಕ ವೃಂದ, ಶಿಕ್ಷಕೇತರರು , ಹಾಗೂ‌ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

Related posts

ಡಾ. ಯಶೋವರ್ಮರ ಸ್ಮರಣಾರ್ಥ ಪರಿಸರ ನಿರ್ವಹಣಾ ಕಾರ್ಯಾಗಾರ

Suddi Udaya

ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ- ಚಂದ್ರ ಜೋಡುಕರೆ ಕೊಲ್ಲಿ ಕಂಬಳ

Suddi Udaya

ಪುಂಜಾಲಕಟ್ಟೆ ಉಳಿ ಯುವಕ ಮಂಡಲದಿಂದ ಭಜನಾ ತರಬೇತಿ ಕಾರ್ಯಗಾರ

Suddi Udaya

ಕೊಲ್ಲಿ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪದಾಧಿಕಾರಿಗಳ ಆಯ್ಕೆ

Suddi Udaya

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಜೋಯಲ್ ಮೆಂಡೋನ್ಸ ಆಯ್ಕೆ

Suddi Udaya

ಆರಂಬೋಡಿ ಸ್ಫೂರ್ತಿ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya
error: Content is protected !!